ಇಸ್ರೇಲ್ ಜೊತೆ ನಮ್ಮ ಸಂಬಂಧ ಪರಸ್ಪರ ವಿಶ್ವಾಸ ಮತ್ತು ಸ್ನೇಹಾಚಾರದಿಂದ ಕೂಡಿದೆ

July 05th, 10:38 pm

ಪ್ರಧಾನಿ ನರೇಂದ್ರ ಮೋದಿ ಟೆಲ್ ಅವಿವ್ ನಲ್ಲಿ ಸಮುದಾಯ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದರು. ಇಸ್ರೇಲ್ ನ ಅಭಿವೃದ್ಧಿಯ ಪ್ರಯಾಣವನ್ನು ಪ್ರಶಂಸಿಸುತ್ತಾ, ಪ್ರಧಾನಿ ಮೋದಿ ಅವರು, ಗಾತ್ರಕ್ಕಿಂತ ಹೆಚ್ಚಿನದು, ಅದು ಮುಖ್ಯವಾದದ್ದು ಎಂದು ಇಸ್ರೇಲ್ ತೋರಿಸಿದೆ. ಯಹೂದಿ ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳಿಂದ ಭಾರತವನ್ನು ಪುಷ್ಟೀಕರಿಸಿದೆ ಎಂದು ಅವರು ಹೇಳಿದರು. ಪ್ರಧಾನಿ ನೇತನ್ಯಾಹು ಮತ್ತು ಇಸ್ರೇಲ್ ಸರ್ಕಾರಕ್ಕೆ ಆತಿಥ್ಯಕ್ಕಾಗಿ ಧನ್ಯವಾದ ಸಲ್ಲಿಸಿದರು.

ಇಸ್ರೇಲ್ ನಲ್ಲಿ ಸಮುದಾಯಗಳ ಆತಿಥ್ಯ ಸತ್ಕಾರಕೂಟದಲ್ಲಿ ಪ್ರಧಾನಿಯವರು ಮಾಡಿದ ಭಾಷಣ

July 05th, 06:56 pm

ಭಾರತದ ಪ್ರಧಾನಿಯವರು 70 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿರುವುದು ಸಂತೋಷ ಮತ್ತು ಕುತೂಹಲದ ಮಿಶ್ರ ಭಾವನೆಯನ್ನು ಮೂಡಿಸಿದೆ. ಬಹಳ ಧೀರ್ಘ ಅವಧಿಯ ಬಳಿಕ ನೀವು, ತೀರಾ ನಿಕಟ ವ್ಯಕ್ತಿಯನ್ನು ಭೇಟಿಯಾಗುವಾಗ ಮನುಷ್ಯ ಸ್ವಭಾವಕ್ಕೆ ಒದಗುವ ಅನುಭವವಿದು, ಆಗ ಮೊದಲ ವಾಕ್ಯ ನಾವು ಭೇಟಿಯಾಗದೆ ಬಹಳ ಕಾಲವಾಯಿತು ಎಂಬ ತಪ್ಪೊಪ್ಪಿಗೆಯಂತಿದ್ದರೆ ಆ ಬಳಿಕದ್ದು ಎಲ್ಲ ಹೇಗಿದೆ ಎಂದು ಕೇಳುವಂತಹ ರೀತಿಯದ್ದು. ನಾನು ನನ್ನ ಭಾಷಣವನ್ನು ಬಹಳ ಧೀರ್ಘಾವಧಿಯಿಂದ ಭೇಟಿಯಾಗದಿರುವ ಈ ತಪ್ಪೊಪ್ಪಿಗೆಯೊಂದಿಗೆ ಆರಂಭಿಸುತ್ತೇನೆ.ವಾಸ್ತವವಾಗಿ ಇದು 10,20 ಅಥವ 50 ವರ್ಷಗಳನ್ನು ತೆಗೆದುಕೊಂಡದ್ದಲ್ಲ, 70 ವರ್ಷಗಳ ಧೀರ್ಘಾವಧಿ.