ಆಯುರ್ವೇದ ದಿನದ ಅಂಗವಾಗಿ ರಾಷ್ಟ್ರದ ಜನತೆಗೆ ಪ್ರಧಾನಮಂತ್ರಿ ಶುಭಾಶಯ
October 29th, 08:54 am
ಆಯುರ್ವೇದ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ. ಭಗವಾನ್ ಧನ್ವಂತರಿಯ ಜನ್ಮ ದಿನದ ಈ ಶುಭ ಸಂದರ್ಭವು ನಮ್ಮ ಮಹಾನ್ ಸಂಸ್ಕೃತಿಯಲ್ಲಿ ಮಿಳಿತಗೊಂಡಿರುವ ಆಯುರ್ವೇದದ ಬಳಕೆ ಮತ್ತು ಕೊಡುಗೆಯೊಂದಿಗೆ ಸಂಪರ್ಕಿತವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದವು ಇಡೀ ಮನುಕುಲದ ಆರೋಗ್ಯಕರ ಜೀವನಕ್ಕೆ ಪ್ರಯೋಜಕಾರಿಯಾಗಲಿದೆ ಎಂದು ಶ್ರೀ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.