'ಮನ್ ಕಿ ಬಾತ್' ಕೇಳುಗರು ಈ ಕಾರ್ಯಕ್ರಮದ ನಿಜವಾದ ನಿರೂಪಕರು: ಪ್ರಧಾನಿ ಮೋದಿ

September 29th, 11:30 am

ನನ್ನ ಪ್ರೀತಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ ನಾವೆಲ್ಲರೂ 'ಮನದ ಮಾತಿನ' ಮೂಲಕ ಒಗ್ಗೂಡುವ ಅವಕಾಶ ಲಭಿಸಿದೆ. ಇಂದಿನ ಈ ಕಂತು ನನ್ನನ್ನು ಬಹಳ ಭಾವುಕನನ್ನಾಗಿಸಲಿದೆ, ಅನೇಕ ಹಳೆಯ ನೆನಪುಗಳು ನನ್ನನ್ನು ಮುತ್ತಿವೆ - ಕಾರಣ ಏನೆಂದರೆ 'ಮನದ ಮಾತಿನ' ನಮ್ಮ ಈ ಪಯಣಕ್ಕೆ 10 ವರ್ಷಗಳು ತುಂಬುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿಯ ದಿನದಂದು 'ಮನದ ಮಾತು’ ಪ್ರಾರಂಭವಾಗಿತ್ತು ಮತ್ತು ಈ ವರ್ಷ ಅಕ್ಟೋಬರ್ 3 ರಂದು 'ಮನದ ಮಾತಿಗೆ ' 10 ವರ್ಷತುಂಬುವ ಸಂದರ್ಭ ನವರಾತ್ರಿಯ ಮೊದಲ ದಿನವಾಗಿದೆ. 'ಮನದ ಮಾತಿನ’ ಈ ಸುದೀರ್ಘ ಪಯಣದಲ್ಲಿ ನಾನು ಎಂದೂ ಮರೆಯಲಾಗದ ಇಂತಹ ಹಲವಾರು ಮೈಲಿಗಲ್ಲುಗಳಿವೆ, ನಮ್ಮ ಈ ಪಯಣದಲ್ಲಿ ನಿರಂತರ ಸಹಯೋಗವನ್ನು ನೀಡಿದಂತಹ ' ಮನದ ಮಾತಿನ' ಕೋಟ್ಯಂತರ ಶ್ರೋತೃ ಬಾಂಧವರಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಅವರು ಮಾಹಿತಿಯನ್ನು ಒದಗಿಸಿದರು. ಮನದ ಮಾತಿನ ಶ್ರೋತೃಗಳೇ ಈ ಕಾರ್ಯಕ್ರಮದ ನಿಜವಾದ ರೂವಾರಿಗಳು. ಸಾಮಾನ್ಯವಾಗಿ ಎಲ್ಲಿಯವರೆಗೆ ರೋಚಕ ವಿಷಯಗಳನ್ನು ಮಾತನಾಡುವುದಿಲ್ಲವೋ, ನಕಾರಾತ್ಮಕ ವಿಷಯಗಳನ್ನು ಮಾತನಾಡುವುದಿಲ್ಲವೋ ಅಲ್ಲಿವರೆಗೆ ಅದು ಹೆಚ್ಚಿನ ಗಮನ ಸೆಳೆಯುವುದಿಲ್ಲ ಎನ್ನಲಾಗುತ್ತದೆ. ಆದರೆ ಮನದ ಮಾತು ದೇಶದ ಜನರು ಸಕಾರಾತ್ಮಕ ಮಾಹಿತಿಗಾಗಿ , ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಸಕಾರಾತ್ಮಕ ಮಾತು, ಪ್ರೇರಣಾತ್ಮಕ ಉದಾಹರಣೆಗಳು, ಸ್ಫೂರ್ತಿದಾಯಕ ಕಥೆಗಳು ಜನರಿಗೆ ಬಹಳ ಇಷ್ಟವಾಗುತ್ತವೆ. ಕೇವಲ ಮಳೆಹನಿಗಳನ್ನು ಮಾತ್ರ ಕುಡಿಯುವಂತಹ ಚಾತಕ ಪಕ್ಷಿಯಂತೆ ಜನರು ದೇಶದ ಸೌಲಭ್ಯಗಳ ಬಗ್ಗೆ, ಜನರ ಸಾಮೂಹಿಕ ಸಾಧನೆಗಳ ಬಗ್ಗೆ ಮನದ ಮಾತಿನ ಮೂಲಕ ಎಷ್ಟು ಹೆಮ್ಮೆಯಿಂದ ಕೇಳುತ್ತಾರೆ. ಮನದ ಮಾತಿನ 10 ವರ್ಷಗಳ ಪಯಣ ಎಷ್ಟು ಅದ್ಭುತವಾದ ಹಾರವನ್ನು ಸಿದ್ಧಗೊಳಿಸಿದೆ ಎಂದರೆ ಪ್ರತಿ ಸಂಚಿಕೆಯೊಂದಿಗೆ ಹೊಸ ಯಶೋಗಾಥೆಗಳು, ಹೊಸ ಕೀರ್ತಿವಂತರು ಮತ್ತು ಹೊಸ ವ್ಯಕ್ತಿತ್ವಗಳನ್ನು ಸೇರಿಸುತ್ತಾ ಸಾಗಿದೆ. ನಮ್ಮ ಸಮಾಜದಲ್ಲಿ ಸಾಮಾಜಿಕ ಹಿತದೃಷ್ಟಿಯ ಭಾವನೆಯಿಂದ ಯಾವುದೇ ಕೆಲಸ ಮಾಡಿದರೂ ಅವರಿಗೆ 'ಮನದ ಮಾತಿನ' ಮೂಲಕ ಗೌರವ ಲಭಿಸುತ್ತದೆ. 'ಮನದ ಮಾತಿ'ಗೆ ಬಂದ ಪತ್ರಗಳನ್ನು ನಾನು ಓದಿದಾಗ ನನ್ನ ಮನವೂ ಹೆಮ್ಮೆಯಿಂದ ಬೀಗುತ್ತದೆ. ನಮ್ಮ ದೇಶದಲ್ಲಿ ಅದೆಷ್ಟೋ ಪ್ರತಿಭಾವಂತರಿದ್ದಾರೆ, ಅವರು ತಮ್ಮ ಇಡೀ ಜೀವನವನ್ನು ಜನರ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಬಗ್ಗೆ ತಿಳಿಯುವುದು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. 'ಮನದ ಮಾತಿನ' ಈ ಸಂಪೂರ್ಣ ಪ್ರಕ್ರಿಯೆಯು ನನಗೆ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುವಂತಿದೆ. ಮನದ ಮಾತಿನ ಪ್ರತಿ ವಿಷಯ, ಪ್ರತಿ ಘಟನೆ, ಪ್ರತಿ ಪತ್ರವನ್ನು ನೆನಪಿಸಿಕೊಂಡಾಗ, ನನಗೆ ಭಗವಂತನ ರೂಪದಲ್ಲಿರುವ ಜನತಾ ಜನಾರ್ದನನ ದರ್ಶನ ಪಡೆದಂತೆ ಭಾಸವಾಗುತ್ತದೆ.

ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ 'ಪಿಎಂ ವಿಶ್ವಕರ್ಮ' ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 20th, 11:45 am

2 ದಿನಗಳ ಹಿಂದೆಯಷ್ಟೇ ವಿಶ್ವಕರ್ಮ ಜಯಂತಿ ಆಚರಿಸಿದ್ದೆವು. ಇಂದು ನಾವು ವಾರ್ಧಾದ ಪವಿತ್ರ ಭೂಮಿಯಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಯಶಸ್ಸನ್ನು ಆಚರಿಸುತ್ತಿದ್ದೇವೆ. 1932ರ ಇದೇ ದಿನದಂದು ಮಹಾತ್ಮ ಗಾಂಧೀಜಿ ಅವರು ಅಸ್ಪೃಶ್ಯತೆಯ ವಿರುದ್ಧ ತಮ್ಮ ಅಭಿಯಾನ ಆರಂಭಿಸಿದ್ದರು ಎಂಬುದು ಇಂದಿನ ವಿಶೇಷ. ಈ ಹಿನ್ನೆಲೆಯಲ್ಲಿ ವಿನೋಬಾ ಭಾವೆ ಅವರ ಪುಣ್ಯಭೂಮಿ, ಮಹಾತ್ಮ ಗಾಂಧಿ ಅವರ ‘ಕರ್ಮಭೂಮಿ’ ಮತ್ತು ವಾರ್ಧಾ ಭೂಮಿಯಲ್ಲಿ ವಿಶ್ವಕರ್ಮ ಯೋಜನೆಯ 1 ವರ್ಷದ ಸಂಭ್ರಮಾಚರಣೆಯು ನಮ್ಮ ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ)ದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡುವ ಸಾಧನೆ ಮತ್ತು ಸ್ಫೂರ್ತಿಯ ಸಂಗಮವಾಗಿದೆ. ವಿಶ್ವಕರ್ಮ ಯೋಜನೆ ಮೂಲಕ ನಾವು ಶ್ರಮದ ಮೂಲಕ ಸಮೃದ್ಧಿ ಮತ್ತು ಕೌಶಲ್ಯದ ಮೂಲಕ ಉತ್ತಮ ಭವಿಷ್ಯದ ಬದ್ಧತೆ ಹೊಂದಿದ್ದೇವೆ. ವಾರ್ಧಾದಲ್ಲಿ ಬಾಪು ಅವರ ಸ್ಫೂರ್ತಿಗಳು ಈ ಬದ್ಧತೆಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಈ ಉಪಕ್ರಮಕ್ಕೆ ಸಂಬಂಧಿಸಿದ ಎಲ್ಲರಿಗೂ ಮತ್ತು ದೇಶಾದ್ಯಂತದ ಎಲ್ಲಾ ಫಲಾನುಭವಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

September 20th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ‘ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ’ಯೋಜನೆ ಮತ್ತು ‘ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆʼಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣಪತ್ರಗಳು ಮತ್ತು ಸಾಲಗಳನ್ನು ಬಿಡುಗಡೆ ಮಾಡಿದರು ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಒಂದು ವರ್ಷದ ಪ್ರಗತಿಯನ್ನು ಗುರುತಿಸುವ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್‌ ಅಂಡ್‌ ಅಪಾರಲ್ (ಪಿಎಂ ಮಿತ್ರಾ) ಪಾರ್ಕ್‌ ಗೆ ಶ್ರೀ ಮೋದಿಯವರು ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನವನ್ನು ಪ್ರಧಾನಿಯವರು ವೀಕ್ಷಿಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿಗಳ ನಿವಾಸದಲ್ಲಿ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

September 11th, 11:12 pm

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಡಿ ವೈ ಚಂದ್ರಚೂಡ್ ಅವರ ನಿವಾಸದಲ್ಲಿ ನೆರವೇರಿದ ಗಣೇಶ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಣೇಶ ಚತುರ್ಥಿಯ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ

September 07th, 09:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಣೇಶ ಚತುರ್ಥಿ ಹಬ್ಬದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.