ಪ್ರಧಾನಮಂತ್ರಿ ಸಿಂಗಾಪುರದ ಎಇಎಂಗೆ ಭೇಟಿ

September 05th, 12:31 pm

ಪ್ರಧಾಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿ ಗೌರವಾನ್ವಿತ ಶ್ರೀ ಲಾರೆನ್ಸ್ ವಾಂಗ್ ಅವರೊಂದಿಗೆ ಸಿಂಗಾಪುರದ ಮುಂಚೂಣಿ ಸೆಮಿಕಂಡಕ್ಟರ್‌ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಕಂಪನಿ ಎಇಎಂಗೆ ಭೇಟಿ ನೀಡಿದ್ದರು. ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಣಿಯಲ್ಲಿ ಎಇಎಂನ ಪಾತ್ರ, ಅದರ ಕಾರ್ಯಾಚರಣೆಗಳು ಮತ್ತು ಭಾರತದ ಯೋಜನೆಗಳ ಬಗ್ಗೆ ಅವರಿಗೆ ವಿವರಿಸಲಾಯಿತು. ಸಿಂಗಾಪುರ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ಸಿಂಗಾಪುರದಲ್ಲಿ ಸೆಮಿಕಂಡಕ್ಟರ್‌ಗೆ ಪೂರಕ ಪರಿಸರ ಅಭಿವೃದ್ಧಿ ಮತ್ತು ಭಾರತದೊಂದಿಗೆ ಸಹಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿತು. ಈ ವಲಯದ ಹಲವು ಇತರ ಸಿಂಗಾಪುರದ ಕಂಪನಿಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರೇಟರ್ ನೋಯ್ಡಾದಲ್ಲಿ 2024ರ ಸೆಪ್ಟೆಂಬರ್ 11ರಿಂದ 13ರವರೆಗೆ ನಡೆಯಲಿರುವ ಸೆಮಿಕಾನ್ ಇಂಡಿಯಾ (SEMICON INDIA) ಪ್ರದರ್ಶನದಲ್ಲಿ ಭಾಗವಹಿಸಲು ಸಿಂಗಾಪುರದ ಸೆಮಿಕಂಡಕ್ಟರ್ ಕಂಪನಿಗಳಿಗೆ ಪ್ರಧಾನಮಂತ್ರಿ ಆಹ್ವಾನ ನೀಡಿದರು.

ಸಿಂಗಾಪುರದ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

September 05th, 10:22 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಂಗಾಪುರದ ಗೌರವಾನ್ವಿತ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಿದ್ದರು. ಪ್ರಧಾನಮಂತ್ರಿ ವಾಂಗ್ ಅವರು ಸಂಸತ್‌ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು.

ಸಿಂಗಾಪುರದ ಪ್ರಧಾನ ಮಂತ್ರಿ ಭೇಟಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ

September 05th, 09:00 am

ನೀವು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ನಮ್ಮ ಮೊದಲ ಭೇಟಿಯಾಗಿದೆ. ಇದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. 4-ಜಿ ನಾಯಕತ್ವದಲ್ಲಿ ಸಿಂಗಾಪುರ ಇನ್ನಷ್ಟು ವೇಗವಾಗಿ ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ.

PM Modi arrives in Singapore

September 04th, 02:00 pm

PM Modi arrived in Singapore. He will hold talks with President Tharman Shanmugaratnam, Prime Minister Lawrence Wong, Senior Minister Lee Hsien Loong and Emeritus Senior Minister Goh Chok Tong.

​​​​​​​ಭಾರತದ ಸಂಗೀತ ಇತಿಹಾಸವು ವೈವಿಧ್ಯತೆಯ ಸ್ವರಮೇಳವಾಗಿದ್ದು, ಸಾವಿರಾರು ವರ್ಷಗಳಿಂದ ವಿಕಸನಗೊಂಡ ಲಯಗಳ ಮೂಲಕ ಪ್ರತಿಧ್ವನಿಸುತ್ತದೆ: ಪ್ರಧಾನ ಮಂತ್ರಿಗಳು

November 14th, 09:43 am

ಸಿಂಗಾಪುರದ ಉಪ ಪ್ರಧಾನ ಮಂತ್ರಿಗಳ ಸಿತಾರ್ ನುಡಿಸುವ ಅಭಿರುಚಿಯನ್ನು ಪ್ರಧಾನ ಮಂತ್ರಿಗಳು ಶ್ಲಾಘಿಸಿದ್ದಾರೆ.