ಪ್ರಧಾನಮಂತ್ರಿಗಳಿಂದ ಆಸ್ಟ್ರಿಯಾದ ಭಾರತ ಶಾಸ್ತ್ರಜ್ಞರ ಭೇಟಿ
July 10th, 09:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಲ್ವರು ಆಸ್ಟ್ರಿಯನ್ ಭಾರತೀಯ ಶಾಸ್ತ್ರಜ್ಞರು ಮತ್ತು ಭಾರತೀಯ ಇತಿಹಾಸ ಮತ್ತು ಚಿಂತನೆಯ ವಿದ್ವಾಂಸರನ್ನು ಭೇಟಿ ಮಾಡಿದರು. ಬೌದ್ಧ ತತ್ವಜ್ಞಾನಿ ಮತ್ತು ಭಾಷಾ ಶಾಸ್ತ್ರಜ್ಞರಾದ ಡಾ. ಬಿರ್ಗಿಟ್ ಕೆಲ್ಲೆನರ್; ಆಧುನಿಕ ದಕ್ಷಿಣ ಏಷ್ಯಾ ವಿದ್ವಾಂಸ ಪ್ರೊಫೆಸರ್ ಮಾರ್ಟಿನ್ ಗೆನ್ಸ್ಲೆ; ವಿಯೆನ್ನಾ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಪ್ರೊಫೆಸರ್ ಡಾ.ಬೋರಯಿನ್ ಲಾರಿಯೋಸ್; ಮತ್ತು ವಿಯೆನ್ನಾ ವಿಶ್ವವಿದ್ಯಾಲಯದ ಭಾರತ-ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕರಿನ್ ಪ್ರೆಸೆಂಡಾಜ಼್ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.