ಅದ್ದೂರಿಯಾಗಿ ನಡೆಯುತ್ತಿರುವ “ರಣ್ ಉತ್ಸವ”ದ ಸಮಯದಲ್ಲಿ ಕಛ್ಚ್ ನ ಅದ್ಭುತ ಸಂಸ್ಕೃತಿ ಮತ್ತು ಹೃದಯಸ್ಪರ್ಶಿ ಆತಿಥ್ಯವನ್ನು ಸ್ವೀಕರಿಸಲು, ಪ್ರಾಚೀನ “ಬಿಳುಪು ರಣ್” (ಬಿಳಿಬಿಳಿಯಾಗಿ ಹೊಳೆಯುವ ಮರಳು) ನ ಸೌಂದರ್ಯ ಅನುಭವಿಸಲು ಪ್ರತಿಯೊಬ್ಬರನ್ನು ಒತ್ತಾಯಿಸಿದ ಪ್ರಧಾನಮಂತ್ರಿ

December 21st, 10:08 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ರಣ್ ಉತ್ಸವ”ಕ್ಕೆ ಎಲ್ಲರನ್ನು ಆಹ್ವಾನಿಸಿದ್ದಾರೆ, ಇದು ಮಾರ್ಚ್ 2025 ರವರೆಗೆ ನಡೆಯಲಿದೆ. ಈ ಹಬ್ಬವು ಮರೆಯಲಾಗದ ಅನುಭವವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಗುಜರಾತಿನ ಕಚ್‌ನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗೆ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

October 31st, 07:05 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಕಚ್‌ನ ಕ್ರೀಕ್ ಏರಿಯಾದಲ್ಲಿರುವ ಲಕ್ಕಿ ನಾಲಾದಲ್ಲಿ ಬಿಎಸ್‌ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಸಿಬ್ಬಂದಿಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು.

"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ ನ ಕಚ್‌ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು "

October 31st, 07:00 pm

ಗುಜರಾತ್‌ ನ ಕಚ್‌ ನ ಕ್ರೀಕ್ ಏರಿಯಾದಲ್ಲಿರುವ ಲಕ್ಕಿ ನಾಲಾದಲ್ಲಿ ಬಿ.ಎಸ್‌.ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಸಿಬ್ಬಂದಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೀಪಾವಳಿಯನ್ನು ಆಚರಿಸಿದರು.

ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ

October 07th, 09:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಕಾಲವನ್ನು ನೆನಪಿಸಿಕೊಂಡು, ಗುಜರಾತ್ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಪರಿಕಲ್ಪನೆಯ ಉಜ್ವಲ ಉದಾಹರಣೆಯಾಗಿ ಹೊರಹೊಮ್ಮಿತು. ಸಮಾಜದ ಎಲ್ಲಾ ವರ್ಗಗಳಿಗೆ ಸಮೃದ್ಧಿಯನ್ನು ಖಾತ್ರಿಪಡಿಸಿತು ಎಂದು ಹೇಳಿದರು. ಕಳೆದ ದಶಕವನ್ನು ನೆನಪಿಸಿಕೊಳ್ಳುತ್ತಾ, ಭಾರತದ ಅಭಿವೃದ್ಧಿಯ ಹೆಜ್ಜೆಗಳು ನಮ್ಮ ದೇಶವನ್ನು ಜಾಗತಿಕವಾಗಿ ಅತ್ಯಂತ ಆಶಾವಾದದಿಂದ ನೋಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಕಸಿತ ಭಾರತದ ಸಾಮೂಹಿಕ ಗುರಿ ಸಾಧಿಸುವವರೆಗೆ ತಾವು ಅವಿರತವಾಗಿ ದುಡಿಯುತ್ತೇನೆ ಮತ್ತು ವಿಶ್ರಮಿಸುವುದಿಲ್ಲ ಎಂದು ಅವರು ನಾಗರಿಕರಿಗೆ ಭರವಸೆ ನೀಡಿದರು.

ಪ್ರಿಕ್ಸ್ ವರ್ಸೈಲ್ಸ್ ಮ್ಯೂಸಿಯಂ 2024 ರ ವಿಶ್ವ ಆಯ್ಕೆಯಲ್ಲಿ ಸ್ಮೃತಿವನ್ ಪರಿಗಣನೆಗೆ ಪ್ರಧಾನಮಂತ್ರಿ ಹರ್ಷ

June 15th, 06:23 pm

ಗುಜರಾತ್ ನ ಕಛ್ ನಲ್ಲಿ 2001 ರ ಭೂಕಂಪದಲ್ಲಿ ಜೀವ ಕಳೆದುಕೊಂಡವರ ಗೌರವಸೂಚಕವಾದ ಸ್ಮೃತಿವನ್ ವಸ್ತು ಸಂಗ್ರಹಾಲಯವು ಪ್ರಿಕ್ಸ್ ವರ್ಸೈಲ್ಲ್ಸ್ ಮ್ಯೂಸಿಯಂ 2024 ರ ವಿಶ್ವ ಆಯ್ಕೆಯಲ್ಲಿ ಒಳಗೊಂಡಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಗಡಿ ಗ್ರಾಮಗಳ ಗ್ರಾಮಾಭಿವೃದ್ಧಿಗೆ ಕಾಂಗ್ರೆಸ್‌ ಮನಸ್ಸು ವಿರುದ್ಧವಾಗಿದೆ: ಬಾರ್ಮರ್‌ನಲ್ಲಿ ಪ್ರಧಾನಿ ಮೋದಿ

April 12th, 02:30 pm

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ, ರಾಜಸ್ಥಾನದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿಯವರಿಗೆ ಬಾರ್ಮರ್‌ನಿಂದ ಸಡಗರದ ಸ್ವಾಗತ ನೀಡಲಾಯಿತು. ರಾಜಸ್ಥಾನವು ಶೌರ್ಯ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ ಜೊತೆಗೆ 'ವಿಕಸಿತ್ ಭಾರತ್' ಅನ್ನು ಸಕ್ರಿಯಗೊಳಿಸುವ ಸಂಕಲ್ಪವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. ಜನಬೆಂಬಲವನ್ನು ನೋಡುವಾಗ, ಜನರು '4 ಜೂನ್ 400 ಪಾರ್, ಫಿರ್ ಏಕ್ ಬಾರ್ ಮೋದಿ ಸರ್ಕಾರ್' ಎಂದು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ರಾಜಸ್ಥಾನದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿಗೆ ಬಾರ್ಮರ್‌ನಿಂದ ಸಡಗರದ ಸ್ವಾಗತ

April 12th, 02:15 pm

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ, ರಾಜಸ್ಥಾನದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿಯವರಿಗೆ ಬಾರ್ಮರ್‌ನಿಂದ ಸಡಗರದ ಸ್ವಾಗತ ನೀಡಲಾಯಿತು. ರಾಜಸ್ಥಾನವು ಶೌರ್ಯ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ ಜೊತೆಗೆ 'ವಿಕಸಿತ್ ಭಾರತ್' ಅನ್ನು ಸಕ್ರಿಯಗೊಳಿಸುವ ಸಂಕಲ್ಪವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. ಜನಬೆಂಬಲವನ್ನು ನೋಡುವಾಗ, ಜನರು '4 ಜೂನ್ 400 ಪಾರ್, ಫಿರ್ ಏಕ್ ಬಾರ್ ಮೋದಿ ಸರ್ಕಾರ್' ಎಂದು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಆಯಿ ಶ್ರೀ ಸೋನಾಲ್ ಮಾತಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ವಿಡಿಯೊ ಸಮಾವೇಶ ಮೂಲಕ ಮಾಡಿದ ಭಾಷಣದ ಕನ್ನಡ ಅವತರಣಿಕೆ

January 13th, 12:00 pm

ಪ್ರಸ್ತುತ ಆಧ್ಯಾತ್ಮಿಕ ನಾಯಕ (ಗಾದಿಪತಿ) ಪೂಜ್ಯ ಕಾಂಚನ್ ಮಾ, ಮತ್ತು ಆಡಳಿತಾಧಿಕಾರಿ ಪೂಜ್ಯ ಗಿರೀಶ್ ಆಪಾ! ಇಂದು ಈ ಶುಭ ಮಾಸದಲ್ಲಿ, ನಾವೆಲ್ಲರೂ ಆಯಿ ಶ್ರೀ ಸೋನಾಲ್ ಮಾ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ತಾಯಿ ಸೋನಾಲ್ ಅವರ ಆಶೀರ್ವಾದದ ಕೃಪೆಯಲ್ಲಿ ಈ ಪವಿತ್ರ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಲು ಅವಕಾಶ ಸಿಕ್ಕಿರುವುದು ನಿಜಕ್ಕೂ ನನ್ನ ಪಾಲಿಗೆ ಒಂದು ವಿಶೇಷ ಕ್ಷಣವಾಗಿದೆ. ಇಡೀ ಚರಣ್ ಸಮುದಾಯಕ್ಕೆ, ನಿರ್ವಾಹಕರಿಗೆ ಮತ್ತು ಸೋನಲ್ ಮಾ ಅವರ ಭಕ್ತರಿಗೆ ಅಭಿನಂದನೆಗಳು. ಚರಣ್ ಸಮುದಾಯಕ್ಕೆ ಪೂಜ್ಯ, ಶಕ್ತಿ ಮತ್ತು ಸಂಪ್ರದಾಯಗಳ ಕೇಂದ್ರವಾಗಿ ಮಾಢಡಾ ಧಾಮ್ ವಿಶೇಷ ಸ್ಥಾನವನ್ನು ಹೊಂದಿದೆ. ನಾನು ವಿನಯಪೂರ್ವಕವಾಗಿ ಶ್ರೀ ಆಯಿಯ ಪಾದಗಳಿಗೆ ನನ್ನನ್ನು ಅರ್ಪಿಸುತ್ತೇನೆ ಮತ್ತು ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಪ್ರಧಾನಮಂತ್ರಿ ಅವರು ಆಯಿ ಶ್ರೀ ಸೋನಾಲ್ ಮಾತಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ವೀಡಿಯೊ ಸಂದೇಶದ ಮೂಲಕ ಉದ್ದೇಶಿಸಿ ಮಾತನಾಡಿದರು

January 13th, 11:30 am

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆಯಿ ಶ್ರೀ ಸೋನಲ್ ಮಾತಾ ಅವರ ಜನ್ಮಶತಮಾನೋತ್ಸವವು ಪವಿತ್ರವಾದ ಪೌಷ ಮಾಸದಲ್ಲಿ ನಡೆಯುತ್ತಿದ್ದು, ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು, ಸೋನಲ್ ಮಾತಾ ಅವರ ಆಶೀರ್ವಾದಕ್ಕೆ ಪಾತ್ರರಾಗಿರುವುದು ಒಂದು ಸೌಭಾಗ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಡೀ ಚರಣ್ ಸಮುದಾಯ ಮತ್ತು ಎಲ್ಲಾ ಆಡಳಿತಗಾರನ್ನು ಅಭಿನಂದಿಸಿದ ಪ್ರಧಾನಿ ಮೋದಿ, “ಮದಡಾ ಧಾಮವು ಚರಣ್ ಸಮುದಾಯದ ಶ್ರದ್ಧೆ, ಶಕ್ತಿ, ಆಚರಣೆ ಮತ್ತು ಸಂಪ್ರದಾಯಗಳ ಕೇಂದ್ರವಾಗಿದೆ. ನಾನು ಶ್ರೀ ಆಯಿಯ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ನನ್ನ ನಮನವನ್ನು ಸಲ್ಲಿಸುತ್ತೇನೆ” ಎಂದರು.

Narendra Modi: The Go-To Man in Times of Crises

November 29th, 09:56 pm

“I salute the determination of all those involved in this rescue campaign. Their courage and resolve have given a new life to our fellow workers. Everyone involved in this mission has set a remarkable example of humanity and teamwork,” PM Modi said in a telephonic conversation with the rescued workers who were successfully pulled out of a collapsed tunnel in Uttarakhand.

ಗುಜರಾತ್ ನ ಮೆಹ್ಸಾನಾದಲ್ಲಿ ವಿವಿಧ ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

October 30th, 09:11 pm

ನನ್ನ ಖಖಾರಿಯಾ ಟಪ್ಪ ಹೇಗಿದ್ದಾರೆ? ಮೊದಲನೆಯದಾಗಿ, ನಿಮ್ಮ ನಡುವೆ ಇರಲು ಮತ್ತು ನನ್ನ ಶಾಲಾ ದಿನಗಳ ಪರಿಚಿತ ಮುಖಗಳನ್ನು ನೋಡುವ ಈ ಕ್ಷಣವನ್ನು ಹೊಂದಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಮತ್ತು ಗುಜರಾತ್ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನಿಮ್ಮೆಲ್ಲರನ್ನೂ ಭೇಟಿಯಾಗುವುದು ಮತ್ತು ನಾನು ನಿಮ್ಮ ಮನೆಗಳಿಗೆ ಕಾಲಿಟ್ಟಾಗ ಹಳೆಯ ನೆನಪುಗಳನ್ನು ಮರುಪರಿಶೀಲಿಸುವುದು ಅಪಾರ ಸಂತೋಷ ಮತ್ತು ತೃಪ್ತಿಯನ್ನು ತರುತ್ತದೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ಭೂಮಿ ಮತ್ತು ನನ್ನನ್ನು ರೂಪಿಸಿದ ಜನರ ಋಣವನ್ನು ಸ್ವೀಕರಿಸುವುದು ನನ್ನ ಹೃದಯವನ್ನು ಬೆಚ್ಚಗಾಗಿಸುತ್ತದೆ. ಆದ್ದರಿಂದ, ಈ ಋಣವನ್ನು ಒಪ್ಪಿಕೊಳ್ಳಲು ಇಂದು ನನಗೆ ಒಂದು ಸಂದರ್ಭವಾಗಿದೆ. ಇಂದು, ಅಂದರೆ ಅಕ್ಟೋಬರ್ 30 ಮತ್ತು ನಾಳೆ, ಅಕ್ಟೋಬರ್ 31, ಎರಡೂ ದಿನಗಳು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳನ್ನು (ಬುಡಕಟ್ಟು ಸಮುದಾಯಗಳು) ಮುನ್ನಡೆಸಿದ ಮತ್ತು ಬ್ರಿಟಿಷರನ್ನು ಸೋಲಿಸಿದ ಗೋವಿಂದ್ ಗುರೂಜಿ ಅವರ ಪುಣ್ಯತಿಥಿ ಇಂದು. ನಾಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ.

ಗುಜರಾತಿನ ಮೆಹ್ಸಾನಾದಲ್ಲಿ ಸುಮಾರು 5800 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು

October 30th, 04:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಮೆಹ್ಸಾನಾದಲ್ಲಿ ಸುಮಾರು 5800 ಕೋಟಿ ರೂಪಾಯಿಗಳ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳು ರೈಲು, ರಸ್ತೆ, ಕುಡಿಯುವ ನೀರು ಮತ್ತು ನೀರಾವರಿಯಂತಹ ಬಹು ವಲಯಗಳನ್ನು ಒಳಗೊಂಡಿವೆ.

ಗುಜರಾತಿನ ಧೋರ್ಡೊವನ್ನು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವೆಂದು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (ಯು.ಎನ್‌.ಡಬ್ಲ್ಯು.ಟಿ.ಒ.) ಪುರಸ್ಕರಿಸಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿ

October 20th, 03:34 pm

ಗುಜರಾತ್‌ನ ಕಚ್ ಜಿಲ್ಲೆಯ ಧೋರ್ಡೊ ಗ್ರಾಮವನ್ನು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವೆಂದು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (ಯು.ಎನ್‌.ಡಬ್ಲ್ಯು.ಟಿ.ಒ.) ಇಂದು ಪುರಸ್ಕರಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಮಹತ್ವಾಕಾಂಕ್ಷೆಯ ಜಿಲ್ಲೆಗಳ 'ಸಂಕಲ್ಪ ಸಪ್ತಾಹ' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 30th, 10:31 am

ಕೇಂದ್ರ ಸಚಿವ ಸಂಪುಟದ ನನ್ನ ಎಲ್ಲ ಸಹೋದ್ಯೋಗಿಗಳು, ಸರ್ಕಾರಿ ಅಧಿಕಾರಿಗಳು, ನೀತಿ ಆಯೋಗದ ಸಹೋದ್ಯೋಗಿಗಳು, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಲಕ್ಷಾಂತರ ಒಡನಾಡಿಗಳು, ವಿವಿಧ ಬ್ಲಾಕ್‌ಗಳಲ್ಲಿ ತಳಮಟ್ಟದ ಸಂಪರ್ಕ ಹೊಂದಿರುವವರು ಮತ್ತು ಈ ವಿಷಯದ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲಾ ಪ್ರತಿನಿಧಿಗಳನ್ನು ನಾನಿಂದು ಈ ಕಾರ್ಯಕ್ರಮದಲ್ಲಿ ಸ್ವಾಗತಿಸುತ್ತೇನೆ. ಈ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ನಾನು ವಿಶೇಷವಾಗಿ ನೀತಿ ಆಯೋಗವನ್ನು ಅಭಿನಂದಿಸುತ್ತೇನೆ. ನಾನು ನಿಮಗೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗಾಗಿ 1 ವಾರದ ಕಾರ್ಯಕ್ರಮ ‘ಸಂಕಲ್ಪ ಸಪ್ತಾಹ’ಕ್ಕೆ ಪ್ರಧಾನ ಮಂತ್ರಿ ಚಾಲನೆ

September 30th, 10:30 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿಂದು 'ಸಂಕಲ್ಪ ಸಪ್ತಾಹ' ಎಂಬ ದೇಶದ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗಾಗಿ 1 ವಾರದ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಹತ್ವಾಕಾಂಕ್ಷೆಯ ಬ್ಲಾಕ್ಸ್ ಪ್ರೋಗ್ರಾಂ ಪೋರ್ಟಲ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿಯವರು ಸ್ಮೃತಿ ವನ ಉದ್ಘಾಟನೆಯ ದಿನವನ್ನು ಸ್ಮರಿಸಿದರು

August 29th, 08:32 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2001 ರ ಗುಜರಾತಿನ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸ್ಮೃತಿ ವನ ಉದ್ಘಾಟನೆಯ ದಿನವನ್ನು ಸ್ಮರಿಸಿಕೊಂಡರು.

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 18.06.2023 ರಂದು ಮಾಡಿದ ‘ಮನ್ ಕಿ ಬಾತ್’ – 102 ನೇ ಸಂಚಿಕೆಯ ಕನ್ನಡ ಅವತರಣಿಕೆ

June 18th, 11:30 am

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ, 'ಮನದ ಮಾತಿ’ಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಸ್ವಾಗತ. ಸಾಮಾನ್ಯವಾಗಿ, 'ಮನದ ಮಾತು' ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ, ಆದರೆ, ಈ ಬಾರಿ ಅದು ಒಂದು ವಾರ ಮುಂಚಿತವಾಗಿ ಪ್ರಸಾರವಾಗುತ್ತಿದೆ. ನಾನು ಮುಂದಿನ ವಾರ ಅಮೆರಿಕಾದಲ್ಲಿ ಇರುತ್ತೇನೆ ಮತ್ತು ಅಲ್ಲಿ ಬಹಳ ವ್ಯಸ್ತವಾಗಿರುತ್ತೇನೆ ಎಂಬುದು ನಿಮಗೆಲ್ಲ ಗೊತ್ತು, ಹಾಗಾಗಿ ನಾನು ತೆರಳುವ ಮೊದಲು ನಿಮ್ಮೊಂದಿಗೆ ಮಾತನಾಡಬೇಕೆಂದು ಯೋಚಿಸಿದೆ. ಇದಕ್ಕಿಂತ ಉತ್ತಮವಾದದ್ದು ಇನ್ನೇನಿದೆ? ನಿಮ್ಮೆಲ್ಲರ ಆಶೀರ್ವಾದ, ನಿಮ್ಮ ಸ್ಫೂರ್ತಿ, ನನ್ನ ಶಕ್ತಿಯನ್ನು ಹೆಚ್ಚಿಸುತ್ತದೆ.

'ಬಿಪೊರ್ ಜೋಯ್' ಚಂಡಮಾರುತದ ಬಗ್ಗೆ ಮಾಡಿರುವ ಪೂರ್ವ ಸನ್ನದ್ಧತೆಯನ್ನು ಪರಿಶೀಲಿಸಲು ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ

June 12th, 04:23 pm

ದುರ್ಬಲ ಸ್ಥಳಗಳಲ್ಲಿ ವಾಸಿಸುವ ಜನರನ್ನು ರಾಜ್ಯ ಸರ್ಕಾರವು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಆಹಾರ, ಕುಡಿಯುವ ನೀರು ಮುಂತಾದ ಎಲ್ಲಾ ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರುಗಳ ವಸ್ತುಗಳಿಗೆ ಉಂಟಾದ ಹಾನಿಯ ಸಂದರ್ಭದಲ್ಲಿ ತಕ್ಷಣವೇ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಅವರು ಸೂಚಿಸಿದರು. ಪ್ರಾಣಿಗಳ ಸುರಕ್ಷತೆಯನ್ನೂ ಖಾತ್ರಿಪಡಿಸಬೇಕು ಮತ್ತು ನಿಯಂತ್ರಣ ಕೊಠಡಿಗಳು 24*7 ಕಾರ್ಯನಿರ್ವಹಣೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.

PM shares a thread about Kutch's transformation from the deadly earthquake in 2001

April 05th, 10:59 am

The Prime Minister, Shri Narendra Modi has shared a tweet by Member of Parliament from Kutch, Shri Vinod Chavda about the transformation and development of Kutch as a great destination of tourism from the devastation of earthquake in 2001.

ಅಹಮದಾಬಾದ್‌ನಲ್ಲಿ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಷಣದ ಪಠ್ಯ

December 14th, 05:45 pm

ಪರಮಪೂಜ್ಯ ಮಹಾಂತ ಸ್ವಾಮೀಜಿ, ಪೂಜ್ಯರಾದ ಸಾಧುಸಂತರೇ, ರಾಜ್ಯಪಾಲರೇ, ಮುಖ್ಯಮಂತ್ರಿಗಳೇ ಹಾಗೂ ಉಪಸ್ಥಿತರಿರುವ ಸತ್ಸಂಗಿ ಕುಟುಂಬದ ಎಲ್ಲ ಸದಸ್ಯರೇ, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುವುದು ಮತ್ತು ಈ ಸತ್ಸಂಗಿಯ ಭಾಗ್ಯ ಸಿಕ್ಕಿರುವುದು ನನ್ನ ಸೌಭಾಗ್ಯ. ಈ ಕಾರ್ಯಕ್ರಮವು ದೊಡ್ಡ ಪ್ರಮಾಣದಲ್ಲಿ ಮತ್ತು ಒಂದು ತಿಂಗಳವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಂಖ್ಯೆಗಳ ವಿಷಯದಲ್ಲಿ ಮಾತ್ರ ದೊಡ್ಡದಾಗಿದೆ ಎಂದು ನಾನು ನಂಬುವುದಿಲ್ಲ, ಇದು ಸಮಯದ ದೃಷ್ಟಿಯಿಂದ ಸಹ ವಿಸ್ತಾರವಾಗಿದೆ. ನಾನು ಇಲ್ಲಿ ಕಳೆದ ಸಮಯವನ್ನು ಇಲ್ಲಿ ದೈವಿಕತೆಯ ಭಾವನೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಚಿಂತನೆಗಳ ಭವ್ಯತೆ ಇದೆ. ಇಲ್ಲಿ ನಮ್ಮ ಪರಂಪರೆ ಏನು? ನಮ್ಮ ಪರಂಪರೆ ಎಂತಹದು? ನಮ್ಮ ನಂಬಿಕೆ ಏನು ? ನಮ್ಮ ಆಧ್ಯಾತ್ಮಿಕತೆ ಏನು? ನಮ್ಮ ಸಂಪ್ರದಾಯ ಏನು ?ನಮ್ಮ ಸಂಸ್ಕೃತಿ ಏನು? ನಮ್ಮ ಸ್ವಭಾವ ಏನು? ಎಂಬ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಾಟ ಈ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ.