ಭಾರತದ ಮುಂದಿನ ಸಾವಿರ ವರ್ಷಗಳಿಗೆ ನಾವು ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ: ಆಸ್ಟ್ರಿಯಾದಲ್ಲಿ ಪ್ರಧಾನಿ ಮೋದಿ

July 10th, 11:00 pm

ವಿಯೆನ್ನಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ದೇಶವು ಸಾಧಿಸಿರುವ ಪರಿವರ್ತಕ ಪ್ರಗತಿಯ ಕುರಿತು ಮಾತನಾಡಿದ ಅವರು, ಭಾರತವು ಮುಂದಿನ ದಿನಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ - ವಿಕಸಿತ್ ಭಾರತ್ - ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ಆಸ್ಟ್ರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದರು

July 10th, 10:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಯೆನ್ನಾದಲ್ಲಿ ತಮ್ಮ ಗೌರವಾರ್ಥವಾಗಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರನ್ನು ಭಾರತೀಯರು ವಿಶೇಷ ಪ್ರೀತಿ ಮತ್ತು ಅಕ್ಕರೆಯಿಂದ ಸ್ವಾಗತಿಸಿದರು. ಆಸ್ಟ್ರಿಯನ್ ಫೆಡರಲ್ ನ ಕಾರ್ಮಿಕ ಮತ್ತು ಆರ್ಥಿಕ ಸಚಿವ ಶ್ರೀ ಮಾರ್ಟಿನ್ ಕೋಚರ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಸ್ಟ್ರಿಯಾದಾದ್ಯಂತ ನೆಲೆಸಿರುವ ಭಾರತೀಯರು ಭಾಗವಹಿಸುವಿಸಿದ್ದು ವಿಶೇಷವಾಗಿತ್ತು.

ಆಸ್ಟ್ರಿಯಾ-ಭಾರತದ ಸಿ.ಇ.ಒ.ಗಳ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

July 10th, 07:01 pm

ಮೂಲಸೌಕರ್ಯ, ಆಟೋಮೊಬೈಲ್, ಇಂಧನ, ಇಂಜಿನಿಯರಿಂಗ್ ಮತ್ತು ಸ್ಟಾರ್ಟ್-ಅಪ್‌ಗಳು ಸೇರಿದಂತೆ ವಿವಿಧ ವಲಯಗಳ ಪ್ರಮುಖ ಆಸ್ಟ್ರಿಯನ್ ಮತ್ತು ಭಾರತೀಯ ಸಿ.ಇ.ಒ.ಗಳ ತಂಡವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾದ ಚಾನ್ಸೆಲರ್ ಘನತೆವೆತ್ತ ಶ್ರೀ ಕಾರ್ಲ್ ನೆಹಮ್ಮರ್ ಅವರು ಇಂದು ಜಂಟಿಯಾಗಿ ಭಾಷಣ ಮಾಡಿದರು.

ಆಸ್ಟ್ರಿಯಾದ ವಿಯೆನ್ನಾಕ್ಕೆ ಆಗಮಿಸಿದ ಪ್ರಧಾನಿ ಮೋದಿ

July 09th, 11:45 pm

ತಮ್ಮ ಎರಡು ರಾಷ್ಟ್ರಗಳ ಭೇಟಿಯ ಎರಡನೇ ಕೆ ಆರಂಭವನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರಿಯಾದ ವಿಯೆನ್ನಾಕ್ಕೆ ಆಗಮಿಸಿದರು. ಪ್ರಧಾನಿ ತಮ್ಮ ಭೇಟಿಯ ವೇಳೆ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಮತ್ತು ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರನ್ನು ಭೇಟಿಯಾಗಲಿದ್ದಾರೆ. 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಭಾರತ ಪ್ರಧಾನಿಯ ಮುಂಬರುವ ಭೇಟಿ ಸ್ವಾಗತಿಸಿದ ಆಸ್ಟ್ರಿಯಾ ಚಾನ್ಸೆಲರ್, ಪ್ರಧಾನಿ ಮೋದಿ ಪ್ರತಿಕ್ರಿಯೆ

July 07th, 08:57 am

ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಗಳು ಆಸ್ಟ್ರಿಯಾ ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು ಇದಕ್ಕೆ ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು ಹರ್ಷ ವ್ಯಕ್ತಪಡಿಸಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿ ಧನ್ಯವಾದ ಹೇಳಿದ್ದಾರೆ.

ರಷ್ಯಾ ಒಕ್ಕೂಟ ಮತ್ತು ಆಸ್ಟ್ರಿಯಾ ಗಣರಾಜ್ಯಕ್ಕೆ ಪ್ರಧಾನಮಂತ್ರಿ ಅವರ ಭೇಟಿ (ಜುಲೈ 08-10, 2024)

July 04th, 05:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜುಲೈ 8-10ರಂದು ರಷ್ಯಾ ಒಕ್ಕೂಟ ಮತ್ತು ಆಸ್ಟ್ರಿಯಾ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.