'ಮಿಷನ್ ಮೋಡ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಕುರಿತ ಬಜೆಟ್ ನಂತರದ ವೆಬಿನಾರ್ ನಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅನುವಾದ
March 03rd, 10:21 am
ಈ ವೆಬಿನಾರ್ ನಲ್ಲಿ ಉಪಸ್ಥಿತರಿರುವ ಎಲ್ಲ ಗಣ್ಯರಿಗೆ ಸ್ವಾಗತ. ಇಂದಿನ ನವ ಭಾರತವು ಹೊಸ ಕೆಲಸದ ಸಂಸ್ಕೃತಿಯೊಂದಿಗೆ ಮುಂದುವರಿಯುತ್ತಿದೆ. ಈ ವರ್ಷದ ಬಜೆಟ್ ಸಾಕಷ್ಟು ಚಪ್ಪಾಳೆಯನ್ನು ಪಡೆದಿದೆ ಮತ್ತು ದೇಶದ ಜನರು ಇದನ್ನು ಬಹಳ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. ಅದೇ ಹಳೆಯ ಕೆಲಸದ ಸಂಸ್ಕೃತಿ ಮುಂದುವರಿದಿದ್ದರೆ, ಅಂತಹ ಬಜೆಟ್ ವೆಬಿನಾರ್ ಗಳ ಬಗ್ಗೆ ಯಾರೂ ಯೋಚಿಸುತ್ತಿರಲಿಲ್ಲ. ಆದರೆ ಇಂದು ನಮ್ಮ ಸರ್ಕಾರವು ಬಜೆಟ್ ಮಂಡನೆಯ ಮೊದಲು ಮತ್ತು ನಂತರ ಪ್ರತಿಯೊಬ್ಬ ಮಧ್ಯಸ್ಥಗಾರರೊಂದಿಗೆ ವಿವರವಾಗಿ ಚರ್ಚಿಸುತ್ತದೆ ಮತ್ತು ಅವರನ್ನು ಜೊತೆಯಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತದೆ. ಈ ವೆಬಿನಾರ್ ಬಜೆಟ್ ನ ಗರಿಷ್ಠ ಫಲಿತಾಂಶವನ್ನು ಪಡೆಯಲು, ಬಜೆಟ್ ಪ್ರಸ್ತಾಪಗಳನ್ನು ನಿಗದಿತ ಸಮಯದ ಚೌಕಟ್ಟಿನೊಳಗೆ ಅನುಷ್ಠಾನಗೊಳಿಸುವಲ್ಲಿ ಮತ್ತು ಬಜೆಟ್ ಗುರಿಗಳನ್ನು ಸಾಧಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ಮುಖ್ಯಸ್ಥನಾಗಿ ಕೆಲಸ ಮಾಡುವಾಗ ನನಗೆ 20 ವರ್ಷಗಳಿಗಿಂತ ಹೆಚ್ಚು ಅನುಭವವಿದೆ ಎಂದು ನಿಮಗೆ ತಿಳಿದಿದೆ. ಈ ಅನುಭವದ ಸಾರವೇನೆಂದರೆ, ಎಲ್ಲಾ ಪಾಲುದಾರರು ನೀತಿ ನಿರ್ಧಾರದಲ್ಲಿ ತೊಡಗಿಸಿಕೊಂಡಾಗ, ಅಪೇಕ್ಷಿತ ಫಲಿತಾಂಶವೂ ಕಾಲಮಿತಿಯೊಳಗೆ ಬರುತ್ತದೆ. ಕಳೆದ ಕೆಲವು ದಿನಗಳಲ್ಲಿ ನಡೆದ ವೆಬಿನಾರ್ ಗಳಲ್ಲಿ ಸಾವಿರಾರು ಜನರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ನಾವು ನೋಡಿದ್ದೇವೆ. ಪ್ರತಿಯೊಬ್ಬರೂ ದಿನವಿಡೀ ಚಿಂತನ-ಮಂಥನ ಮಾಡುತ್ತಿದ್ದರು ಮತ್ತು ಭವಿಷ್ಯಕ್ಕಾಗಿ ಬಹಳ ಮುಖ್ಯವಾದ ಸಲಹೆಗಳು ಬಂದವು ಎಂದು ನಾನು ಹೇಳಬಲ್ಲೆ. ಪ್ರತಿಯೊಬ್ಬರೂ ಬಜೆಟ್ ಮೇಲೆ ಕೇಂದ್ರೀಕರಿಸಿದರು ಮತ್ತು ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ಉತ್ತಮ ಸಲಹೆಗಳಿವೆ. ಇಂದು ನಾವು ದೇಶದ ಪ್ರವಾಸೋದ್ಯಮ ಕ್ಷೇತ್ರದ ಪರಿವರ್ತನೆಗಾಗಿ ಈ ಬಜೆಟ್ ವೆಬಿನಾರ್ ನಡೆಸುತ್ತಿದ್ದೇವೆ.'ಅಭಿಯಾನದೋಪಾದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಕುರಿತ ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
March 03rd, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ 'ಅಭಿಯಾನದೋಪಾದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಎಂಬ ವಿಷಯದ ಕುರಿತು ಭಾಷಣ ಮಾಡಿದರು. ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನನಕ್ಕೆ ತರಲು ಕಲ್ಪನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಆಯೋಜಿಸುತ್ತಿರುವ 12 ಬಜೆಟೋತ್ತರ ವೆಬಿನಾರ್ ಗಳ ಸರಣಿಯಲ್ಲಿ ಇದು ಏಳನೆಯದಾಗಿದೆ.Jamnagar is emerging as the hub of manufacturing and coast-led development: PM Modi
October 10th, 06:50 pm
PM Modi laid the foundation stone and dedicated to the nation multiple projects worth around Rs 1450 crore in Jamnagar, Gujarat. The PM informed everyone that five resolutions of development have created a solid foundation for the state of Gujarat. The first resolution is Jan Shakti, the second is Gyan Shakti, the third is Jal Shakti, the fourth is Urja Shakti and finally Raksha Shakti.PM lays the foundation stone and dedicates to the nation multiple projects worth over Rs 1450 crore in Jamnagar, Gujarat
October 10th, 06:49 pm
PM Modi laid the foundation stone and dedicated to the nation multiple projects worth around Rs 1450 crore in Jamnagar, Gujarat. The PM informed everyone that five resolutions of development have created a solid foundation for the state of Gujarat. The first resolution is Jan Shakti, the second is Gyan Shakti, the third is Jal Shakti, the fourth is Urja Shakti and finally Raksha Shakti.ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ
October 30th, 06:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ವನ್ಯಮೃಗಗಳ ಉದ್ಯಾನ ಮತ್ತು ಭೂಮಿಯಂತೆ ಗೋಳಾಕಾರದ ಪಂಜರ ಉದ್ಘಾಟಿಸಿದರು. ಕೆವಾಡಿಯಾ ಸಮಗ್ರ ಅಭಿವೃದ್ಧಿ ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಪಥದರ್ಶಕ ಕಾಲುವೆ, ನೂತನ ಗೋರಾ ಸೇತುವೆ, ಗರುಡೇಶ್ವರ್ ಅಣೆಕಟ್ಟು, ಸರ್ಕಾರಿ ವಸತಿಗೃಹಗಳು, ಬಸ್ ಬೇ ಟರ್ಮಿನಸ್, ಏಕತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, ಬುಡಕಟ್ಟು ಹೋಂ ಸ್ಟೇ ಸೇರಿವೆ. ಜೊತೆಗೆ ಪ್ರಧಾನಿ ಏಕತಾ ಪ್ರತಿಮೆವರೆಗಿನ ಏಕತಾ ಕ್ರ್ಯೂಸ್ ಸೇವೆಗೂ ಹಸಿರು ನಿಶಾನೆ ತೋರಿದರು.