ಗುಜರಾತ್‌ನ ಗಾಂಧಿನಗರದಲ್ಲಿ ರಿ-ಇನ್ವೆಸ್ಟ್ 2024 ಸಮ್ಮೇಳನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 16th, 11:30 am
ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜಿ, ಗುಜರಾತ್ ಮುಖ್ಯಮಂತ್ರಿ, ಶ್ರೀ ಭೂಪೇಂದ್ರಭಾಯಿ ಪಟೇಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಜಿ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಜಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಜಿ, ಛತ್ತೀಸ್‌ಗಢ ಮುಖ್ಯಮಂತ್ರಿ ಮತ್ತು ಗೋವಾ ಮುಖ್ಯಮಂತ್ರಿಗಳೆ, ಸಂಪು ಸಹೋದ್ಯೋಗಿಗಳಾದ ಪ್ರಲ್ಹಾದ್ ಜೋಶಿ ಮತ್ತು ಶ್ರೀಪಾದ್ ನಾಯ್ಕ್ ಜಿ, ಜರ್ಮನಿಯ ಆರ್ಥಿಕ ಸಹಕಾರ ಸಚಿವರು ಮತ್ತು ಡೆನ್ಮಾರ್ಕ್‌ನ ಕೈಗಾರಿಕಾ ವ್ಯವಹಾರ ಸಚಿವರು ಸೇರಿದಂತೆ ವಿದೇಶಿ ಗಣ್ಯ ಅತಿಥಿಗಳೆ, ವಿವಿಧ ರಾಜ್ಯಗಳ ಇಂಧನ ಸಚಿವರೆ, ಹಲವಾರು ದೇಶಗಳ ಪ್ರತಿನಿಧಿಗಳೆ, ಇಲ್ಲಿ ನೆರೆದಿರುವ ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಗಾಂಧಿನಗರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್ ಪೋ (ಮರು ಹೂಡಿಕೆ) ಉದ್ಘಾಟಿಸಿದರು
September 16th, 11:11 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್ ಪೋ (ಮರು ಹೂಡಿಕೆ) ಉದ್ಘಾಟಿಸಿದರು. 3 ದಿನಗಳ ಶೃಂಗಸಭೆಯು 200 ಗಿಗಾವ್ಯಾಟ್ ಗಿಂತ ಹೆಚ್ಚು ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಭಾರತದ ಗಮನಾರ್ಹ ಸಾಧನೆಗೆ ಪ್ರಮುಖ ಕೊಡುಗೆ ನೀಡಿದವರನ್ನು ಗೌರವಿಸುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು, ನವೋದ್ಯಮಗಳು ಮತ್ತು ಪ್ರಮುಖ ಉದ್ಯಮದ ಉದ್ದಿಮಿಗಳ ಅತ್ಯಾಧುನಿಕ ಆವಿಷ್ಕಾರಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನು ಶ್ರೀ ನರೇಂದ್ರ ಮೋದಿ ವೀಕ್ಷಿಸಿದರು.ಭಾರತದ ಜಿ 20 ಅಧ್ಯಕ್ಷತೆ ಭಾರತದ ಸಾಮಾನ್ಯ ನಾಗರಿಕರ ಸಾಮರ್ಥ್ಯವನ್ನು ಹೊರತಂದಿದೆ: ಪ್ರಧಾನಮಂತ್ರಿ
August 15th, 02:24 pm
77 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಜಿ 20 ಅಧ್ಯಕ್ಷತೆಯು ದೇಶದ ಸಾಮಾನ್ಯ ನಾಗರಿಕರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ವಿವರಿಸಿದರು. ಭಾರತದ ಸಾಮರ್ಥ್ಯ ಮತ್ತು ಭಾರತದ ಸಾಧ್ಯತೆಗಳು ವಿಶ್ವಾಸದ ಹೊಸ ಎತ್ತರವನ್ನು ದಾಟಲಿವೆ ಎಂಬುದು ಖಚಿತವಾಗಿದೆ ಮತ್ತು ವಿಶ್ವಾಸದ ಈ ಹೊಸ ಎತ್ತರವನ್ನು ಹೊಸ ಸಾಮರ್ಥ್ಯದೊಂದಿಗೆ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ‘‘ಭಾರತದ ಜಿ 20 ಅಧ್ಯಕ್ಷತೆಯು ಭಾರತದ ಸಾಮಾನ್ಯ ನಾಗರಿಕರ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ. ಇಂದು, ದೇಶದಲ್ಲಿ ಜಿ -20 ಶೃಂಗಸಭೆಯ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. ಮತ್ತು ಕಳೆದ ಒಂದು ವರ್ಷದಿಂದ, ಭಾರತದ ಪ್ರತಿಯೊಂದು ಮೂಲೆಯಲ್ಲೂಇಂತಹ ಅನೇಕ ಜಿ -20 ಕಾರ್ಯಕ್ರಮಗಳನ್ನು ಆಯೋಜಿಸಿದ ರೀತಿ, ಇದು ದೇಶದ ಸಾಮಾನ್ಯ ಮನುಷ್ಯನ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ,’’ ಎಂದು ಅವರು ಹೇಳಿದರು.ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಬಲೀಕರಣ ಕುರಿತ ಜಿ-20 ಸಚಿವರ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ವೀಡಿಯೊ ಕಾನ್ಫರೆನ್ಸ್ ಭಾಷಣ
August 02nd, 10:41 am
ಮಹಾತ್ಮ ಗಾಂಧಿ ಅವರ ಹೆಸರಿನ ನಗರವಾದ ಗಾಂಧಿನಗರಕ್ಕೆ ಅದರ ಸಂಸ್ಥಾಪನೆಯ ದಿನದಂದು ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಅಹಮದಾಬಾದ್‌ನ ಗಾಂಧಿ ಆಶ್ರಮಕ್ಕೆ ಭೇಟಿ ನೀಡುವ ಅವಕಾಶ ನಿಮಗೆ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಇಂದು ಇಡೀ ಜಗತ್ತು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಸುಸ್ಥಿರ ಪರಿಹಾರಗಳನ್ನು ಹುಡುಕುವ ತುರ್ತು ಕುರಿತು ಮಾತನಾಡುತ್ತಿದೆ. ಗಾಂಧಿ ಆಶ್ರಮದಲ್ಲಿ, ನೀವು ಗಾಂಧೀಜಿ ಅವರ ಜೀವನ ಶೈಲಿಯ ಸರಳತೆ ಮತ್ತು ಸುಸ್ಥಿರತೆ, ಸ್ವಾವಲಂಬನೆ ಮತ್ತು ಸಮಾನತೆಯ ಅವರ ದಾರ್ಶನಿಕ ಕಲ್ಪನೆಗಳನ್ನು ನೇರವಾಗಿ ನೋಡುತ್ತೀರಿ. ನೀವು ಅದನ್ನು ಸ್ಫೂರ್ತಿದಾಯಕವಾಗಿ ಕಾಣುತ್ತೀರಿ ಎಂದು ನನಗೆ ಖಾತ್ರಿಯಿದೆ. ದಂಡಿ ಕುಟೀರ್ ವಸ್ತುಸಂಗ್ರಹಾಲಯದಲ್ಲಿ ನೀವು ಅದನ್ನು ಅನುಭವಿಸಬಹುದು ಮತ್ತು ನೀವು ಅದನ್ನು ತಪ್ಪಿಸಿಕೊಳ್ಳಬಾರದು. ಗಾಂಧೀಜಿ ಅವರ ಪ್ರಸಿದ್ಧ ಚರಕ, ನೂಲುವ ಚಕ್ರ, ಗಂಗಾಬೆನ್ ಎಂಬ ಮಹಿಳೆಗೆ ಹತ್ತಿರದ ಹಳ್ಳಿಯಲ್ಲಿ ಸಿಕ್ಕಿತು ಎಂದು ಇಲ್ಲಿ ಉಲ್ಲೇಖಿಸುವುದು ನನಗೆ ಯೋಗ್ಯ ವಿಷಯವೇ ಆಗಿದೆ. ನಿಮಗೆ ತಿಳಿದಿರುವಂತೆ, ಅಂದಿನಿಂದ, ಗಾಂಧೀಜಿ ಯಾವಾಗಲೂ ಖಾದಿ ಧರಿಸುತ್ತಿದ್ದರು, ಅದು ಸ್ವಾವಲಂಬನೆ ಮತ್ತು ಸುಸ್ಥಿರತೆಯ ಸಂಕೇತವಾಗಿತ್ತು.ʻಮಹಿಳಾ ಸಬಲೀಕರಣ ಕುರಿತ ಜಿ-20 ಸಚಿವರ ಸಮ್ಮೇಳನ’ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ
August 02nd, 10:40 am
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿರುವ ಗಾಂಧಿನಗರದ ಸಂಸ್ಥಾಪನಾ ದಿನದಂದು ಗಣ್ಯರನ್ನು ನಗರಕ್ಕೆ ಸ್ವಾಗತಿಸಿದರು. ಅಹಮದಾಬಾದಿನ ಗಾಂಧಿ ಆಶ್ರಮಕ್ಕೆ ಭೇಟಿ ನೀಡಲು ಅವಕಾಶ ಅವರಿಗೆ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳಿಗೆ ತುರ್ತು ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಗಾಂಧೀಜಿಯವರ ಸರಳ ಜೀವನಶೈಲಿಯನ್ನು ಗಾಂಧಿ ಆಶ್ರಮದಲ್ಲಿ ಪ್ರತ್ಯಕ್ಷವಾಗಿ ನೋಡಬಹುದು. ಜೊತೆಗೆ ಸುಸ್ಥಿರತೆ, ಸ್ವಾವಲಂಬನೆ ಮತ್ತು ಸಮಾನತೆ ಕುರಿತಾಗಿ ಗಾಂಧಿ ಅವರು ಹೊಂದಿದ್ದ ದೂರದೃಷ್ಟಿಯ ಪರಿಕಲ್ಪನೆಗಳಿಗೂ ಆಶ್ರಮದಲ್ಲಿ ನಾವು ಸಾಕ್ಷಿಯಾಬಹುದು ಎಂದು ಪ್ರಧಾನಿ ಹೇಳಿದರು. ಗಣ್ಯರು ಇದರಿಂದ ಪ್ರೇರಣೆ ಪಡೆಯುವರೆಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. ದಂಡಿ ಕುಟೀರ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದ ಅವರು, ಗಾಂಧೀಜಿಯವರ ಪ್ರಸಿದ್ಧ, ನೂಲುವ ಚಕ್ರ ಅಥವಾ ಚರಕವನ್ನು ಹತ್ತಿರದ ಹಳ್ಳಿಯೊಂದರ ಗಂಗಾಬೆನ್ ಎಂಬ ಮಹಿಳೆ ಕಂಡುಹಿಡಿದಿದ್ದಾರೆ ಎಂದು ಮಾಹಿತಿ ನೀಡಿದರು. ಅಂದಿನಿಂದ ಗಾಂಧೀಜಿಯವರು ಖಾದಿ ಧರಿಸಲು ಪ್ರಾರಂಭಿಸಿದರು, ಇದು ಸ್ವಾವಲಂಬನೆ ಮತ್ತು ಸುಸ್ಥಿರತೆಯ ಸಂಕೇತವಾಯಿತು ಎಂದು ಪ್ರಧಾನಿ ಹೇಳಿದರು.ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ 2022 ತಂಡದ ಐಎಫ್‌ಎಸ್ ಪ್ರಶಿಕ್ಷಣಾರ್ಥಿ ಅಧಿಕಾರಿಗಳು
July 25th, 07:56 pm
ಭಾರತೀಯ ವಿದೇಶಾಂಗ ಸೇವೆ(ಐಎಫ್ಎಸ್)ಯ 2022ರ ತಂಡದ ಪ್ರಶಿಕ್ಷಣಾರ್ಥಿ ಅಧಿಕಾರಿಗಳು ಇಂದು ಮುಂಜಾನೆ ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ 7ನೇ ಸಂಖ್ಯೆಯ ನಿವಾಸದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಜಿ20 ರಾಷ್ಟ್ರಗಳ ಇಂಧನ ಸಚಿವರ ಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ವಿಡಿಯೊ ಸಂದೇಶದ ಪಠ್ಯ
July 22nd, 10:00 am
ನಮ್ಮಲ್ಲಿನ ವಿಭಿನ್ನ ನೈಜತೆಗಳನ್ನು ಗಮನಿಸಿದರೆ, ಶಕ್ತಿಯ ಪರಿವರ್ತನೆಗೆ ನಮ್ಮ ಮಾರ್ಗಗಳು ವಿಭಿನ್ನವಾಗಿವೆ. ಆದರೆ, ನಮ್ಮೆಲ್ಲರ ಗುರಿಗಳು ಒಂದೇ ಎಂದು ನಾನು ದೃಢವಾಗಿ ನಂಬುತ್ತೇನೆ. ಹಸಿರು ಇಂಧನದ ಬೆಳವಣಿಗೆ ಮತ್ತು ಶಕ್ತಿ ಪರಿವರ್ತನೆಯಲ್ಲಿ ಭಾರತವು ಮಹತ್ತರವಾದ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಮತ್ತು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ನಾವು ನಮ್ಮ ಹವಾಮಾನ ಬದ್ಧತೆಗಳ ಮೇಲೆ ಅಚಲವಾಗಿ ಚಲಿಸುತ್ತಿದ್ದೇವೆ. ಹವಾಮಾನ ಕ್ರಮದಲ್ಲಿ ಭಾರತ ನಾಯಕತ್ವವನ್ನು ತೋರಿಸಿದೆ. ನಾವು ನಮ್ಮ ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಒಂಬತ್ತು ವರ್ಷಗಳ ಮುಂಚಿತವಾಗಿಯೇ ಸಾಧಿಸಿದ್ದೇವೆ. ನಾವು ಈಗ ಹೆಚ್ಚಿನ ಗುರಿಯನ್ನು ಹೊಂದಿದ್ದೇವೆ. ನಾವು 2030 ರ ವೇಳೆಗೆ ಶೇಕಡಾ 50 ರಷ್ಟು ಪಳೆಯುಳಿಕೆ ರಹಿತ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸಲು ಯೋಜಿಸಿದ್ದೇವೆ. ಸೌರ ಮತ್ತು ಪವನ ಶಕ್ತಿಯ ಜಾಗತಿಕ ನಾಯಕರಲ್ಲಿ ಭಾರತವೂ ಸಹ ಇದೆ. ಜಿ20 ಕಾರ್ಯತಂಡದ ಪ್ರತಿನಿಧಿಗಳು ಪಾವಗಡ ಸೋಲಾರ್ ಪಾರ್ಕ್ ಮತ್ತು ಮೊಧೇರಾ ಸೋಲಾರ್ ಗ್ರಾಮಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ. ಶುದ್ಧ ಇಂಧನಕ್ಕೆ ಭಾರತದ ಬದ್ಧತೆಯ ಮಟ್ಟ ಮತ್ತು ಪ್ರಮಾಣವನ್ನು ಅವರು ಸನಿಹದಿಂದ ವೀಕ್ಷಿಸಿದ್ದಾರೆ.ಜಿ-20 ಇಂಧನ ಸಚಿವರ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
July 22nd, 09:48 am
ಪ್ರತಿಯೊಂದು ರಾಷ್ಟ್ರವು ವಿಭಿನ್ನವಾದ ವಾಸ್ತವತೆ ಮತ್ತು ಇಂಧನ ಪರಿವರ್ತನೆಯ ಮಾರ್ಗ ಹೊಂದಿದ್ದರೂ ಸಹ, ಪ್ರತಿಯೊಂದು ದೇಶದ ಗುರಿಗಳು ಒಂದೇ ಆಗಿರುತ್ತವೆ. ಹಸಿರು ಬೆಳವಣಿಗೆ ಮತ್ತು ಇಂಧನ ಸ್ಥಿತ್ಯಂತರದಲ್ಲಿ ಭಾರತದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಮತ್ತು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಜತೆಗೆ ಅದು ಹವಾಮಾನ ಬದ್ಧತೆಯ ಕಡೆಗೆ ಬಲವಾಗಿ ಚಲಿಸುತ್ತಿದೆ. ಭಾರತವು ತನ್ನ ಉರವಲು ರಹಿತ ಸ್ಥಾಪಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಗುರಿಯನ್ನು 9 ವರ್ಷಗಳ ಮೊದಲೇ ಸಾಧಿಸಿದೆ, ಇನ್ನೂ ಹೆಚ್ಚಿನ ಗುರಿ ಹೊಂದಿದೆ. 2030ರ ವೇಳೆಗೆ ರಾಷ್ಟ್ರವು 50 ಪ್ರತಿಶತ ಉರವಲುರಹಿತ ಸ್ಥಾಪಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಸಾಧಿಸಲು ಯೋಜಿಸಿದೆ. “ಸೌರ ಮತ್ತು ಪವನ ಶಕ್ತಿ ಉತ್ಪಾದನೆಯ ಜಾಗತಿಕ ನಾಯಕರಲ್ಲಿ ಭಾರತವೂ ಒಂದಾಗಿದೆ”, ಪಾವಗಡ ಸೋಲಾರ್ ಪಾರ್ಕ್ ಮತ್ತು ಮೋದಗೇರಾ ಸೋಲಾರ್ ಪಾರ್ಕ್‌ಗೆ ಭೇಟಿ ನೀಡುವ ಮೂಲಕ ಕಾರ್ಯಕಾರಿ ಗುಂಪಿನ ಪ್ರತಿನಿಧಿಗಳು ಭಾರತದ ಬದ್ಧತೆಯ ಮಟ್ಟ ಮತ್ತು ಪ್ರಮಾಣವನ್ನು ವೀಕ್ಷಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ನಿಯೋಜಿತ ಅಧ್ಯಕ್ಷ ಡಾ. ಸುಲ್ತಾನ್ ಅಲ್ ಜಾಬರ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ
July 15th, 05:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಜುಲೈ 2023 ರಂದು ಅಬುಧಾಬಿಯಲ್ಲಿ ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ನಿಯೋಜಿತ ಅಧ್ಯಕ್ಷ ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ ಗ್ರೂಪ್ ಸಂಸ್ಥೆಯ ಸಿಇಒ ಡಾ. ಸುಲ್ತಾನ್ ಅಲ್ ಜಾಬರ್ ಅವರನ್ನು ಭೇಟಿಯಾದರು.ಅಮೆರಿಕ ಸಂಸತ್ತಿನ(ಕಾಂಗ್ರೆಸ್) ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
June 23rd, 07:17 am
ಅಮೆರಿಕ ಸಂಸತ್ತನ್ನು (ಕಾಂಗ್ರೆಸ್) ಉದ್ದೇಶಿಸಿ ಮಾತನಾಡುವುದು ಯಾವಾಗಲೂ ದೊಡ್ಡ ಗೌರವವಾಗಿದೆ. ಇದನ್ನು ನಾನು 2 ಬಾರಿ ಮಾಡುವುದು ಅಸಾಧಾರಣ ವಿಶೇಷತೆಯಾಗಿದೆ. ಈ ಗೌರವಕ್ಕಾಗಿ ಭಾರತದ 140 ಕೋಟಿ ಭಾರತೀಯರ ಪರವಾಗಿ ನಾನು ನನ್ನ ತುಂಬು ಕೃತಜ್ಞತೆ ಸಲ್ಲಿಸುತ್ತೇನೆ. 2016ರಲ್ಲಿ ನಿಮ್ಮಲ್ಲಿ ಅರ್ಧದಷ್ಟು ಜನರು ಇಲ್ಲಿದ್ದೀರಿ ಎಂದು ನಾನು ಭಾವಿಸುತ್ತೇನೆ. ಹಳೆಯ ಸ್ನೇಹಿತರಂತೆ ನಿಮ್ಮ ಪ್ರೀತಿಯನ್ನು ನಾನು ಅನುಭವಿಸುತ್ತೇನೆ. ಇನ್ನರ್ಧ ಸದಸ್ಯರಲ್ಲಿ ಹೊಸ ಸ್ನೇಹದ ಉತ್ಸಾಹವೂ ಕಾಣುತ್ತಿದೆ. 2016ರಲ್ಲಿ ನಾನು ಇಲ್ಲಿ ಭೇಟಿಯಾದ ಸೆನೆಟರ್ ಹ್ಯಾರಿ ರೀಡ್, ಸೆನೆಟರ್ ಜಾನ್ ಮೆಕೇನ್, ಸೆನೆಟರ್ ಒರಿನ್ ಹ್ಯಾಚ್, ಎಲಿಜಾ ಕಮ್ಮಿಂಗ್ಸ್, ಅಲ್ಸಿ ಹೇಸ್ಟಿಂಗ್ಸ್ ಮತ್ತು ಇತರರನ್ನು ನಾನು ನೆನಪಿಸಿಕೊಳ್ಳುತ್ತೇನೆ, ಆದರೆ ಅವರೀಗ ಇಲ್ಲಿಲ್ಲ ದುಃಖಕರವಾಗಿದೆ.ಅಮೆರಿಕ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
June 23rd, 07:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜೂನ್ 22ರಂದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಘನತೆವೆತ್ತ ಶ್ರೀ ಕೆವಿನ್ ಮೆಕಾರ್ಥಿ ಅವರ ಆಹ್ವಾನದ ಮೇರೆಗೆ ಅಮೆರಿಕ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸೆನೆಟ್ ಬಹುಮತದ ನಾಯಕ ಗೌರವಾನ್ವಿತ ಶ್ರೀ ಚಾರ್ಲ್ಸ್ ಶುಮರ್ ; ಸೆನೆಟ್ ರಿಪಬ್ಲಿಕನ್ ನಾಯಕ ಗೌರವಾನ್ವಿತ ಶ್ರೀ ಮಿಚ್ ಮೆಕಾನೆಲ್ ; ಮತ್ತು ಹೌಸ್ ಡೆಮಾಕ್ರಟಿಕ್ ಲೀಡರ್ ಗೌರವಾನ್ವಿತ ಶ್ರೀ ಹಕೀಮ್ ಜೆಫ್ರಿಸ್ ಉಪಸ್ಥಿತರಿದ್ದರು.ಮೈಸೂರಿನಲ್ಲಿ ನಡೆದ ʻಹುಲಿ ಯೋಜನೆಯ 50ನೇ ವರ್ಷಾಚರಣೆʼ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
April 09th, 01:00 pm
ಮೊದಲಿಗೆ, ನಾನು ಒಂದು ಗಂಟೆ ತಡವಾಗಿ ಬಂದಿದ್ದಕ್ಕಾಗಿ ನಿಮ್ಮೆಲ್ಲರ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಬೆಳಗ್ಗೆ ಆರು ಗಂಟೆಗೆ ಹೊರಟೆ; ಕಾಡಿಗೆ ಭೇಟಿ ನೀಡಿದ ನಂತರ ಸಮಯಕ್ಕೆ ಸರಿಯಾಗಿ ಹಿಂತಿರುಗುತ್ತೇನೆ ಎಂದು ನಾನು ಭಾವಿಸಿದ್ದೆ. ನಿಮ್ಮೆಲ್ಲರನ್ನೂ ಕಾಯುವಂತೆ ಮಾಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಹುಲಿಗಳ ಸಂಖ್ಯೆ ಏರಿಕೆ ದೃಷ್ಟಿಯಿಂದ ಇದು ಹೆಮ್ಮೆಯ ಕ್ಷಣವಾಗಿದೆ; ಈ ಕುಟುಂಬವು ವಿಸ್ತರಿಸುತ್ತಿದೆ. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುಲಿಗೆ ಗೌರವ ತೋರುವಂತೆ ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಧನ್ಯವಾದಗಳು!ಕರ್ನಾಟಕದ ಮೈಸೂರಿನಲ್ಲಿ 'ಹುಲಿ ಯೋಜನೆಯ 50ನೇ ವರ್ಷಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ
April 09th, 12:37 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 'ಹುಲಿ ಯೋಜನೆಯ 50ನೇ ವರ್ಷಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ʻಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಮೈತ್ರಿಕೂಟಕ್ಕೆ(ಐಬಿಸಿಎ) ಚಾಲನೆ ನೀಡಿದರು. ʻಹುಲಿ ಸಂರಕ್ಷಣೆಗೆ ಅಮೃತ ಕಾಲದ ದೃಷ್ಟಿಕೋನʼ ಶೀರ್ಷಿಕೆಯ ಹುಲಿ ಮೀಸಲು ಪ್ರದೇಶಗಳ ನಿರ್ವಹಣಾ ಪರಿಣಾಮಕಾರಿತ್ವ ಮೌಲ್ಯಮಾಪನದ 5ನೇ ಸುತ್ತಿನ ಸಾರಾಂಶ ವರದಿಯನ್ನು ಅವರು ಬಿಡುಗಡೆ ಮಾಡಿದರು. ದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಘೋಷಿಸಿದರು. ಜೊತೆಗೆ ʻಅಖಿಲ ಭಾರತ ಹುಲಿ ಅಂದಾಜುʼ(5 ನೇ ಸುತ್ತು) ಸಾರಾಂಶ ವರದಿಯನ್ನು ಬಿಡುಗಡೆ ಮಾಡಿದರು. ಹುಲಿ ಯೋಜನೆ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯವನ್ನೂ ಅವರು ಬಿಡುಗಡೆ ಮಾಡಿದರು.ನವದೆಹಲಿಯಲ್ಲಿ ನಡೆದ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
March 18th, 02:43 pm
ಇಂದಿನ ಸಮ್ಮೇಳನದಲ್ಲಿ ನನ್ನ ಜೊತೆಗಿರುವ ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ನರೇಂದ್ರ ತೋಮರ್, ಮನ್ಸುಖ್ ಮಾಂಡವಿಯಾ, ಶ್ರೀ ಪಿಯೂಷ್ ಗೋಯೆಲ್ ಮತ್ತು ಶ್ರೀ ಕೈಲಾಶ್ ಚೌಧರಿ ಅವರೇ; ಗಯಾನಾ, ಮಾಲ್ಡೀವ್ಸ್, ಮಾರಿಷಸ್, ಶ್ರೀಲಂಕಾ, ಸುಡಾನ್, ಸುರಿನಾಮ್ ಮತ್ತು ಗಾಂಬಿಯಾದ ಗೌರವಾನ್ವಿತ ಸಚಿವರೇ; ವಿಶ್ವದ ವಿವಿಧ ಭಾಗಗಳಿಂದ ಬಂದ ಕೃಷಿ, ಪೌಷ್ಠಿಕಾಂಶ ಮತ್ತು ಆರೋಗ್ಯ ಕ್ಷೇತ್ರದ ವಿಜ್ಞಾನಿಗಳು ಮತ್ತು ತಜ್ಞರೇ; ದೇಶದ ವಿವಿಧ ʻಎಫ್ ಪಿ ಒʼ ಗಳು ಮತ್ತು ನವೋದ್ಯಮ ಜಗತ್ತಿನ ಯುವ ಸ್ನೇಹಿತರೇ; ದೇಶದ ಮೂಲೆ ಮೂಲೆಗಳಿಂದ ಹಾಜರಾದ ಲಕ್ಷಾಂತರ ರೈತರೇ; ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ
March 18th, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ʻಎನ್‌ಎಎಸ್‌ಎʼ ಕಾಂಪ್ಲೆಕ್ಸ್‌ನ ʻಸುಬ್ರಮಣ್ಯಂ ಹಾಲ್ʼನಲ್ಲಿ ʻಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನʼವನ್ನು ಉದ್ಘಾಟಿಸಿದರು. ಎರಡು ದಿನಗಳ ಈ ಜಾಗತಿಕ ಸಮ್ಮೇಳನವು ಸಿರಿಧಾನ್ಯಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಒಳಗೊಂಡಿದೆ. ಉದಾಹರಣೆಗೆ ಉತ್ಪಾದಕರು, ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರಲ್ಲಿ ಸಿರಿಧಾನ್ಯಗಳ ಪ್ರಚಾರ ಮತ್ತು ಜಾಗೃತಿ; ಸಿರಿಧಾನ್ಯಗಳ ಮೌಲ್ಯ ಸರಪಳಿ ಅಭಿವೃದ್ಧಿ; ಸಿರಿಧಾನ್ಯಗಳ ಆರೋಗ್ಯ ಮತ್ತು ಪೌಷ್ಠಿಕಾಂಶದ ಅಂಶಗಳು; ಮಾರುಕಟ್ಟೆ ಸಂಪರ್ಕಗಳು; ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ.ನವದೆಹಲಿಯಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜಯಂತಿ ಆಚರಣೆಯಲ್ಲಿ ಪ್ರಧಾನ ಮಂತ್ರಿ ಅವರು ಭಾಷಣದ ಕನ್ನಡ ಅನುವಾದ
February 12th, 11:00 am
ಕಾರ್ಯಕ್ರಮದಲ್ಲಿರುವ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜೀ, ಸರ್ವದೇಶಿಕ್ ಆರ್ಯ ಪ್ರತಿನಿಧಿ ಸಭಾದ ಅಧ್ಯಕ್ಷರಾದ ಶ್ರೀ ಸುರೇಶ್ ಚಂದ್ರ ಆರ್ಯ ಜೀ, ದೆಹಲಿ ಆರ್ಯ ಪ್ರತಿನಿಧಿ ಸಭಾದ ಅಧ್ಯಕ್ಷರಾದ ಶ್ರೀ ಧರಂಪಾಲ್ ಆರ್ಯ ಜೀ, ಶ್ರೀ ವಿನಯ್ ಆರ್ಯ ಜೀ ಮತ್ತು ಉಪಸ್ಥಿತರಿರುವ ನನ್ನ ಸಂಪುಟ ಸಹೋದ್ಯೋಗಿಗಳಾದ ಕಿಶನ್ ರೆಡ್ಡಿ ಜೀ, ಮೀನಾಕ್ಷಿ ಲೇಖಿ ಜೀ ಮತ್ತು ಅರ್ಜುನ್ ರಾಮ್ ಮೇಘವಾಲ್ ಜೀ, ಎಲ್ಲಾ ಪ್ರತಿನಿಧಿಗಳು ಹಾಗೂ ಸಹೋದರ ಸಹೋದರಿಯರೇ!ನವದೆಹಲಿಯಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜಯಂತಿ ಆಚರಣೆ ಉದ್ಘಾಟಿಸಿದ ಪ್ರಧಾನಿ
February 12th, 10:55 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಇಂದಿರಾಗಾಂಧಿ ಒಳ ಕ್ರೀಡಾಂಗಣದಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜಯಂತಿ ಸ್ಮರಣಾರ್ಥ ಒಂದು ವರ್ಷವಿಡೀ ನಡೆಯುವ ಆಚರಣೆಗೆ ಚಾಲನೆ ನೀಡಿದರು. ಅಲ್ಲದೆ ಅವರು ಅದರ ಸ್ಮರಣಾರ್ಥ ಲಾಂಛನವನ್ನೂ ಸಹ ಬಿಡುಗಡೆ ಮಾಡಿದರು.ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಸಮಾರೋಪ ನಾಯಕರ ಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಮಾರೋಪ ಭಾಷಣ
January 13th, 06:37 pm
ನಿಮ್ಮ ಸ್ಪೂರ್ತಿದಾಯಕ ಮಾತುಗಳಿಗೆ ಧನ್ಯವಾದಗಳು..! ಇದು ನಿಜಕ್ಕೂ ಅನಿಸಿಕೆ ಮತ್ತು ಆಲೋಚನೆಗಳ ಉಪಯುಕ್ತ ವಿನಿಮಯವಾಗಿದೆ. ಇದು ಜಾಗತಿಕ ದಕ್ಷಿಣದ ಸಾಮಾನ್ಯ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ.ಭಾರತದ ಜಿ20 ಅಧ್ಯಕ್ಷತೆಯ ಲಾಂಛನ, ಘೋಷವಾಕ್ಯ ಮತ್ತು ಜಾಲತಾಣ ಅನಾವರಣ
November 08th, 07:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಜಿ20 ಅಧ್ಯಕ್ಷತೆಯ ಲಾಂಛನ, ಘೋಷವಾಕ್ಯ ಮತ್ತು ಜಾಲತಾಣವನ್ನು ಅನಾವರಣಗೊಳಿಸಿದರು.India is a rapidly developing economy and continuously strengthening its ecology: PM Modi
September 23rd, 04:26 pm
PM Modi inaugurated National Conference of Environment Ministers in Ekta Nagar, Gujarat via video conferencing. He said that the role of the Environment Ministry was more as a promoter of the environment rather than as a regulator. He urged the states to own the measures like vehicle scrapping policy and ethanol blending.