ಸಿಡ್ನಿಯಲ್ಲಿ ವ್ಯಾಪಾರ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಪ್ರಧಾನಿಯವರ ಭಾಷಣ
May 24th, 04:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಉನ್ನತ ಕಂಪನಿಗಳ ಸಿಇಒಗಳೊಂದಿಗೆ ವ್ಯಾಪಾರ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಪ್ರಧಾನಿಯವರನ್ನು ಭೇಟಿ ಮಾಡಿದ ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕರು
May 24th, 02:48 pm
ವಿರೋಧ ಪಕ್ಷದ ನಾಯಕರಾದ ಶ್ರೀ ಪೀಟರ್ ಡಟ್ಟನ್ ಅವರು 24 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಆಸ್ಟ್ರೇಲಿಯದ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 24th, 10:03 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅಡ್ಮಿರಾಲ್ಟಿ ಹೌಸ್‌ನಲ್ಲಿ ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಿ ಶ್ರೀ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿ ಹೇಳಿಕೆಯ ಇಂಗ್ಲೀಷ್ ಅನುವಾದ
May 24th, 06:41 am
ನನ್ನ ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತಿಥ್ಯ ಮತ್ತು ಗೌರವಕ್ಕಾಗಿ ನಾನು ಆಸ್ಟ್ರೇಲಿಯದ ಜನರಿಗೆ ಮತ್ತು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುಸುತ್ತೇನೆ. ನನ್ನ ಸ್ನೇಹಿತರಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದ ಎರಡು ತಿಂಗಳೊಳಗೆ ನಾನು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಆರನೇ ಸಭೆಯಾಗಿದೆ.ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
May 23rd, 08:54 pm
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮತ್ತು ನನ್ನ ಆತ್ಮೀಯ ಸ್ನೇಹಿತರಾದ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೇ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಘನತೆವೆತ್ತ ಸ್ಕಾಟ್ ಮಾರಿಸನ್ ಅವರೇ, ನ್ಯೂ ಸೌತ್ ವೇಲ್ಸ್ ಪ್ರಧಾನಿ ಕ್ರಿಸ್ ಮಿನ್ಸ್ ಅವರೇ, ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರೇ, ಸಂವಹನ ಸಚಿವ ಮಿಚೆಲ್ ರೋಲ್ಯಾಂಡ್ ಅವರೇ, ಇಂಧನ ಸಚಿವರಾದ ಕ್ರಿಸ್ ಬೋವೆನ್ ಅವರೇ, ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರೇ, ಸಹಾಯಕ ವಿದೇಶಾಂಗ ಸಚಿವ ಟಿಮ್ ವ್ಯಾಟ್ಸ್ ಅವರೇ, ಇಲ್ಲಿ ಹಾಜರಿರುವ ನ್ಯೂ ಸೌತ್ ವೇಲ್ಸ್ ಸಂಪುಟದ ಗೌರವಾನ್ವಿತ ಸದಸ್ಯರೇ, ಪಾರ್ರಮಟ್ಟದ ಸಂಸತ್ ಸದಸ್ಯ ಡಾ. ಆಂಡ್ರ್ಯೂ ಚಾರ್ಲ್ಟನ್ ಅವರೇ, ಇಲ್ಲಿ ಉಪಸ್ಥಿತರಿರುವ ಆಸ್ಟ್ರೇಲಿಯಾದ ಸಂಸತ್ ಸದಸ್ಯರು, ಮೇಯರ್‌ಗಳು, ಉಪ ಮೇಯರ್‌ಗಳು, ಕೌನ್ಸಿಲರ್‌ಗಳೇ ಮತ್ತು ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿರುವ ಆಸ್ಟ್ರೇಲಿಯಾ ನಿವಾಸಿ ಭಾರತೀಯ ವಲಸಿಗರೇ! ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು!ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿಯವರ ಸಂವಾದ
May 23rd, 01:30 pm
ಸಿಡ್ನಿಯ ಕುಡೋಸ್ ಬ್ಯಾಂಕ್ ಅರೆನಾದಲ್ಲಿ 2023ರ ಮೇ 23ರಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಆಂಥೋನಿ ಅಲ್ಬನೀಸ್ ಅವರೊಟ್ಟಿಗೆ ಪ್ರಧಾನಿ ಮೋದಿಯವರು ಭಾರತೀಯ ಸಮುದಾಯದ ಬೃಹತ್ ಸಭಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಮತ್ತು ಸಂವಾದ ನಡೆಸಿದರು.ಆಸ್ಟ್ರೇಲಿಯಾದ ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 23rd, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಡ್ನಿಯಲ್ಲಿ ಪ್ರತ್ಯೇಕ ಸಭೆಗಳಲ್ಲಿ ಆಸ್ಟ್ರೇಲಿಯಾದ ಹಲವಾರು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿದರು. ಈ ವ್ಯಕ್ತಿಗಳೆಂದರೆ:ಹ್ಯಾನ್‌ಕಾಕ್ ಪ್ರಾಸ್ಪೆಕ್ಟಿಂಗ್ ಗ್ರೂಪ್, ರಾಯ್ ಹಿಲ್, ಎಸ್. ಕಿಡ್‌ಮ್ಯಾನ್ ಮತ್ತು ಕಂಪನಿಯ ಕಾರ್ಯಕಾರಿ ಅಧ್ಯಕ್ಷೆ ಶ್ರೀಮತಿ ಗಿನಾ ರೈನ್‌ಹಾರ್ಟ್ ಎಒ, ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 23rd, 09:08 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹ್ಯಾನ್‌ಕಾಕ್ ಪ್ರಾಸ್ಪೆಕ್ಟಿಂಗ್ ಗ್ರೂಪ್, ರಾಯ್ ಹಿಲ್, ಎಸ್. ಕಿಡ್‌ಮ್ಯಾನ್ ಮತ್ತು ಕಂಪನಿಯ ಕಾರ್ಯಕಾರಿ ಅಧ್ಯಕ್ಷೆ ಶ್ರೀಮತಿ ಗಿನಾ ರೈನ್‌ಹಾರ್ಟ್ ಎಒ ಅವರನ್ನು ಭೇಟಿಯಾದರು.ಆಸ್ಟ್ರೇಲಿಯನ್ ಸೂಪರ್ ನ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಪಾಲ್ ಸ್ಕ್ರೋಡರ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 23rd, 09:01 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಆಸ್ಟ್ರೇಲಿಯನ್ ಸೂಪರ್ ನ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಪಾಲ್ ಶ್ರೋಡರ್ ಅವರನ್ನು ಭೇಟಿಯಾದರು.ಫೋರ್ಟೆಸ್ಕ್ಯೂ ಮೆಟಲ್ಸ್ ಗ್ರೂಪ್ ಮತ್ತು ಫೋರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್ ನ ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ. ಆಂಡ್ರ್ಯೂ ಫಾರೆಸ್ಟ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 23rd, 08:58 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಫೋರ್ಟೆಸ್ಕ್ಯೂ ಮೆಟಲ್ಸ್ ಗ್ರೂಪ್ ಮತ್ತು ಫೋರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ಆಸ್ಟ್ರೇಲಿಯಾದ ಪ್ರಮುಖ ಕೈಗಾರಿಕೋದ್ಯಮಿ ಡಾ. ಆಂಡ್ರ್ಯೂ ಫಾರೆಸ್ಟ್ ಅವರನ್ನು ಭೇಟಿ ಮಾಡಿದರು.PM Modi arrives in Sydney, Australia
May 22nd, 05:43 pm
After the historic visit to Papua New Guinea, PM Modi arrived in Sydney, Australia for a bilateral visit. During the two-day visit, PM Modi will hold talks with the Prime Minister of Australia H.E Anthony Albanese, and other leaders. He will also address the community program hosted and attended by the members of the Indian diaspora at the Qudos Bank Arena in Sydney, Australiaಜಪಾನ್, ಪಪುವಾ ನ್ಯೂ ಗಿನಿಯಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಅಧಿಕೃತ ಭೇಟಿಗಾಗಿ ನಿರ್ಗಮಿಸುವ ಮುನ್ನ ಭಾರತದಲ್ಲಿ ಪ್ರಧಾನಿಯವರ ಹೇಳಿಕೆ
May 19th, 08:38 am
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ಕಿಶಿಡಾ ಅವರನ್ನು ಭಾರತ-ಜಪಾನ್ ಶೃಂಗಸಭೆ ಹಿನ್ನೆಲೆಯಲ್ಲಿ ಮತ್ತೆ ಭೇಟಿಯಾಗಲು ಸಂತೋಷವಾಗುತ್ತಿದೆ. ಭಾರತವು ಈ ವರ್ಷ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವುದರಿಂದ, ಈ ಜಿ-7 ಶೃಂಗಸಭೆಯಲ್ಲಿ ನನ್ನ ಉಪಸ್ಥಿತಿ ವಿಶೇಷವಾಗಿ ಅರ್ಥಪೂರ್ಣವಾಗಿದೆ. ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಸಾಮೂಹಿಕವಾಗಿ ಪರಿಹರಿಸುವ ಅಗತ್ಯದ ಬಗ್ಗೆ ಜಿ-7 ರಾಷ್ಟ್ರಗಳು ಮತ್ತು ಇತರ ಆಹ್ವಾನಿತ ಪಾಲುದಾರರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ಹಿರೋಷಿಮಾ ಜಿ-7 ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ನಾಯಕರೊಂದಿಗೆ ನಾನು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದೇನೆ.