ವಿಶ್ವದ ಪ್ರತಿ ಮೂಲೆಗೂ ಯೋಗ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು: ಪ್ರಧಾನಮಂತ್ರಿ ಮೋದಿ

June 21st, 08:40 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯೋಗ ಆಚಾರ್ಯರು, ಮತ್ತು ಯೋಗ ಪ್ರಚಾರಕರು ಮತ್ತು ಯೋಗದೊಂದಿಗೆ ನಂಟು ಹೊಂದಿರುವ ಪ್ರತಿಯೊಬ್ಬರೂ ವಿಶ್ವದ ಪ್ರತಿ ಮೂಲೆಗೂ ಯೋಗವನ್ನು ತಲುಪಿಸುವುದನ್ನು ಖಾತ್ರಿ ಪಡೆಸಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ. ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಕೋವಿಡ್ ಬಾಧಿತ ಜಗತ್ತಿನಲ್ಲಿ ಯೋಗ ಇನ್ನೂ ಆಶಾಕಿರಣವಾಗಿದೆ- ಪ್ರಧಾನಮಂತ್ರಿ ಮೋದಿ

June 21st, 08:37 am

ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಸಾಂಕ್ರಾಮಿಕದ ಈ ಸನ್ನಿವೇಶದಲ್ಲಿ ಯೋಗದ ಪಾತ್ರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಯೋಗವು ಮೂಲ ಶಕ್ತಿ ಮತ್ತು ಸಮತೋಲನವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಯೋಗ ದಿನವನ್ನು ದೇಶಗಳು ಮರೆಯುವುದು ಸುಲಭ, ಏಕೆಂದರೆ ಇದು ಅವರ ಸಂಸ್ಕೃತಿಗೆ ಅಂತರ್ಗತವಾಗಿಲ್ಲ ಆದರೆ, ಜಾಗತಿಕವಾಗಿ ಯೋಗದ ಉತ್ಸಾಹ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಯೋಗವು ನಕಾರಾತ್ಮಕತೆಯಿಂದ ಸೃಜನಶೀಲತೆಗೆ ನಮ್ಮನ್ನು ಕರೆದೊಯ್ಯುತ್ತದೆ: ಪ್ರಧಾನಿ ಮೋದಿ

June 21st, 06:42 am

7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ದೇಶ, ಪ್ರತಿ ಸಮಾಜ ಮತ್ತು ಪ್ರತಿಯೊಬ್ಬ ವ್ಯಕ್ತಿಗಳಿಗೆ ಉತ್ತಮ ಆರೋಗ್ಯವನ್ನು ಹಾರೈಸಿದರು ಮತ್ತು ಒಬ್ಬರ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಯೋಗದ ಮಹತ್ವವನ್ನು ಒತ್ತಿ ಹೇಳಿದರು. ಯೋಗದಿಂದ ಹಲವಾರು ಸಮಸ್ಯೆಗಳಿಂದ ಹೊರಬರಬಹುದು , ಆದರೆ ನಮ್ಮೊಳಗೆ ಅನಂತ ಪರಿಹಾರಗಳಿವೆ. ನಮ್ಮ ವಿಶ್ವದಲ್ಲಿ ನಾವು ಅತಿದೊಡ್ಡ ಶಕ್ತಿಯ ಮೂಲವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ಭಾಷಣ

June 21st, 06:41 am

ಸಾಂಕ್ರಾಮಿಕದ ನಡುವೆಯೂ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ –“ಯೋಗಕ್ಷೇಮಕ್ಕೆ ಯೋಗ’ ಎಂಬುದಾಗಿದ್ದು, ಅದು ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ, ಪ್ರತಿಯೊಂದು ದೇಶದ, ಸಮಾಜದ ಮತ್ತು ವ್ಯಕ್ತಿಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿರುವ ಅವರು, ನಾವೆಲ್ಲರೂ ಒಗ್ಗೂಡಿ, ಪರಸ್ಪರರನ್ನು ಬಲಪಡಿಸೋಣ ಎಂದು ತಿಳಿಸಿದ್ದಾರೆ. ಅವರು ಇಂದು ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.