ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರಲ್ಲಿ ಭಾಗವಹಿಸುವವರೊಂದಿಗೆ ಡಿಸೆಂಬರ್ 11ರಂದು ಸಂವಾದ ನಡೆಸಲಿರುವ ಪ್ರಧಾನಮಂತ್ರಿ
December 09th, 07:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 11 , 2024 ರಂದು ಸಂಜೆ 4:30 ಗಂಟೆಗೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024 ರ ಗ್ರಾಂಡ್ ಫಿನಾಲೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಯುವ ನವೋದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ . ಗ್ರ್ಯಾಂಡ್ ಫಿನಾಲೆಯಲ್ಲಿ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡಗಳು ಭಾಗವಹಿಸುತ್ತವೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಅವರನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನಮಂತ್ರಿ
August 16th, 02:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಅವರನ್ನು ಭಾರತಕ್ಕೆ ಸ್ವಾಗತಿಸಿದರು. ಶ್ರೀ ನರೇಂದ್ರ ಮೋದಿ ಅವರು ಡಾ.ತೆದ್ರೋಸ್ ಅವರನ್ನು “ತುಳಸಿ ಭಾಯ್ ‘ ಎಂದು ಕರೆಯುತ್ತಾರೆ, ಪ್ರಧಾನಮಂತ್ರಿ ಅವರು ಕಳೆದ ಸಲ ಮಹಾನಿರ್ದೇಶಕರನ್ನು ಭೇಟಿ ಮಾಡಿದ್ದ ವೇಳೆ ಈ ಹೆಸರು ನೀಡಿದ್ದರು.