ನೇಪಾಳದಲ್ಲಿ 2566 ನೇ ಬುದ್ಧ ಜಯಂತಿ ಮತ್ತು ಲುಂಬಿನಿ ದಿನ 2022 ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಭಾಷಾಂತರ.
May 16th, 09:45 pm
ಈ ಹಿಂದಿನಂತೆ ವೈಶಾಖ ಪೂರ್ಣಿಮೆಯ ದಿನದಂದು ನನಗೆ ಭಗವಾನ್ ಬುದ್ಧ ಅವರಿಗೆ ಸಂಬಂಧಪಟ್ಟ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಅವರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳು ಲಭಿಸುತ್ತಿವೆ. ಮತ್ತು ಇಂದು ನನಗೆ ಭಾರತದ ಮಿತ್ರ ರಾಷ್ಟ್ರವಾದ ನೇಪಾಳದಲ್ಲಿರುವ ಭಗವಾನ್ ಬುದ್ಧನ ಜನ್ಮಸ್ಥಳ ಲುಂಬಿನಿಗೆ ಭೇಟಿ ನೀಡುವ ಸದವಕಾಶ ದೊರಕಿದೆ. ಕೆಲ ಸಮಯದ ಹಿಂದೆ ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡುವ ಅವಕಾಶ ದೊರಕಿರುವುದು ನನಗೆ ಮರೆಯಲಾಗದ ಸಂಗತಿ. ಭಗವಾನ್ ಬುದ್ಧ ಹುಟ್ಟಿದ ಸ್ಥಳದಲ್ಲಿರುವ ಶಕ್ತಿ, ಅಲ್ಲಿರುವ ಜಾಗೃತ ಪ್ರಜ್ಞೆ, ಮನಃಶಾಂತಿ ಒಂದು ವಿಭಿನ್ನ ಆನುಭವ. ಈ ಸ್ಥಳದಲ್ಲಿ 2014 ರಲ್ಲಿ ನನಗೆ ನೀಡಲಾದ ಮಹಬೋಧಿ ವೃಕ್ಷದ ಸಸಿ ಈಗ ಮರವಾಗಿ ಬೆಳೆಯುತ್ತಿರುವುದನ್ನು ನೋಡುವುದಕ್ಕೆ ನನಗೆ ಅಪಾರ ಸಂತೋಷವಾಗುತ್ತಿದೆ. .ನೇಪಾಳದ ಲುಂಬಿನಿಯಲ್ಲಿ ಬುದ್ಧ ಜಯಂತಿ ಆಚರಣೆ
May 16th, 03:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದ ಲುಂಬಿನಿಯಲ್ಲಿರುವ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ ಮತ್ತು ಧ್ಯಾನ ಭವನದಲ್ಲಿ ನಡೆದ 2566ನೇ ಬುದ್ಧ ಜಯಂತಿ ಆಚರಣೆಯಲ್ಲಿ ಭಾಗವಹಿಸಿದರು. ಅವರೊಂದಿಗೆ ನೇಪಾಳದ ಪ್ರಧಾನ ಮಂತ್ರಿ ಗೌರವಾನ್ವಿತ ಶೇರ್ ಬಹದ್ದೂರ್ ದೇವುಬಾ ಮತ್ತು ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ ಕೂಡ ಇದ್ದರು.ನೇಪಾಳದ ಲುಂಬಿನಿಯಲ್ಲಿರುವ ಮಾಯಾದೇವಿ ದೇವಾಲಯಕ್ಕೆ ಪ್ರಧಾನಮಂತ್ರಿಗಳ ಭೇಟಿ
May 16th, 11:59 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 16ರಂದು ತಮ್ಮ ಒಂದು ದಿನದ ಲುಂಬಿನಿ ಭೇಟಿಯ ಭಾಗವಾಗಿ ನೇಪಾಳದ ಲುಂಬಿನಿಯಲ್ಲಿರುವ ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಿದರು. ಪ್ರಧಾನಮಂತ್ರಿಯವರೊಂದಿಗೆ ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಶೇರ್ ಬಹದ್ದೂರ್ ದೇವುಬಾ ಮತ್ತು ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ ಕೂಡ ಇದ್ದರು.