ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾಗಿಯಾದ ಭಾರತೀಯ ಆಟಗಾರರೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಇಂಗ್ಲಿಷ್ ಅವತರಣಿಕೆ
August 13th, 11:31 am
ಎಲ್ಲರೊಂದಿಗೂ ಮಾತನಾಡುವುದು ನನಗೆ ತುಂಬಾ ಆಸಕ್ತಿದಾಯಕವಾದರೂ, ಪ್ರತಿಯೊಬ್ಬರ ಜೊತೆ ಮಾತನಾಡಲು ಸಾಧ್ಯವಾಗದು. ಆದರೆ ನಿಮ್ಮಲ್ಲಿ ಅನೇಕರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕದಲ್ಲಿರಲು ನನಗೆ ಅವಕಾಶ ದೊರೆಕಿತ್ತು ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ನಿಮ್ಮೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆತಿದೆ. ಆದರೆ ಕುಟುಂಬದ ಸದಸ್ಯನಾಗಿ ನನ್ನ ನಿವಾಸಕ್ಕೆ ಬರಲು ನೀವು ಸಮಯ ಮಾಡಿಕೊಂಡುದಕ್ಕಾಗಿ ನನಗೆ ಬಹಳ ಸಂತೋಷವಾಗಿದೆ. ನಿಮ್ಮ ಸಾಧನೆಗಳ ಯಶಸ್ಸಿನ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವುದರಿಂದ, ನಾನು ಸಹ ನಿಮ್ಮೊಂದಿಗೆ ಸಂಬಂಧ ಹೊಂದಲು ಹೆಮ್ಮೆಪಡುತ್ತೇನೆ. ನಿಮಗೆಲ್ಲರಿಗೂ ಇಲ್ಲಿ ಸ್ವಾಗತ.2022ರ ಕಾಮನ್ ವೆಲ್ತ್ ಗೇಮ್ಸ್ ನ ಭಾರತೀಯ ತಂಡವನ್ನು ಸನ್ಮಾನಿಸಿದ ಪ್ರಧಾನಮಂತ್ರಿ
August 13th, 11:30 am
2022ರ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯೂಜಿ) ನಲ್ಲಿ ಪಾಲ್ಗೊಂಡ ಭಾರತೀಯ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ಸನ್ಮಾನಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು ಭಾಗವಹಿಸಿದ್ದರು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಮತ್ತು ಮಾಹಿತಿ ಹಾಗು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಉಪಸ್ಥಿತರಿದ್ದರು.2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು.
July 30th, 11:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ 2022ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರನ್ನು ಅಭಿನಂದಿಸಿದ್ದಾರೆ.ಮಣಿಪುರದ ಸರ್ವತೋಮುಖ ಅಭಿವೃದ್ಧಿ ಬಿಜೆಪಿಯ ಆದ್ಯತೆ: ಪ್ರಧಾನಿ ಮೋದಿ
March 01st, 11:36 am
ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರದಲ್ಲಿ ವರ್ಚುವಲ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಣಿಪುರವನ್ನು ರೂಪಿಸಿದ ಮತ್ತು ವೈಭವೀಕರಿಸಿದ ಪ್ರಮುಖ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಮೊದಲ ಹಂತದ ಚುನಾವಣೆಯಲ್ಲಿ ಮಣಿಪುರ ಅಭಿವೃದ್ಧಿಗೆ ಹೇಗೆ ಮತ ಹಾಕುತ್ತಿದೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ ಎಂದು ಪ್ರಧಾನಿ ಮೋದಿ ಜನರಿಗೆ ತಿಳಿಸಿದರು.ಮಣಿಪುರದಲ್ಲಿ ವರ್ಚುವಲ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು
March 01st, 11:31 am
ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರದಲ್ಲಿ ವರ್ಚುವಲ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಣಿಪುರವನ್ನು ರೂಪಿಸಿದ ಮತ್ತು ವೈಭವೀಕರಿಸಿದ ಪ್ರಮುಖ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಮೊದಲ ಹಂತದ ಚುನಾವಣೆಯಲ್ಲಿ ಮಣಿಪುರ ಅಭಿವೃದ್ಧಿಗೆ ಹೇಗೆ ಮತ ಹಾಕುತ್ತಿದೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ ಎಂದು ಪ್ರಧಾನಿ ಮೋದಿ ಜನರಿಗೆ ತಿಳಿಸಿದರು.ಮಣಿಪುರವು ಪೂರ್ವ ಏಷ್ಯಾದ ಇತರ ಭಾಗಗಳೊಂದಿಗೆ ವ್ಯಾಪಾರ ಮಾಡಲು ಹೆಬ್ಬಾಗಿಲು ಆಗುತ್ತಿದೆ: ಇಂಫಾಲ್‌ನಲ್ಲಿ ಪ್ರಧಾನಿ ಮೋದಿ
February 22nd, 10:45 am
ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರದ ಇಂಫಾಲದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಣಿಪುರವು ಕಳೆದ ಒಂದು ತಿಂಗಳಲ್ಲಿ ತನ್ನ ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸಿದೆ ಎಂದು ಹೈಲೈಟ್ ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕಾಂಗ್ರೆಸ್ ಆಡಳಿತದ ದಶಕಗಳಲ್ಲಿ ಮಣಿಪುರವು ಅಸಮಾನತೆ ಮತ್ತು ಅಸಮತೋಲಿತ ಅಭಿವೃದ್ಧಿಯನ್ನು ಮಾತ್ರ ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ್ ಮಣಿಪುರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ.ಮಣಿಪುರದ ಇಂಫಾಲದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
February 22nd, 10:41 am
ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರದ ಇಂಫಾಲದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಣಿಪುರವು ಕಳೆದ ಒಂದು ತಿಂಗಳಲ್ಲಿ ತನ್ನ ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸಿದೆ ಎಂದು ಹೈಲೈಟ್ ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕಾಂಗ್ರೆಸ್ ಆಡಳಿತದ ದಶಕಗಳಲ್ಲಿ ಮಣಿಪುರವು ಅಸಮಾನತೆ ಮತ್ತು ಅಸಮತೋಲಿತ ಅಭಿವೃದ್ಧಿಯನ್ನು ಮಾತ್ರ ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ್ ಮಣಿಪುರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ.ಮಣಿಪುರದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
January 04th, 09:45 am
ಕಾರ್ಯಕ್ರಮದಲ್ಲಿ ಹಾಜರಿರುವ ಮಣಿಪುರ ರಾಜ್ಯಪಾಲ ಗಣೇಶನ್ ಜೀ, ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಜೀ, ಉಪ ಮುಖ್ಯಮಂತ್ರಿ ವೈ. ಜೋಯ್ ಕುಮಾರ್ ಸಿಂಗ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಭುಪೇಂದ್ರ ಯಾದವ್ ಜೀ, ಮತ್ತು ರಾಜಕುಮಾರ್ ರಂಜನ್ ಸಿಂಗ್ ಜೀ, ಮಣಿಪುರ ಸರಕಾರದಲ್ಲಿ ಸಚಿವರಾಗಿರುವ ಬಿಶ್ವಜಿತ್ ಸಿಂಗ್ ಜೀ, ಲೋಸೀ ದಿಕೋ ಜೀ, ಲೆಟ್ಪಾವೋ ಹಾವೋಕಿಪ್ ಜೀ, ಅವಾಂಗ್ಬೋ ನೆವ್ಮಾಯಿ ಜೀ, ಎಸ್. ರಾಜೆನ್ ಸಿಂಗ್ ಜೀ, ವುಂಗ್ಜಗೀನ್ ವಾಲ್ಟೇ ಜೀ, ಸತ್ಯಬ್ರತ್ ಸಿಂಗ್ ಜೀ, ಮತ್ತು ಒ.ಲುಕಿಯೋ ಸಿಂಗ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳೇ, ಶಾಸಕರೇ, ಜನ ಪ್ರತಿನಿಧಿಗಳೇ, ಮತ್ತು ಮಣಿಪುರದ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ! ಖುರುಂಜರಿಮಣಿಪುರದ ಇಂಫಾಲದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿದ ಪ್ರಧಾನಮಂತ್ರಿ
January 04th, 09:44 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಮಣಿಪುರದ ಇಂಫಾಲದಲ್ಲಿ ಸುಮಾರು 1850 ಕೋಟಿ ರೂ. ಮೌಲ್ಯದ 13 ಹೊಸ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 2950 ಕೋಟಿ ರೂ. ಮೊತ್ತದ 9 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ರಸ್ತೆ ಮೂಲಸೌಕರ್ಯ, ಕುಡಿಯುವ ನೀರು ಪೂರೈಕೆ, ಆರೋಗ್ಯ, ನಗರಾಭಿವೃದ್ಧಿ, ವಸತಿ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದವುಗಳಾಗಿವೆ.ವಿಶ್ವ ಭಾರ ಎತ್ತುವ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಛಾನುಗೆ ಶುಭ ಕೋರಿದ ಪ್ರಧಾನಿ
November 30th, 03:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಭಾರ ಎತ್ತುವ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ಶ್ರೀಮತಿ ಮೀರಾ ಬಾಯಿ ಛಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.