ವೆಂಕಯ್ಯ ಅವರ ಜೀವನ ಪಯಣ ಯುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿದೆ: ಪ್ರಧಾನಿ ಮೋದಿ
June 30th, 12:05 pm
ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ 75 ನೇ ಹುಟ್ಟುಹಬ್ಬದ ಮುನ್ನಾದಿನದಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರ ಜೀವನ ಮತ್ತು ಪ್ರಯಾಣದ ಕುರಿತು ಮೂರು ಪುಸ್ತಕಗಳನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನಚರಿತ್ರೆ ಮತ್ತು ಅವರ ಜೀವನಾಧಾರಿತ ಇತರ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಸಂತಸ ವ್ಯಕ್ತಪಡಿಸಿದರು. ಈ ಪುಸ್ತಕಗಳು ಜನರಿಗೆ ಸ್ಫೂರ್ತಿಯ ಮೂಲವಾಗಲಿದ್ದು, ರಾಷ್ಟ್ರದ ಸೇವೆಗೆ ಸರಿಯಾದ ಮಾರ್ಗವನ್ನು ಬೆಳಗಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನ ಮತ್ತು ಪಯಣ ಕುರಿತ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ
June 30th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ 75ನೇ ಜನ್ಮದಿನದ ಮುನ್ನಾ ದಿನವಾದ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅವರ ಜೀವನ ಮತ್ತು ಪ್ರಯಾಣ ಕುರಿತ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು.ರಾಮ ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ: ಮನ್ ಕಿ ಬಾತ್ ವೇಳೆ ಪ್ರಧಾನಿ ಮೋದಿ
January 28th, 11:30 am
ನನ್ನ ಪ್ರಿಯ ದೇಶವಾಸಿಗಳೇ, ಈ ಬಾರಿ ಜನವರಿ 26 ರ ಪರೇಡ್ ತುಂಬಾ ಅದ್ಭುತವಾಗಿತ್ತು, ಆದರೆ ಕವಾಯತಿನಲ್ಲಿ ಮಹಿಳಾ ಶಕ್ತಿಯನ್ನು ನೋಡುವುದು ಹೆಚ್ಚು ಚರ್ಚೆಯ ವಿಷಯವಾಗಿತ್ತು, ಕರ್ತವ್ಯ ಪಥದಲ್ಲಿ ಕೇಂದ್ರ ಭದ್ರತಾ ಪಡೆ ಮತ್ತು ದೆಹಲಿ ಪೊಲೀಸ್ ಮಹಿಳಾ ತುಕಡಿಗಳು ಕವಾಯತು ಆರಂಭಿಸಿದಾಗ, ಎಲ್ಲರೂ ಹೆಮ್ಮೆಯಿಂದ ಬೀಗಿದರು. ಮಹಿಳಾ ವಾದ್ಯಮೇಳದ ಕವಾಯತು ನೋಡಿ, ಅವರ ಅಮೋಘ ಸಮನ್ವಯತೆ ಕಂಡು ದೇಶ-ವಿದೇಶದ ಜನರು ಪುಳಕಿತರಾದರು. ಈ ಬಾರಿ ಪರೇಡ್‌ನಲ್ಲಿ ಸಾಗಿದ 20 ಸ್ಕ್ವಾಡ್‌ಗಳಲ್ಲಿ 11 ಸ್ಕ್ವಾಡ್‌ಗಳು ಮಹಿಳೆಯರದ್ದೇ ಆಗಿದ್ದವು. ಸಾಗಿಬಂದ ಸ್ಥಬ್ಧ ಚಿತ್ರಗಳಲ್ಲಿಯೂ, ಎಲ್ಲಾ ವೇಷಧಾರಿಗಳು ಮಹಿಳೆಯರೇ ಆಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು ಒಂದೂವರೆ ಸಾವಿರ ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಅನೇಕ ಮಹಿಳಾ ಕಲಾವಿದರು ಶಂಖ, ನಾದಸ್ವರ ಮತ್ತು ನಾಗದಾ ದಂತಹ ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಡಿಆರ್‌ಡಿಒ ಬಿಡುಗಡೆ ಮಾಡಿದ ಟ್ಯಾಬ್ಲೋ ಕೂಡ ಎಲ್ಲರ ಗಮನ ಸೆಳೆಯಿತು. ನೀರು, ಭೂಮಿ, ಆಕಾಶ, ಸೈಬರ್ ಮತ್ತು ಬಾಹ್ಯಾಕಾಶ - ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ಶಕ್ತಿಯು ದೇಶವನ್ನು ಹೇಗೆ ರಕ್ಷಿಸುತ್ತಿದೆ ಎಂಬುದನ್ನು ಇದು ತೋರಿಸಿತ್ತು. 21ನೇ ಶತಮಾನದ ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ.ಪಿಎಂ-ಜನ್ ಮನ್ ಯೋಜನೆಯಡಿ ಪಿಎಂಎವೈ(ಜಿ)ಯ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
January 15th, 12:15 pm
ಎಲ್ಲರಿಗೂ ಶುಭಾಶಯಗಳು! ಪ್ರಸ್ತುತ ಉತ್ತರಾಯಣ, ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಬಿಹು ಹಬ್ಬದ ಆಚರಣೆಯ ವಾತಾವರಣವು ಇಡೀ ದೇಶವನ್ನು ವ್ಯಾಪಿಸಿದೆ. ಹಲವಾರು ಹಬ್ಬಗಳ ಸಂಭ್ರಮ ನಮ್ಮನ್ನು ಆವರಿಸಿದೆ. ಇಂದಿನ ಈ ಕಾರ್ಯಕ್ರಮದ ಉತ್ಸಾಹಕ್ಕೆ ಹೆಚ್ಚಿನ ಭವ್ಯತೆ ಮತ್ತು ಲವಲವಿಕೆಯನ್ನು ಸೇರಿಸಿದೆ. ಈ ಸಂದರ್ಭದಲ್ಲಿ ನಿಮ್ಮೊಂದಿಗೆ ಸಂವಹನ ನಡೆಸುವುದು ನನಗೆ ಸಂಭ್ರಮಾಚರಣೆಯಂತೆ ಭಾಸವಾಗುತ್ತಿದೆ. ಪ್ರಸ್ತುತ, ಅಯೋಧ್ಯೆಯಲ್ಲಿ ಹಬ್ಬಗಳು ತೆರೆದುಕೊಳ್ಳುತ್ತಿವೆ, ಅದೇ ಸಮಯದಲ್ಲಿ, ನನ್ನ ಕುಟುಂಬದ ಭಾಗವೆಂದು ಪರಿಗಣಿಸಲ್ಪಟ್ಟ ಒಂದು ಲಕ್ಷ ಅತ್ಯಂತ ಹಿಂದುಳಿದ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ತಮ್ಮ ಮನೆಗಳಲ್ಲಿ ಸಂತೋಷದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದು ನನಗೆ ಅಪಾರ ಸಂತೋಷ ತರುತ್ತಿದೆ. ಇಂದು ಅವರ ಪಕ್ಕಾ ಮನೆಗಳ ನಿರ್ಮಾಣಕ್ಕಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ನಾನು ಈ ಎಲ್ಲಾ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರಿಗೆ ಸಂತೋಷದ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತೇನೆ! ಈ ಉದಾತ್ತ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಲು ನನಗೆ ಸಿಕ್ಕಿರುವ ಅವಕಾಶವು ನನ್ನ ಜೀವನದಲ್ಲಿ ಬಹಳ ಸಂತೋಷ ತಂದಿದೆ.ʻಪಿಎಂ-ಜನಮನʼ ಯೋಜನೆಯಡಿ 1 ಲಕ್ಷ ʻಪಿಎಂಎವೈ(ಜಿ)ʼ ಫಲಾನುಭವಿಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಿ
January 15th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ’ದ (ಪಿಎಂ-ಜನಮನ) ಅಡಿಯಲ್ಲಿ ʻಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆʼಯ(ಪಿಎಂಎವೈ-ಜಿ)ʼ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಪಿಎಂ-ಜನಮನʼ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.ಮಕರ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ
January 15th, 09:38 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಶುಭ ಕೋರಿದ್ದಾರೆ.ನವದೆಹಲಿಯಲ್ಲಿ ಪೊಂಗಲ್ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 14th, 12:00 pm
ಪೊಂಗಲ್ ಹಬ್ಬದ ಶುಭ ದಿನದಂದು, ತಮಿಳುನಾಡಿನ ಪ್ರತಿ ಮನೆಯಲ್ಲೂ ಪೊಂಗಲ್ ಹಬ್ಬದ ಹರಿವು ಕಂಡುಬರುತ್ತದೆ. ನಿಮ್ಮ ಜೀವನದಲ್ಲೂ ಸಂತೋಷ, ಸಮೃದ್ಧಿ ಮತ್ತು ಸಂತೃಪ್ತಿಯ ಹರಿವು ಅಡೆತಡೆಯಿಲ್ಲದೆ ಮುಂದುವರಿಯಲಿ ಎಂಬುದು ನನ್ನ ಆಸೆ. ನಿನ್ನೆಯಷ್ಟೇ, ದೇಶವು ಲೋಹ್ರಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಿತು. ಕೆಲವರು ಇಂದು ಮಕರ ಸಂಕ್ರಾಂತಿ-ಉತ್ತರಾಯಣವನ್ನು ಆಚರಿಸುತ್ತಿದ್ದರೆ, ಇತರರು ನಾಳೆ ಆಚರಿಸಬಹುದು. ಮಾಘ್ ಬಿಹು ಕೂಡ ಹತ್ತಿರದಲ್ಲಿದೆ. ಈ ಹಬ್ಬಗಳಿಗಾಗಿ ನಾನು ಎಲ್ಲಾ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.ನವದೆಹಲಿಯಲ್ಲಿ ಪೊಂಗಲ್ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ
January 14th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಎಲ್. ಮುರುಗನ್ ಅವರ ನಿವಾಸದಲ್ಲಿ ಪೊಂಗಲ್ ಹಬ್ಬದಲ್ಲಿ ಆಚರಣೆಯಲ್ಲಿ ಭಾಗವಹಿಸಿದರು.Campaign of Viksit Bharat is getting new energy from Ayodhya: PM Modi
December 30th, 02:15 pm
PM Modi inaugurated, dedicated to the nation and laid the foundation stone of multiple development projects worth more than Rs 15,700 crore at Ayodhya Dham. Earlier PM Modi inaugurated the redeveloped Ayodhya Railway Station and flagged off new Amrit Bharat trains and Vande Bharat trains. After that, he also inaugurated the newly built Ayodhya Airport. The airport has been named Maharishi Valmiki International Airport.PM inaugurates, dedicates to nation and lays the foundation stone of multiple development projects worth more than Rs 15,700 crore
December 30th, 02:00 pm
PM Modi inaugurated, dedicated to the nation and laid the foundation stone of multiple development projects worth more than Rs 15,700 crore at Ayodhya Dham. Earlier PM Modi inaugurated the redeveloped Ayodhya Railway Station and flagged off new Amrit Bharat trains and Vande Bharat trains. After that, he also inaugurated the newly built Ayodhya Airport. The airport has been named Maharishi Valmiki International Airport.ಜೈಪುರದ ಖೇಲ್ ಮಹಾಕುಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
February 05th, 05:13 pm
ಮೊದಲನೆಯದಾಗಿ, ಜೈಪುರ ಮಹಾಖೇಲ್ ಕ್ರೀಟಾಕೂಟದಲ್ಲಿ ಭಾಗವಹಿಸಿದ, ಪದಕಗಳನ್ನು ಗೆದ್ದ ಆಟಗಾರರು ಮತ್ತು ಪ್ರತಿಯೊಬ್ಬ ಆಟಗಾರರು, ತರಬೇತುದಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವೆಲ್ಲರೂ ಜೈಪುರದ ಆಟದ ಮೈದಾನಕ್ಕೆ ಬಂದಿರುವುದು ಕೇವಲ ಆಟವಾಡಲು ಅಲ್ಲ ಗೆಲ್ಲಲು ಮತ್ತು ಕಲಿಯಲು. ಮತ್ತು, ಕಲಿಕೆ ಇರುವಲ್ಲಿ, ಗೆಲುವು ತಾನೇತಾನಾಗಿ ಖಚಿತವಾಗುತ್ತದೆ. ಯಾವುದೇ ಆಟಗಾರನು ಸ್ಪರ್ಧೆಯಿಂದ ಬರಿಗೈಯಲ್ಲಿ ಹಿಂತಿರುಗುವುದಿಲ್ಲ.ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಿದರು
February 05th, 12:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಉದ್ದೇಶಿಸಿ ಇಂದು ವಿಡಿಯೊ ಸಮಾವೇಶ ಮೂಲಕ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಕಬ್ಬಡಿ ಪಂದ್ಯವನ್ನು ವೀಕ್ಷಿಸಿದರು. ಜೈಪುರ ಗ್ರಾಮಾಂತರದ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು 2017 ರಿಂದ ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಆಯೋಜಿಸುತ್ತಿದ್ದಾರೆ.ಸಿಕಂದರಾಬಾದ್ ವಿಶಾಖಪಟ್ಟಣಂ ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಚಾಲನೆ ನೀಡುವ ಸಂಧರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
January 15th, 10:30 am
ನಮಸ್ಕಾರ! ತೆಲಂಗಾಣ ರಾಜ್ಯಪಾಲ ಡಾ. ತಮಿಳಿಸೈ ಸೌಂದರರಾಜನ್ ಜಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಿ, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಜಿ, ತೆಲಂಗಾಣ ಸಚಿವರಾದ ಮೊಹಮ್ಮದ್ ಮಹಮ್ಮದ್ ಅಲಿಗಾರು ಮತ್ತು ಟಿ. ಶ್ರೀನಿವಾಸ್ ಯಾದವ್, ಸಂಸತ್ತಿನ ನನ್ನ ಸಹೋದ್ಯೋಗಿಗಳು ಮತ್ತು ನನ್ನ ಸ್ನೇಹಿತರಾದ ಬಂಡಿ ಸಂಜಯ್ ಗಾರು ಮತ್ತು ಕೆ. ಲಕ್ಷ್ಮಣ್ ಗಾರು, ಇತರ ಎಲ್ಲ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಂಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
January 15th, 10:11 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಿಕಂದರಾಬಾದ್-ವಿಶಾಖಪಟ್ಟಣ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಈ ರೈಲು ಭಾರತೀಯ ರೈಲ್ವೇಯಿಂದ ಪರಿಚಯಿಸಲಾದ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ ಮತ್ತು ತೆಲುಗು ಭಾಷಿಕ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದೊಡನೆ ಸಂಪರ್ಕ ಕಲ್ಪಿಸುವ ಮೊದಲನೆಯ ರೈಲಾಗಿದೆ, ಇದು ಸುಮಾರು 700 ಕಿ.ಮೀ. ದೂರ ಕ್ರಮಿಸುತ್ತದೆ. ರೈಲು ಆಂಧ್ರಪ್ರದೇಶದ ವಿಶಾಖಪಟ್ಟಣ, ರಾಜಮಂಡ್ರಿ ಮತ್ತು ವಿಜಯವಾಡ ನಿಲ್ದಾಣಗಳಲ್ಲಿ ಮತ್ತು ತೆಲಂಗಾಣದ ಖಮ್ಮಂ, ವಾರಂಗಲ್ ಮತ್ತು ಸಿಕಂದರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಕರ ಸಂಕ್ರಾಂತಿಯಂದು ಜನರಿಗೆ ಶುಭಾಶಯ ಕೋರಿದ್ದಾರೆ.
January 15th, 09:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಕರ ಸಂಕ್ರಾಂತಿಯ ಹಬ್ಬದ ಈ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ-ಎಂವಿ ಗಂಗಾ ವಿಲಾಸ್ ಮತ್ತು ಟೆಂಟ್ ಸಿಟಿಯ ಉದ್ಘಾಟನಾ ಸಮಾರಂಭದಲ್ಲಿನ ಪ್ರಧಾನಮಂತ್ರಿಯವರ ಭಾಷಣದ ಪಠ್ಯ...
January 13th, 10:35 am
ಇಂದು ಲೋಹ್ರಿ ಹಬ್ಬವು ಉತ್ಸಾಹದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಉತ್ತರಾಯಣ, ಮಕರ ಸಂಕ್ರಾಂತಿ, ಭೋಗಿ, ಬಿಹು, ಪೊಂಗಲ್ ಹೀಗೆ ಹಲವು ಹಬ್ಬಗಳನ್ನೂ ಆಚರಿಸುತ್ತೇವೆ. ದೇಶ ಮತ್ತು ಪ್ರಪಂಚದಲ್ಲಿ ಈ ಹಬ್ಬಗಳನ್ನು ಆಚರಿಸುತ್ತಿರುವ ಎಲ್ಲ ಜನರನ್ನು ನಾನು ಅಭಿನಂದಿಸಿ ಎಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.ಪ್ರಧಾನಮಂತ್ರಿಯವರಿಂದ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಾರಾಣಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ - ಎಂವಿ ಗಂಗಾ ವಿಲಾಸ್‌ಗೆ ಚಾಲನೆ ಮತ್ತು ಟೆಂಟ್ ಸಿಟಿ ಉದ್ಘಾಟನೆ
January 13th, 10:18 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಶ್ವದ ಅತಿ ಉದ್ದದ ನದಿ ವಿಹಾರ-ಎಂವಿ ಗಂಗಾ ವಿಲಾಸ್‌ಗೆ ಹಸಿರು ನಿಶಾನೆ ತೋರಿದರು ಮತ್ತು ಟೆಂಟ್ ಸಿಟಿಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ 1000 ಕೋಟಿ ರೂ.ಗೂ ಅಧಿಕ ಮೊತ್ತದ ಇತರ ಹಲವು ಒಳನಾಡು ಜಲಮಾರ್ಗ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಅವರು ನೆರವೇರಿಸಿದರು. ನದಿ ವಿಹಾರ (ರಿವರ್ ಕ್ರೂಸ್) ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಧಾನ ಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿ, ಈ ಸೇವೆಯು ನದಿ ವಿಹಾರದ ಬೃಹತ್ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ ಮತ್ತು ಇದು ಭಾರತದಲ್ಲಿ ನದಿ ವಿಹಾರ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ.Vision of self-reliant India embodies the spirit of global good: PM Modi in Indonesia
November 15th, 04:01 pm
PM Modi interacted with members of Indian diaspora and Friends of India in Bali, Indonesia. He highlighted the close cultural and civilizational linkages between India and Indonesia. He referred to the age old tradition of Bali Jatra” to highlight the enduring cultural and trade connect between the two countries.ಇಂಡೋನೇಷ್ಯಾದ ಬಾಲಿಯಲ್ಲಿ ಭಾರತೀಯ ಸಮುದಾಯ ಮತ್ತು ʻಫ್ರೆಂಡ್ಸ್ ಆಫ್ ಇಂಡಿಯಾʼ ಜೊತೆ ಪ್ರಧಾನಮಂತ್ರಿಯವರ ಸಂವಾದ
November 15th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ನವೆಂಬರ್ 15ರಂದು ಇಂಡೋನೇಷ್ಯಾದ ಬಾಲಿಯಲ್ಲಿ 800ಕ್ಕೂ ಹೆಚ್ಚು ಭಾರತೀಯ ವಲಸಿಗರು ಮತ್ತು `ಫ್ರೆಂಡ್ಸ್ ಆಫ್ ಇಂಡಿಯಾ’ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಜೊತೆಗೆ ಅವರೊಂದಿಗೆ ಸಂವಾದ ನಡೆಸಿದರು. ಇಂಡೋನೇಷ್ಯಾದ ಮೂಲೆಮೂಲೆಗಳಿಂದ ಭಾರಿ ಸಂಖ್ಯೆಯ ಮತ್ತು ವೈವಿಧ್ಯಮಯ ಜನಸಮೂಹವು ಕಾರ್ಯಕ್ರಮದಲ್ಲಿ ಭಾಗಿಯಾಯಿತು.ವಸತಿ, ಎಲ್‌ಪಿಜಿ ಸಂಪರ್ಕಗಳು ಮತ್ತು ರೈತರ ಬೆಂಬಲದಂತಹ ಕಲ್ಯಾಣ ಯೋಜನೆಗಳು ರಾಜ್ಯದಲ್ಲಿ ಮುಂದುವರಿಯಲು, ಡಬಲ್ ಎಂಜಿನ್ ಸರ್ಕಾರ್ ಅಧಿಕಾರದಲ್ಲಿ ಉಳಿಯುವುದು ಅತ್ಯಗತ್ಯ: ಪ್ರಧಾನಿ ಮೋದಿ
February 12th, 03:51 pm
ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಕನೌಜ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಉತ್ತರಪ್ರದೇಶ ಜನತೆಗೆ ಶುಭ ಹಾರೈಸುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದ ಅವರು, ನೀವೆಲ್ಲರೂ ಅಭಿವೃದ್ಧಿಯತ್ತ ಸಾಗಲಿ, ನಿರಂತರ ಅಭಿವೃದ್ಧಿಯಾಗಲಿ, ಪ್ರತಿಯೊಬ್ಬ ವ್ಯಾಪಾರಿಯ ವ್ಯಾಪಾರ ಮತ್ತಷ್ಟು ಬೆಳೆಯಲಿ ಮತ್ತು ಈ ಆಸೆ ಮತ್ತು ನಂಬಿಕೆಯಿಂದ ಇಂದು ನಾನು ಇಲ್ಲಿಗೆ ಬಂದಿದ್ದೇನೆ. ]