2ನೇ ಭಾರತ-ನಾರ್ಡಿಕ್ ಶೃಂಗಸಭೆ

May 04th, 07:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆನ್ಮಾರ್ಕ್ ನ ಪ್ರಧಾನಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್, ಐಸ್ ಲ್ಯಾಂಡ್ ನ ಪ್ರಧಾನಮಂತ್ರಿ ಕತ್ರಿನ್ ಜಾಕೋಬ್ಸ್ ಡೊಟ್ಟಿರ್, ನಾರ್ವೆಯ ಪ್ರಧಾನಮಂತ್ರಿ ಜೋನಸ್ ಗಹರ್ ಸ್ಟೋರ್, ಸ್ವೀಡನ್ ನ ಪ್ರಧಾನಮಂತ್ರಿ ಮ್ಯಾಗ್ಡಲೀನಾ ಆಂಡರ್ಸನ್ ಮತ್ತು ಫಿನ್ ಲ್ಯಾಂಡ್ ನ ಪ್ರಧಾನಮಂತ್ರಿ ಸನ್ನಾ ಮರಿನ್ ಅವರೊಂದಿಗೆ 2ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಡೆನ್ಮಾರ್ಕ್‌ ನ ಮಹಾರಾಣಿ ಘನತೆವೆತ್ತ 2ನೇ( II ) ಮಾರ್ಗರೆಥೆ ಅವರು ಪ್ರಧಾನಮಂತ್ರಿಯವರನ್ನು ಸ್ವಾಗತಿಸಿದರು

May 04th, 08:05 am

ಕೋಪನ್‌ ಹೇಗನ್‌ ನಲ್ಲಿರುವ ತಮ್ಮ ಅಮಾಲಿಯನ್‌ ಬೋರ್ಗ್ ಅರಮನೆಗೆ ಇಂದು ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಡೆನ್ಮಾರ್ಕ್‌ ನ ಮಹಾರಾಣಿ ಘನತೆವೆತ್ತ 2ನೇ( II ) ಮಾರ್ಗರೆಥೆ ಅವರು ಸ್ವಾಗತಿಸಿ ಬರಮಾಡಿಕೊಂಡರು.

ಕೋಪನ್ ಹ್ಯಾಗನ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು

May 03rd, 09:14 pm

ಕೋಪನ್ ಹ್ಯಾಗನ್ ನ ಬೆಲ್ಲಾ ಕೇಂದ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಗೆ ಡೆನ್ಮಾರ್ಕ್ನ ಘನತೆವೆತ್ತ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮತ್ತು ಸಂವಾದ ನಡೆಸಿದರು. ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು ಮತ್ತು ಉದ್ಯಮಿಗಳನ್ನು ಒಳಗೊಂಡ ಡೆನ್ಮಾರ್ಕ್ನಲ್ಲಿರುವ ಭಾರತೀಯ ಸಮುದಾಯದ 1000 ಕ್ಕೂ ಹೆಚ್ಚು ಸದಸ್ಯರು ಸಂವಾದ ಸಮಾರಂಭದಲ್ಲಿ ಭಾಗವಹಿಸಿದರು.

ಭಾರತ-ಡೆನ್ಮಾರ್ಕ್ ವ್ಯಾಪಾರ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ

May 03rd, 07:40 pm

ಕೋಪನ್‌ಹೇಗನ್‌ನಲ್ಲಿ ನಡೆದ ಭಾರತ-ಡೆನ್ಮಾರ್ಕ್ ಬಿಸಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ ಅವರು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿಯವರು ತಮ್ಮ ಹೇಳಿಕೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಫೋಮೋ ಅಥವಾ 'ಕಳೆದುಹೋಗುವ ಭಯ' ಎಂಬ ಪದವು ಸಾಮಾಜಿಕ ಮಾಧ್ಯಮದಲ್ಲಿ ಸೆಳೆತವನ್ನು ಪಡೆಯುತ್ತಿದೆ. ಭಾರತದ ಸುಧಾರಣೆಗಳು ಮತ್ತು ಹೂಡಿಕೆಯ ಅವಕಾಶಗಳನ್ನು ನೋಡಿದರೆ, ನಮ್ಮ ರಾಷ್ಟ್ರದಲ್ಲಿ ಹೂಡಿಕೆ ಮಾಡದಿರುವವರು ಖಂಡಿತವಾಗಿಯೂ ಅವಕಾಶವನ್ನ ಕಳೆದುಕೊಳ್ಳಬಹುದು.ಎಂದು ನಾನು ಹೇಳಬಲ್ಲೆ

ಡೆನ್ಮಾರ್ಕಿನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಇಂಗ್ಲೀಷ್ ಭಾಷಾಂತರ.

May 03rd, 07:11 pm

ಗೌರವಾನ್ವಿತ ಪ್ರಧಾನ ಮಂತ್ರಿ ಅವರೇ ಅದ್ಭುತ ಸ್ವಾಗತ ನೀಡಿದುದಕ್ಕಾಗಿ ಮತ್ತು ನನಗೆ ಹಾಗು ನನ್ನ ನಿಯೋಗಕ್ಕೆ ಡೆನ್ಮಾರ್ಕಿನಲ್ಲಿ ಆತಿಥ್ಯ ಒದಗಿಸಿದುದಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ನಿಮ್ಮ ಸುಂದರ ದೇಶಕ್ಕೆ ಇದು ನನ್ನ ಮೊದಲ ಭೇಟಿ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನನಗೆ ನಿಮ್ಮನ್ನು ಭಾರತದಲ್ಲಿ ಸ್ವಾಗತಿಸುವ ಅವಕಾಶ ದೊರಕಿತ್ತು. ಈ ಎರಡು ಭೇಟಿಗಳ ಮೂಲಕ ನಮಗೆ ನಮ್ಮ ಬಾಂಧವ್ಯಗಳಲ್ಲಿ ನಿಕಟತೆ ಮತ್ತು ಚಲನಶೀಲತೆಯನ್ನು ತರಲು ಸಾಧ್ಯವಾಗಿದೆ. ನಮ್ಮೆರಡು ದೇಶಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ಮಾತ್ರವೇ ಹಂಚಿಕೊಳ್ಳುತ್ತಿರುವುದಲ್ಲ ಕಾನೂನಿನ ಆಡಳಿತದ ಜೊತೆ ಉಭಯ ಕಡೆಗಳಲ್ಲು ಪರಸ್ಪರ ಪೂರಕವಾದಂತಹ ಶಕ್ತಿಗಳಿವೆ.

ಡೆನ್ಮಾರ್ಕ್ ನ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿಯವರು ನಡೆಸಿದ ಸಭೆಯ ಪತ್ರಿಕಾ ಪ್ರಕಟಣೆ

May 03rd, 06:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡೆನ್ಮಾರ್ಕ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

India–Denmark Joint Statement during the Visit of Prime Minister to Denmark

May 03rd, 05:16 pm

PM Modi and PM Frederiksen held extensive talks in Copenhagen. The two leaders noted with satisfaction the progress made in various areas since the visit of PM Frederiksen to India in October 2021 especially in the sectors of renewable energy, health, shipping, and water. They emphasized the importance of India- EU Strategic Partnership and reaffirmed their commitment to further strengthen this partnership.

ಡೆನ್ಮಾರ್ಕ್‌ನ ಕೋಪನ್‌ಹೇಗನ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಆತ್ಮೀಯ ಸ್ವಾಗತ

May 03rd, 02:48 pm

ಮೂರು ಯುರೋಪಿಯನ್ ರಾಷ್ಟ್ರಗಳ ಭೇಟಿಯ ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ಗೆ ಆಗಮಿಸಿದರು. ವಿಶೇಷ ಸನ್ನೆಯಲ್ಲಿ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸೆನ್ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.