ಬಾಂಗ್ಲಾದೇಶದ ಠಾಕೂರ್ ಬಾರಿಯ ಒರಾಕಂಡಿಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

March 27th, 12:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಎರಡನೇ ದಿನದಂದು, ಓರಾಕಾಂಡಿಯ ಹರಿ ಮಂದಿರದಲ್ಲಿ ಆಶೀರ್ವಾದ ಪಡೆದರು ಮತ್ತು ಗೌರವಾನ್ವಿತ ಠಾಕೂರ್ ಕುಟುಂಬದ ವಂಶಜರೊಂದಿಗೆ ಸಂವಾದ ನಡೆಸಿದರು.

ಓರಾಕಾಂಡಿಯ ಸಮುದಾಯ ಸ್ವಾಗತ ಸಮಾರಂಭದಲ್ಲಿ ಭಾಗಿಯಾಗಿ, ಹರಿ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ

March 27th, 12:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಎರಡನೇ ದಿನದಂದು, ಓರಾಕಾಂಡಿಯ ಹರಿ ಮಂದಿರದಲ್ಲಿ ಆಶೀರ್ವಾದ ಪಡೆದರು ಮತ್ತು ಗೌರವಾನ್ವಿತ ಠಾಕೂರ್ ಕುಟುಂಬದ ವಂಶಜರೊಂದಿಗೆ ಸಂವಾದ ನಡೆಸಿದರು.

ಜೆಶೋರೇಶ್ವರಿ ಕಾಳಿ ಶಕ್ತಿಪೀಠದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಮಂತ್ರಿ

March 27th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಎರಡನೇ ದಿನ, ತಾಯಿ ಕಾಳಿಯ ಆಶೀರ್ವಾದ ಪಡೆದುಕೊಂಡರು. ಪೌರಾಣಿಕ ಸಂಪ್ರದಾಯದ ರೀತ್ಯ ಇರುವ 51ಶಕ್ತಿಪೀಠಗಳಲ್ಲಿ ಒಂದಾದ ಸತ್ಕಿರಾದ ಜೆಶೋರೇಶ್ವರಿ ಕಾಳಿ ಶಕ್ತಿಪೀಠದಲ್ಲಿ ವಿಶೇಷ ಪೂಜೆಯನ್ನು ಪ್ರಧಾನಮಂತ್ರಿ ಸಲ್ಲಿಸಿದರು. ಕೈಯಲ್ಲಿ ತಯಾರಿಸಿದ ಚಿನ್ನದ ಲೇಪನ ಮಾಡಿದ ಬೆಳ್ಳಿಯ ಮುಕುಟವನ್ನು ಕಾಳಿಕಾ ದೇವಿಗೆ ಪ್ರಧಾನ ಮಂತ್ರಿಯವರು ಸಮರ್ಪಿಸಿದರು. ಈ ಮುಕುಟವನ್ನು ಸ್ಥಳೀಯ ಕಲಾವಿದರು ಮೂರುವಾರಗಳ ಸಮಯದಲ್ಲಿ ಸಿದ್ಧಪಡಿಸಿದ್ದರು.

ಭಾರತದ ಪ್ರಧಾನ ಮಂತ್ರಿ ಅವರ ಬಾಂಗ್ಲಾದೇಶ ಭೇಟಿ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಹೇಳಿಕೆ

March 27th, 09:18 am

ಭಾರತದ ಪ್ರಧಾನ ಮಂತ್ರಿ ಅವರ ಬಾಂಗ್ಲಾದೇಶ ಭೇಟಿ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಹೇಳಿಕೆ

ಬಾಪು - ಬಂಗಬಂಧು ಡಿಜಿಟಲ್ ವಸ್ತುಪ್ರದರ್ಶನ ಉದ್ಘಾಟಿಸಿದ ಪ್ರಧಾನಮಂತ್ರಿ

March 26th, 06:00 pm

ತಮ್ಮ ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಭಾಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರೊಂದಿಗೆ ಜಂಟಿಯಾಗಿ ಬಾಪು ಮತ್ತು ಬಂಗಬಂಧು ಕುರಿತಾದ ಡಿಜಿಟಲ್ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಬಾಪು ಮತ್ತು ಬಂಗಬಂಧು ಇಬ್ಬರೂ ದಕ್ಷಿಣ ಏಷ್ಯಾ ವಲಯದ ಅನುಕರಣೀಯ ವ್ಯಕ್ತಿತ್ವದವರಾಗಿದ್ದು, ಅವರ ಚಿಂತನೆಗಳು ಮತ್ತು ಸಂದೇಶಗಳು ಜಗತ್ತಿನಾದ್ಯಂತ ಮಾರ್ದನಿಸುತ್ತಿವೆ.

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಬಾಂಗ್ಲಾದೇಶದ ವಿದೇಶಾಂಗ ಸಚಿವರು

March 26th, 05:03 pm

ಎರಡು ದಿನಗಳ ಐತಿಹಾಸಿಕ ಬಾಂಗ್ಲಾದೇಶದ ಭೇಟಿಯ ವೇಳೆ ಪ್ರಧಾನಮಂತ್ರಿಯವರನ್ನು ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ. ಎ.ಕೆ. ಅಬ್ದುಲ್ ಮೊಮೆನ್ ಅವರು ಭೇಟಿ ಮಾಡಿದ್ದರು. ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ಭ್ರಾತೃತ್ವದ ಬಾಂಧವ್ಯಗಳನ್ನು ಗಾಢಗೊಳಿಸುವ ಮತ್ತು ಸಾರ್ವಭೌಮತ್ವ, ಸಮಾನತೆ, ನಂಬಿಕೆ ಮತ್ತು ತಿಳಿವಳಿಕೆ ಆಧಾರದ ಮೇಲೆ ಎಲ್ಲವನ್ನೂ ಒಳಗೊಂಡ ಸಹಭಾಗಿತ್ವದ ಬಲವರ್ಧನೆ ಕುರಿತಂತೆ ಚರ್ಚಿಸಿದರು.

ಬಾಂಗ್ಲಾದೇಶದ ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಿದ ಪ್ರಧಾನಿ

March 26th, 03:21 pm

ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಾಂಗ್ಲಾದೇಶದ ನಾನಾ ರಾಜಕೀಯ ಪಕ್ಷಗಳಿಗೆ ಸೇರಿದ ಪ್ರತಿಪಕ್ಷಗಳ ನಾಯಕರನ್ನು ಭೇಟಿ ಮಾಡಿದರು ಮತ್ತು ಸಮಾಲೋಚನೆ ನಡೆಸಿದರು. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಕುರಿತು ನಾನಾ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.