​​​​​​​ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದ ಉತ್ತರ ಪ್ರದೇಶ ವಿಶ್ವಕರ್ಮ ಸಮುದಾಯ

January 08th, 03:20 pm

ಉತ್ತರ ಪ್ರದೇಶದ ಗೋರಖ್‌ ಪುರ್‌ ನ ಶ್ರೀ ಲಕ್ಷ್ಮೀ ಪ್ರಜಾಪತಿ ಕುಟುಂಬ ಟೆರ್ರಾಕೋಟ ರೇಷ್ಮೇ ಉದ್ಯಮದಲ್ಲಿ ತೊಡಗಿದ್ದು, ಶ್ರೀ ಲಕ್ಷ್ಮೀ ಸ್ವಸಹಾಯ ಗುಂಪು ರಚಿಸಿಕೊಂಡಿದೆ. ಇಲ್ಲಿ ಒಟ್ಟು 12 ಮಂದಿ ಸದಸ್ಯರಿದ್ದಾರೆ ಮತ್ತು 75 ಮಂದಿ ಸಹ ಸದಸ್ಯರ ಗುಂಪು ಇದಾಗಿದೆ. ಇವರ ವಾರ್ಷಿಕ ಆದಾಯ ಒಂದು ಕೋಟಿ ರೂಪಾಯಿಯಷ್ಟಿದ್ದು, ತಮ್ಮ ಉದ್ಯಮ ಕುರಿತು ಪ್ರಧಾನಮಂತ್ರಿಯವರಿಗೆ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಪ್ರಯೋಜನಗಳನ್ನು ಪಡೆಯುವ ಬಗ್ಗೆ ಪ್ರಧಾನಮಂತ್ರಿಯವರು ವಿಚಾರಿಸಿದಾಗ ‍ಶ್ರೀ ಪ್ರಜಾಪತಿ ಅವರು, ಮುಖ್ಯಮಂತ್ರಿಯವರು ದೂರದೃಷ್ಟಿಯಿಂದ ಈ ಮಹತ್ವದ ಯೋಜನೆ ಜಾರಿ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಪ್ರತಿಯೊಬ್ಬ ಕರಕುಶಲ ಕರ್ಮಿಗಳು ಪರಿಕರಗಳ ಕಿಟ್‌, ವಿದ್ಯುತ್‌ ಹಾಗೂ ಮಣ್ಣಿನ ಕೆಲಸ ಮಾಡುವ ಯಂತ್ರಗಳನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾದ ವಿವಿಧ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಸಹ ಪಡೆಯುತ್ತಿದ್ದಾರೆ ಎಂದರು.