ಭಾರತದ ಪ್ರಧಾನ ಮಂತ್ರಿಗಳ ಉಕ್ರೇನ್ ಭೇಟಿ ಕುರಿತಂತೆ ಭಾರತ – ಯುಕ್ರೇನ್ ಜಂಟಿ ಹೇಳಿಕೆ
August 23rd, 07:00 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ 2024ರ ಆಗಸ್ಟ್ 23 ರಂದು ಉಕ್ರೇನ್ ಗೆ ಭೇಟಿ ನೀಡಿದರು. 1992 ರಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಆರಂಭವಾದ ಬಳಿಕ ಭಾರತದ ಪ್ರಧಾನಮಂತ್ರಿಯೊಬ್ಬರ ಮೊದಲ ಭೇಟಿ ಇದಾಗಿದೆ.ಪ್ರಧಾನ ಮಂತ್ರಿಯವರ ಉಕ್ರೇನ್ ಭೇಟಿಯ ಸಂದರ್ಭದಲ್ಲಿ ಸಹಿ ಮಾಡಿದ ದಾಖಲೆಗಳ ಪಟ್ಟಿ (ಆಗಸ್ಟ್ 23, 2024)
August 23rd, 06:45 pm
ಕೃಷಿ ಮತ್ತು ಆಹಾರ ಉದ್ಯಮ ಕ್ಷೇತ್ರಗಳಲ್ಲಿ ಸಹಕಾರ ಕುರಿತು ಭಾರತ ಗಣರಾಜ್ಯ ಸರ್ಕಾರ ಮತ್ತು ಉಕ್ರೇನ್ ಸರ್ಕಾರದ ನಡುವಿನ ಒಪ್ಪಂದ.ಯುಕ್ರೇನ್ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಭೇಟಿ
August 23rd, 06:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೈವ್ ನಲ್ಲಿ ಯುಕ್ರೇನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ವೊಲೊಡಿಮಿರ್ ಜೆಲೆನ್ಸ್ಕಿಯವರನ್ನು ಭೇಟಿ ಮಾಡಿದರು. ಮೇರಿನ್ಸ್ಕಿ ಅರಮನೆಗೆ ಆಗಮಿಸಿದ ಪ್ರಧಾನಿಯವರನ್ನು ಯುಕ್ರೇನ್ ಅಧ್ಯಕ್ಷರಾದ ಜೆಲೆನ್ಸ್ಕಿಯವರು ಸ್ವಾಗತಿಸಿದರು.ಹಿಂದಿ ಭಾಷೆ ಕಲಿಯುವ ಉಕ್ರೇನ್ ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿ ಅವರ ಸಂವಾದ
August 23rd, 06:33 pm
ಕೀವ್ ನಲ್ಲಿರುವ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್‌ನಲ್ಲಿ ಹಿಂದಿ ಭಾಷೆಯನ್ನು ಕಲಿಯುತ್ತಿರುವ ಉಕ್ರೇನ್ ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು.ಕೈವ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ಮೋದಿ
August 23rd, 03:25 pm
ಪ್ರಧಾನಿ ಮೋದಿ ಅವರು ಕೈವ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಸೌಹಾರ್ದಯುತ ಸಮಾಜವನ್ನು ನಿರ್ಮಿಸುವಲ್ಲಿ ಮಹಾತ್ಮ ಗಾಂಧಿಯವರ ಶಾಂತಿಯ ಸಂದೇಶದ ಕಾಲಾತೀತ ಪ್ರಸ್ತುತತೆಯನ್ನು ಪ್ರಧಾನಿ ಒತ್ತಿ ಹೇಳಿದರು. ಅವರು ತೋರಿಸಿದ ಮಾರ್ಗವು ಇಂದಿನ ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ನೀಡಿತು ಎಂದು ಅವರು ಗಮನಿಸಿದರು.ಮಕ್ಕಳ ಹುತಾತ್ಮರ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ
August 23rd, 03:24 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈವ್ ನಲ್ಲಿರುವ ಯುಕ್ರೇನ್ ನ ಇತಿಹಾಸದ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಮಕ್ಕಳ ಹುತಾತ್ಮರ ಮಲ್ಟಿಮೀಡಿಯಾ ಪ್ರದರ್ಶನಕ್ಕೆ ಭೇಟಿ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಯುಕ್ರೇನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ವೊಲೊಡಿಮಿರ್ ಜೆಲೆನ್ಸ್ಕಿಯವರೂ ಇದ್ದರು.ಯುಕ್ರೇನ್‌ನ ಕೈವ್‌ಗೆ ಆಗಮಿಸಿದ ಪ್ರಧಾನಿ ಮೋದಿ
August 23rd, 02:14 pm
ಪ್ರಧಾನಿ ನರೇಂದ್ರ ಮೋದಿ ಯುಕ್ರೇನ್‌ನ ಕೈವ್‌ಗೆ ಆಗಮಿಸಿದರು. ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಯುಕ್ರೇನ್‌ಗೆ ಭಾರತೀಯ ಪ್ರಧಾನಿಯ ಮೊದಲ ಭೇಟಿ ಇದಾಗಿದೆ.