ರಾಮ ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ: ಮನ್ ಕಿ ಬಾತ್ ವೇಳೆ ಪ್ರಧಾನಿ ಮೋದಿ

January 28th, 11:30 am

ನನ್ನ ಪ್ರಿಯ ದೇಶವಾಸಿಗಳೇ, ಈ ಬಾರಿ ಜನವರಿ 26 ರ ಪರೇಡ್ ತುಂಬಾ ಅದ್ಭುತವಾಗಿತ್ತು, ಆದರೆ ಕವಾಯತಿನಲ್ಲಿ ಮಹಿಳಾ ಶಕ್ತಿಯನ್ನು ನೋಡುವುದು ಹೆಚ್ಚು ಚರ್ಚೆಯ ವಿಷಯವಾಗಿತ್ತು, ಕರ್ತವ್ಯ ಪಥದಲ್ಲಿ ಕೇಂದ್ರ ಭದ್ರತಾ ಪಡೆ ಮತ್ತು ದೆಹಲಿ ಪೊಲೀಸ್ ಮಹಿಳಾ ತುಕಡಿಗಳು ಕವಾಯತು ಆರಂಭಿಸಿದಾಗ, ಎಲ್ಲರೂ ಹೆಮ್ಮೆಯಿಂದ ಬೀಗಿದರು. ಮಹಿಳಾ ವಾದ್ಯಮೇಳದ ಕವಾಯತು ನೋಡಿ, ಅವರ ಅಮೋಘ ಸಮನ್ವಯತೆ ಕಂಡು ದೇಶ-ವಿದೇಶದ ಜನರು ಪುಳಕಿತರಾದರು. ಈ ಬಾರಿ ಪರೇಡ್‌ನಲ್ಲಿ ಸಾಗಿದ 20 ಸ್ಕ್ವಾಡ್‌ಗಳಲ್ಲಿ 11 ಸ್ಕ್ವಾಡ್‌ಗಳು ಮಹಿಳೆಯರದ್ದೇ ಆಗಿದ್ದವು. ಸಾಗಿಬಂದ ಸ್ಥಬ್ಧ ಚಿತ್ರಗಳಲ್ಲಿಯೂ, ಎಲ್ಲಾ ವೇಷಧಾರಿಗಳು ಮಹಿಳೆಯರೇ ಆಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು ಒಂದೂವರೆ ಸಾವಿರ ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಅನೇಕ ಮಹಿಳಾ ಕಲಾವಿದರು ಶಂಖ, ನಾದಸ್ವರ ಮತ್ತು ನಾಗದಾ ದಂತಹ ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಡಿಆರ್‌ಡಿಒ ಬಿಡುಗಡೆ ಮಾಡಿದ ಟ್ಯಾಬ್ಲೋ ಕೂಡ ಎಲ್ಲರ ಗಮನ ಸೆಳೆಯಿತು. ನೀರು, ಭೂಮಿ, ಆಕಾಶ, ಸೈಬರ್ ಮತ್ತು ಬಾಹ್ಯಾಕಾಶ - ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ಶಕ್ತಿಯು ದೇಶವನ್ನು ಹೇಗೆ ರಕ್ಷಿಸುತ್ತಿದೆ ಎಂಬುದನ್ನು ಇದು ತೋರಿಸಿತ್ತು. 21ನೇ ಶತಮಾನದ ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ.

ತಮಿಳುನಾಡಿನ ಚೆನ್ನೈನಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

January 19th, 06:33 pm

ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಆರ್.ಎನ್. ರವಿ ಜೀ, ಮುಖ್ಯಮಂತ್ರಿ ಶ್ರೀ ಎಂ.ಕೆ. ಸ್ಟಾಲಿನ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅನುರಾಗ್ ಠಾಕೂರ್, ಎಲ್. ಮುರುಗನ್ ಮತ್ತು ನಿಶಿತ್ ಪ್ರಾಮಾಣಿಕ್, ತಮಿಳುನಾಡು ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಭಾರತದ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದಿರುವ ನನ್ನ ಯುವ ಸ್ನೇಹಿತರೇ.

ತಮಿಳುನಾಡಿನ ಚೆನ್ನೈನಲ್ಲಿ ʻಖೇಲೋ ಇಂಡಿಯಾ ಯೂತ್ ಗೇಮ್ಸ್-2023ʼರ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿಗಳು

January 19th, 06:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಚೆನ್ನೈನಲ್ಲಿ ʻಖೇಲೋ ಇಂಡಿಯಾ ಯೂತ್ ಗೇಮ್ಸ್-2023ʼರ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶ್ರೀ ಮೋದಿ ಅವರು ಚಾಲನೆ ನೀಡಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವರು ಸಾಕ್ಷಿಯಾದರು. ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ ಉದ್ಘಾಟನೆಯ ಸಂಕೇತವಾಗಿ ಇಬ್ಬರು ಕ್ರೀಡಾಪಟುಗಳು ನೀಡಿದ ಕ್ರೀಡಾ ಜ್ಯೋತಿಯನ್ನು ಅಗ್ಗಿಷ್ಟಿಕೆಯ ಮೇಲೆ ಇರಿಸುವ ಮೂಲಕ ಕ್ರೀಡಾಕೂಟಕ್ಕೆ ಪ್ರಧಾನಿ ಅಧಿಕೃತ ಚಾಲನೆ ನೀಡಿದರು.