ಗುಜರಾತ್ ನನ್ನ ಆತ್ಮ , ಭಾರತ ನನ್ನ ಪರಮಾತ್ಮ : ಪ್ರಧಾನಿ ನರೇಂದ್ರ ಮೋದಿ
November 27th, 12:19 pm
ಕಚ್, ಜಸ್ದಾನ್ ಮತ್ತು ಅಮ್ರೆಲಿ ಸಾರ್ವಜನಿಕ ಸಭೆಗಳಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಅನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ . ಕಾಂಗ್ರೆಸ್ ನ ದುರಾಡಳಿತವು ಕಚ್ ಮತ್ತು ಗುಜರಾತಿನ ಒಟ್ಟಾರೆ ಅಭಿವೃದ್ಧಿಗೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದರು.ಪ್ರಧಾನಿ ಕಾಂಡ್ಲಾ ಬಂದರು ಟ್ರಸ್ಟ್ ನ ವಿವಿಧ ಯೋಜನೆಗಳನ್ನು ಪ್ರಾರಂಭಿಸಿದರು
May 22nd, 04:01 pm
ಕಾಂಡ್ಲಾ ಪೋರ್ಟ್ ವಿವಿಧ ಯೋಜನೆಗಳನ್ನು ಪ್ರಾರಂಭಿಸುವ ಕಾರ್ಯಕ್ರಮವೊಂದರಲ್ಲಿ, ಬಂದರು ನೇತೃತ್ವದ ಅಭಿವೃದ್ಧಿಗೆ ಪ್ರಧಾನಿ ಮೋದಿ ಒತ್ತು ನೀಡಿದರು. ಬಂದರುಗಳು ಭಾರತದ ಪ್ರಗತಿಗೆ ಅವಶ್ಯಕವಾಗಿದೆ. ಏಷ್ಯಾದ ಅತ್ಯುತ್ತಮ ಬಂದರುಗಳಲ್ಲಿ ಒಂದಾಗಿ ಕಂಡ್ಲಾ ಹೊರಹೊಮ್ಮಿದೆ ಎಂದು ಪ್ರಧಾನಿ ತಿಳಿಸಿದರು . ಮೂಲಭೂತ ಸೌಕರ್ಯ, ದಕ್ಷತೆ ಮತ್ತು ಪಾರದರ್ಶಕತೆ ಆರ್ಥಿಕ ಬೆಳವಣಿಗೆಯ ಪ್ರಮುಖ ಸ್ತಂಭಗಳಾಗಿವೆ ಎಂದೂ ಹೇಳಿದರು.ಪ್ರಧಾನಿ ಇಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ ; ಮಂಗಳವಾರ ಗಾಂಧಿನಗರದಲ್ಲಿ ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ
May 22nd, 12:18 pm
ಪ್ರಧಾನಿ, ಶ್ರೀ ನರೇಂದ್ರ ಮೋದಿ ಇಂದು ಗುಜರಾತ್ ಗೆ ಎರಡು ದಿನ ಭೇಟಿ ನೀಡಲಿದ್ದಾರೆ. ಇಂದು ಕಚ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಹಾಕಲಿದ್ದಾರೆ. ಮಂಗಳವಾರ, ಮೇ 23ರಂದು , ಪ್ರಧಾನ ಮಂತ್ರಿ ಗಾಂಧಿನಗರದಲ್ಲಿ ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ ವಾರ್ಷಿಕ ಸಭೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.