ನವದೆಹಲಿಯಲ್ಲಿ ವೀರ್ ಬಾಲ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ..

December 26th, 04:10 pm

ಇಂದು ದೇಶವು ಮೊದಲ 'ವೀರ್ ಬಾಲ್ ದಿವಸ್' ಅನ್ನು ಆಚರಿಸುತ್ತಿದೆ. ನಾವು ತಲೆಮಾರುಗಳಿಂದ ನೆನಪಿಸಿಕೊಳ್ಳುತ್ತಿರುವ ಈ‌ ದಿನ, ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುವಹತ್ವದ ದಿನ. ಇಂದು ಒಂದು ರಾಷ್ಟ್ರವಾಗಿ ನಾವೆಲ್ಲ ಒಗ್ಗಟ್ಟಾಗಿ ಆ ವೀರ ಬಾಲಕ ಬಾಲಕಿಯರಿಗೆ ತಲೆಬಾಗುವ ಮೂಲಕ ಹೊಸ ಆರಂಭವನ್ನು ನೀಡುವ ದಿನವಾಗಿದೆ. ಹುತಾತ್ಮರ ಸಪ್ತಾಹ ಮತ್ತು ಈ ವೀರ್ ಬಾಲ್ ದಿವಸ್ ಖಂಡಿತವಾಗಿಯೂ ನಮ್ಮ ಸಿಖ್ ಸಂಪ್ರದಾಯದ ಭಾವನೆಗಳಿಂದ ತುಂಬಿದೆ, ಆದರೆ ಆಕಾಶದಂತಹ ಶಾಶ್ವತ ಸ್ಫೂರ್ತಿಗಳು ಸಹ ಅದಕ್ಕೆ ಲಗತ್ತಿಸಲಾಗಿದೆ. ಶೌರ್ಯ,ಸಾಹಸ ಧೈರ್ಯಕ್ಕೆ ವಯಸ್ಸು ಮುಖ್ಯವಲ್ಲ,ಸಣ್ಣವಯಸ್ಸಾದರೇನು ಶೌರ್ಯ ಮುಖ್ಯ ಎಂಬುದನ್ನು 'ವೀರ್ ಬಾಲ್ ದಿವಸ್' ನಮಗೆ ನೆನಪಿಸುತ್ತದೆ. ಹತ್ತು ಗುರುಗಳ ಕೊಡುಗೆ ಏನು, ದೇಶದ ಸ್ವಾಭಿಮಾನಕ್ಕಾಗಿ ಸಿಖ್ ಸಂಪ್ರದಾಯದ ತ್ಯಾಗ ಏನು ಎಂಬುದನ್ನು 'ವೀರ್ ಬಾಲ್ ದಿವಸ್' ನಮಗೆ ನೆನಪಿಸುತ್ತದೆ! 'ವೀರ್ ಬಾಲ್ ದಿವಸ್' ನಮಗೆ ಭಾರತ ಎಂದರೇನು, ಯಾವುದು ಭಾರತ ?ಇದರ ಗುರುತು ಏನು ? ಹೆಮ್ಮೆಯೇನೆಂಬುದನ್ನು ಧ್ಯೋತಕಪಡಿಸುತ್ತದೆ. ಪ್ರತಿ ವರ್ಷ ವೀರ್ ಬಾಲ್ ದಿವಸ್‌ನ ಈ ಮಂಗಳಕರ ಸಂದರ್ಭವು ನಮ್ಮ ಹಿಂದಿನದನ್ನು ಗುರುತಿಸಲು ಮತ್ತು ಮುಂಬರುವ ಭವಿಷ್ಯವನ್ನು ನಿರ್ಮಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಭಾರತದ ಯುವ ಪೀಳಿಗೆಯ ಸಾಮರ್ಥ್ಯ ಏನು, ಭಾರತದ ಯುವ ಪೀಳಿಗೆಯು ಈ ಹಿಂದೆ ದೇಶವನ್ನು ಹೇಗೆ ಉಳಿಸಿದೆ, ನಮ್ಮ ಯುವ ಪೀಳಿಗೆಯು ಭಾರತವನ್ನು ಮಾನವೀಯತೆಯ ಕರಾಳ ಕತ್ತಲೆಯಿಂದ ಹೇಗೆ ಹೊರತಂದಿದೆ ಎಂಬುದನ್ನು ವಿವರಿಸುವ ದಶಕಗಳ ಮತ್ತು ಶತಮಾನಗಳವರೆಗೆ ತೋರಿಸುವ 'ವೀರ್ ಬಾಲ್ ದಿವಸ್' ಉದ್ಘೋಷವಾಗಲಿದೆ.

ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ವೀರ ಬಾಲ ದಿವಸ್' ಅಂಗವಾಗಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನ ಮಂತ್ರಿ

December 26th, 12:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ವೀರ ಬಾಲ ದಿವಸ್' ಅಂಗವಾಗಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸುಮಾರು ಮುನ್ನೂರು ಬಾಲ ಕೀರ್ತನಿಗಳು ಪ್ರದರ್ಶಿಸಿದ 'ಶಬಾದ್ ಕೀರ್ತನೆ'ಯಲ್ಲಿ ಭಾಗವಹಿಸಿದ್ದರು. ಈ ಮಹತ್ವದ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಮೂರು ಸಾವಿರ ಮಕ್ಕಳ ಪಥಸಂಚಲನಕ್ಕೂ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು.