ಅಸ್ಸಾಂ ರೋಜ್‌ಗರ್ ಮೇಳದಲ್ಲಿ ಪ್ರಧಾನ ಮಂತ್ರಿ ವೀಡಿಯೊ ಸಂದೇಶ
May 25th, 05:13 pm
ಅಸ್ಸಾಂ ಸರ್ಕಾರದಲ್ಲಿ ಉದ್ಯೋಗ ಪಡೆದ ಎಲ್ಲಾ ಯುವಕರು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ. ಕಳೆದ ತಿಂಗಳು ಬಿಹು ಸಂದರ್ಭದಲ್ಲಿ ನಾನು ಅಸ್ಸಾಂಗೆ ಬಂದಿದ್ದೆ. ಆ ಅದ್ಧೂರಿ ಘಟನೆಯ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಂದು ನಡೆದ ಘಟನೆ ಅಸ್ಸಾಮಿ ಸಂಸ್ಕೃತಿಯ ವೈಭವೀಕರಣದ ಪ್ರತೀಕವಾಗಿತ್ತು. ಅಸ್ಸಾಂನ ಬಿಜೆಪಿ ಸರ್ಕಾರವು ಯುವಜನರ ಭವಿಷ್ಯದ ಬಗ್ಗೆ ತುಂಬಾ ಗಂಭೀರವಾಗಿದೆ ಎನ್ನುವುದರ ಸಂಕೇತವೇ ಇಂದಿನ ‘ರೋಜ್‌ಗಾರ್ ಮೇಳ’ (ಉದ್ಯೋಗ ಮೇಳ). ಅಸ್ಸಾಂನಲ್ಲಿ ಉದ್ಯೋಗ ಮೇಳದ ಮೂಲಕ ಈಗಾಗಲೇ 40,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಇಂದು ಸುಮಾರು 45,000 ಯುವಕರಿಗೆ ನೇಮಕಾತಿ ಪತ್ರ ಹಸ್ತಾಂತರಿಸಲಾಗಿದೆ. ಎಲ್ಲಾ ಯುವಕರಿಗೆ ಉಜ್ವಲ ಭವಿಷ್ಯ ಸಿಗಲೆಂದು ಹಾರೈಸುತ್ತೇನೆ.ವಿಡಿಯೋ ಸಂದೇಶದ ಮೂಲಕ ಅಸ್ಸಾಂ ರೋಜ್ ಗಾರ್ ಮೇಳ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
May 25th, 05:00 pm
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಸ್ಸಾಂ ಸರ್ಕಾರದಲ್ಲಿ ಸರ್ಕಾರಿ ಉದ್ಯೋಗಗಳಿಗೆ ನೇಮಕಗೊಂಡ ಯುವಕರು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿದರು. ಕಳೆದ ತಿಂಗಳು ಬಿಹು ಸಂದರ್ಭದಲ್ಲಿ ತಾವು ರಾಜ್ಯಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಅವರು, ಅಸ್ಸಾಮಿ ಸಂಸ್ಕೃತಿಯ ವೈಭವೀಕರಣದ ಸಂಕೇತವಾದ ಭವ್ಯ ಸಮಾರಂಭದ ನೆನಪು ಅವರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ ಎಂದರು. ಇಂದಿನ ರೋಜ್ ಗಾರ್ ಮೇಳವು ಅಸ್ಸಾಂನ ಯುವಜನರ ಭವಿಷ್ಯದ ಬಗೆಗಿನ ಗಂಭೀರತೆಯ ಪ್ರತಿಬಿಂಬವಾಗಿದೆ ಎಂದರು. ಇದಕ್ಕೂ ಮುನ್ನ ಅಸ್ಸಾಂನಲ್ಲಿ ರೋಜ್ ಗಾರ್ ಮೇಳದ ಮೂಲಕ 40 ಸಾವಿರಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಸುಮಾರು 45 ಸಾವಿರ ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ನೀಡಿದ ಅವರು, ಯುವಕರಿಗೆ ಉಜ್ವಲ ಭವಿಷ್ಯದ ಶುಭ ಹಾರೈಸಿದರು.ಗುಜರಾತಿನ ಗಾಂಧಿನಗರದಲ್ಲಿ ನಡೆದ ಅಖಿಲ ಭಾರತೀಯ ಶಿಕ್ಷಣ ಸಂಘ ಸಮಾವೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಅನುವಾದ
May 12th, 10:31 am
ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಮತ್ತು ತಮ್ಮ ಜೀವನದುದ್ದಕ್ಕೂ ಶಿಕ್ಷಕರಾಗಿ ತಮ್ಮನ್ನು ಪರಿಚಯಿಸಿಕೊಂಡ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಗೆಲುವಿನಿಂದ ಗೆದ್ದ ಪರಷೋತ್ತಮ್ ರೂಪಾಲಾ ಜಿ, ಸಿ.ಆರ್.ಪಾಟೀಲ್ ಜೀ ಅವರೇ, ಗುಜರಾತ್ ಸರ್ಕಾರದ ಸಚಿವರೇ, ಅಖಿಲ ಭಾರತೀಯ ಪ್ರಾಥಮಿಕ ಶಿಕ್ಷಕ ಸಂಘದ ಎಲ್ಲಾ ಸದಸ್ಯರು, ದೇಶದ ಮೂಲೆ ಮೂಲೆಯಿಂದ ಬಂದಿರುವ ಗೌರವಾನ್ವಿತ ಶಿಕ್ಷಕರು, ಮಹನೀಯರೇ ಮತ್ತು ಮಹಿಳೆಯರೇ!ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಅಖಿಲ ಭಾರತೀಯ ಶಿಕ್ಷಾ ಸಂಘ ಅಧಿವೇಷನದಲ್ಲಿ ಪ್ರಧಾನಮಂತ್ರಿ ಭಾಗಿ
May 12th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ 29ನೇ ದ್ವೈವಾರ್ಷಿಕ ಸಮ್ಮೇಳನವಾದ ಅಖಿಲ ಭಾರತೀಯ ಶಿಕ್ಷಾ ಸಂಘ ಅಧಿವೇಷದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನದಲ್ಲೂ ಪ್ರಧಾನಮಂತ್ರಿಯವರು ಹೆಜ್ಜೆ ಹಾಕಿದರು. ಈ ಸಮ್ಮೇಳನದ ವಿಷಯ 'ಶಿಕ್ಷಕರು ಶಿಕ್ಷಣದ ಪರಿವರ್ತನೆಯ ಹೃದಯ ಭಾಗದಲ್ಲಿದ್ದಾರೆ'.ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 19 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ
December 27th, 11:30 am
ಸ್ನೇಹಿತರೆ, ದೇಶದ ಸಾಮಾನ್ಯ ಜನರು ಕೂಡ ಈ ಬದಲಾವಣೆಯನ್ನು ಅನುಭವಿಸಿದ್ದಾರೆ. ನಾನು ದೇಶದಲ್ಲಿ ಒಂದು ಸದಾಶಯದ ಪ್ರವಾಹವನ್ನೂ ಕಂಡಿದ್ದೇನೆ. ಹಲವಾರು ಸವಾಲುಗಳು ಎದುರಾದವು. ಹಲವಾರು ಸಂಕಷ್ಟಗಳು ಎದುರಾದವು. ಅನೇಕ ತೊಂದರೆಗಳು ಎದುರಾದವು. ಕೊರೊನದಿಂದಾಗಿ ವಿಶ್ವದಲ್ಲಿ ಸರಬರಾಜು ಸರಪಳಿಯಲ್ಲಿ ಅನೇಕ ತೊಂದರೆಗಳು ಎದುರಾದವು. ಆದರೆ ನಾವು ಪ್ರತಿಯೊಂದು ಸಂಕಷ್ಟದಿಂದಲೂ ಹೊಸತೊಂದು ಪಾಠವನ್ನು ಕಲಿತೆವು. ದೇಶದಲ್ಲಿ ಹೊಸ ಸಾಮರ್ಥ್ಯವೂ ಸೃಷ್ಟಿಯಾಯಿತು. ಶಬ್ದಗಳಲ್ಲಿ ಹೇಳಬೇಕೆಂದರೆ ಈ ಸಾಮರ್ಥ್ಯದ ಹೆಸರು ಸ್ವಾವಲಂಬನೆ.India has a rich legacy in science, technology and innovation: PM Modi
December 22nd, 04:31 pm
Prime Minister Narendra Modi delivered the inaugural address at India International Science Festival (IISF) 2020. PM Modi said, All our efforts are aimed at making India the most trustworthy centre for scientific learning. At the same time, we want our scientific community to share and grow with the best of global talent.PM delivers inaugural address at IISF 2020
December 22nd, 04:27 pm
Prime Minister Narendra Modi delivered the inaugural address at India International Science Festival (IISF) 2020. PM Modi said, All our efforts are aimed at making India the most trustworthy centre for scientific learning. At the same time, we want our scientific community to share and grow with the best of global talent.ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಅವರ ಜನ್ಮ ದಿನದಂದು ಶ್ರದ್ಧಾಂಜಲಿ ಸಲ್ಲಿಸಿ;ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ನಮಿಸಿದ ಪ್ರಧಾನಿ
September 05th, 11:14 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ತಮ್ಮ ನಮನ ಸಲ್ಲಿಸಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಪರಿವರ್ತನೆಗಾಗಿ ಬೋಧನೆ, ಸಬಲೀಕರಣಕ್ಕಾಗಿ ಶಿಕ್ಷಣ, ಮುನ್ನಡೆಸಲು ಕಲಿಕೆ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
August 27th, 11:36 am
ಮನ್ ಕಿ ಬಾತ್' ಸಮಯದಲ್ಲಿ ಮೋದಿ ಇತ್ತೀಚಿನ ಹಿಂಸಾಚಾರದ ಘಟನೆಗಳ ಬಗ್ಗೆ ಮಾತನಾಡಿದರು ಮತ್ತು ಅಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಪುನರಾವರ್ತಿಸಿದರು. ಭಾರತವು 'ಅಹಿಂಸಾ ಪರಮೋ ಧರ್ಮ'ದ ಭೂಮಿ ಎಂದು ಅವರು ಹೇಳಿದರು. ಶ್ರೀ ಮೋದಿ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಉತ್ಸವಗಳ ಕುರಿತು ಮಾತನಾಡಿದರು. ಹಬ್ಬಗಳನ್ನು ಸ್ವಚ್ಛತೆಯ ಸಂಕೇತವಾಗಿ ಮಾಡಲು ಜನರನ್ನು ಪ್ರೇರೇಪಿಸಿದರು. ಸಮಾಜ, ಯುವಕರು ಮತ್ತು ಕ್ರೀಡೆಗಳನ್ನು ರೂಪಾಂತರಗೊಳಿಸಲು ಶಿಕ್ಷಕರ ಪ್ರಮುಖ ಪಾತ್ರದ ಬಗ್ಗೆ ಅವರು ಮಾತನಾಡಿದರು .