3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮ್ಮೇಳನ-2024 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

October 04th, 07:45 pm

ಜಗತ್ತಿನ 2 ಪ್ರಮುಖ ಪ್ರದೇಶಗಳು ಯುದ್ಧದ ಸ್ಥಿತಿಯಲ್ಲಿ ಇರುವ ಸಮಯದಲ್ಲೇ ಈ ಸಮ್ಮೇಳನ ಆಯೋಜಿಸಲಾಗಿದೆ. ಈ ಪ್ರದೇಶಗಳು ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾಗಿವೆ, ವಿಶೇಷವಾಗಿ ಇಂಧನ ಭದ್ರತೆಯ ವಿಷಯದಲ್ಲಿ. ಇಂತಹ ಮಹತ್ವದ ಜಾಗತಿಕ ಅನಿಶ್ಚಿಯದ ನಡುವೆ, ನಾವು ‘ಭಾರತದ ಯುಗ’ವನ್ನು ಚರ್ಚಿಸಲು ಇಲ್ಲಿ ಸೇರಿದ್ದೇವೆ. ಇಂದು ಭಾರತದಲ್ಲಿರುವ ನಂಬಿಕೆ ಅನನ್ಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ಆತ್ಮವಿಶ್ವಾಸವು ಅಸಾಧಾರಣವಾಗಿದೆ ಎಂಬುದನ್ನು ಸಹ ಇದು ತೋರಿಸುತ್ತದೆ.

ನವದೆಹಲಿಯಲ್ಲಿ 3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

October 04th, 07:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಭಾಷಣ ಮಾಡಿದರು. ಹಣಕಾಸು ಸಚಿವಾಲಯದ ಸಹಭಾಗಿತ್ವದಲ್ಲಿ “ದಿ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್” ಆಯೋಜಿಸಿರುವ ಕೌಟಿಲ್ಯ ಆರ್ಥಶಾಸ್ತ್ರ(ಆರ್ಥಿಕ) ಸಮ್ಮೇಳನವು ಹಸಿರು ಪರಿವರ್ತನೆ ಯೋಜನೆಗಳಿಗೆ ಹಣಕಾಸು ಒದಗಿಸುವುದು, ಭೂ-ಆರ್ಥಿಕ ಬೇರ್ಪಡಿಕೆ(ವಿಭಾಗೀಕರಣ) ಮತ್ತು ಬೆಳವಣಿಗೆಯ ಪರಿಣಾಮಗಳು, ಹೊಂದಾಣಿಕೆ ಕಾಪಾಡುವ ನೀತಿ ಕ್ರಮದ ತತ್ವಗಳು ಮತ್ತು ಇತರೆ ವಸ್ತು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಅಕ್ಟೋಬರ್ 4ರಂದು ನಡೆಯಲಿರುವ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

October 03rd, 10:50 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 4ರಂದು ಸಂಜೆ 6:30ಕ್ಕೆ ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆಯಲಿರುವ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನೂ ಕೂಡಾ ಮಾಡಲಿದ್ದಾರೆ.