ಅಮೇರಿಕಾದ 246ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಮಂತ್ರಿ
July 04th, 11:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಮೇರಿಕಾ ಸಂಯುಕ್ತ ಸಂಸ್ಥಾನದ 246ನೇ ಸ್ವಾತಂತ್ರ್ಯ ದಿನಾಚರಣೆಯಂದು ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮತ್ತು ಅಮೇರಿಕಾದ ಜನತೆಗೆ ಶುಭ ಕೋರಿದ್ದಾರೆ.ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆಗಳು
May 12th, 08:58 pm
ಕೋವಿಡ್ ಸಾಂಕ್ರಾಮಿಕವು ಜೀವನವನ್ನು, ಪೂರೈಕೆ ಸರಪಳಿಗಳನ್ನು ಅಸ್ತವ್ಯಸ್ತಗೊಳಿಸುತ್ತದೆ ಮತ್ತು ಮುಕ್ತ ಸಮಾಜಗಳ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸುತ್ತದೆ. ಭಾರತದಲ್ಲಿ, ನಾವು ಸಾಂಕ್ರಾಮಿಕ ರೋಗದ ವಿರುದ್ಧ ಜನ-ಕೇಂದ್ರಿತ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ವಾರ್ಷಿಕ ಆರೋಗ್ಯ ರಕ್ಷಣಾ ಬಜೆಟ್ ಗೆ ನಾವು ಅತ್ಯಧಿಕ ಹಂಚಿಕೆ ಮಾಡಿದ್ದೇವೆ.ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
May 12th, 06:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್. ಬೈಡೆನ್ ಜೂನಿಯರ್ ಅವರ ಆಹ್ವಾನದ ಮೇರೆಗೆ ನಡೆದ ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ 'ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಮತ್ತು ಸನ್ನದ್ಧತೆಗೆ ಆದ್ಯತೆ ನೀಡುವುದು' ಎಂಬ ವಿಷಯದ ಮೇಲೆ ಪ್ರಧಾನಮಂತ್ರಿ ಅವರು ಮಾತನಾಡಿದರು.ಅಮೆರಿಕದ ಉಪಾಧ್ಯಕ್ಷರಾದ ಘನತೆವೆತ್ತ ಶ್ರೀಮತಿ ಕಮಲಾ ಹ್ಯಾರಿಸ್ ಅವರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ನುಡಿಗಳು
September 24th, 02:15 am
ಮೊಟ್ಟ ಮೊದಲನೆಯದಾಗಿ, ನೀವು ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆ ತಿಳಿಸಲು ಬಯಸುತ್ತೇನೆ. ಗೌರವಾನ್ವಿತರೇ, ಕೆಲವು ತಿಂಗಳು ಹಿಂದೆ ಪರಸ್ಪರ ಫೋನ್‌ನಲ್ಲಿ ಮಾತನಾಡುವ ಅವಕಾಶ ನಮ್ಮಿಬ್ಬರಿಗೆ ದೊರೆತಿತ್ತು. ಆ ಸಮಯದಲ್ಲಿ ನಾವು ವಿವರವಾಗಿ ಚರ್ಚೆ ಮಾಡಿದೆವು. ನೀವು ನನ್ನೊಂದಿಗೆ ಅಂದು ತುಂಬಾ ಆತ್ಮೀಯವಾಗಿ ಮತ್ತು ಸ್ವಾಭಾವಿಕವಾಗಿ ಮಾತನಾಡಿದ ರೀತಿಯನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ, ತುಂಬಾ ಧನ್ಯವಾದಗಳು. ಗೌರವಾನ್ವಿತರೇ, ಅಂದಿನ ಸಂದರ್ಭದ ಬಗ್ಗೆ ನಿಮಗೆ ನೆನಪಿರಬಹುದು. ಅದು ತುಂಬಾ ಕಷ್ಟದ ಸಮಯವಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಭಾರತ ಎದುರಿಸುತ್ತಿತ್ತು. ಅದು ನಮಗೆ ಅತ್ಯಂತ ಕ್ಲಿಷ್ಟ ಸಮಯವಾಗಿತ್ತು. ಅಂತಹ ಸಮಯದಲ್ಲಿ ಒಂದು ಕುಟುಂಬದವರಂತೆ, ಬಾಂಧವ್ಯ ಪ್ರಜ್ಞೆ ಹಾಗೂ ತುಂಬಾ ಪ್ರೀತಿಯಿಂದ ನೀವು ಸಹಾಯ ಹಸ್ತ ಚಾಚಿದ್ದಿರಿ. ನನ್ನೊಂದಿಗೆ ಮಾತನಾಡಲು ನೀವು ಆಯ್ದುಕೊಂಡ ಆ ಪದಗಳನ್ನು ನಾನು ಸದಾ ಅದನ್ನು ನೆನಪಿಸಿಕೊಳ್ಳುತ್ತಿರುತ್ತೇನೆ, ಮತ್ತು ಇದಕ್ಕಾಗಿ ನಿಮಗೆ ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ. ಗೌರವಾನ್ವಿತರೇ, ನಿಜವಾದ ಸ್ನೇಹಿತನಂತೆ, ನೀವು ಸಹಕಾರದ ಸಂದೇಶವನ್ನು ನೀಡಿದ್ದೀರಿ. ಬಹಳ ಸಂವೇದನಾಶೀಲತೆಯನ್ನು ತೋರಿದಿರಿ. ಅದರ ಬೆನ್ನಲ್ಲೇ ತಕ್ಷಣವೇ ಅಮೆರಿಕ ಸರಕಾರ, ಅಮೆರಿಕದ ಕಾರ್ಪೊರೇಟ್ ವಲಯ ಮತ್ತು ಭಾರತೀಯ ಸಮುದಾಯ ಎಲ್ಲರೂ ಭಾರತಕ್ಕೆ ಸಹಾಯ ಮಾಡಲು ಒಗ್ಗೂಡಿದ್ದನ್ನು ನಾವು ನೋಡಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ನಡುವಿನ ಸಭೆ
September 24th, 02:14 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಮ್ಮ ಅಮೆರಿಕಾ ಪ್ರವಾಸದ ವೇಳೆ 2021ರ ಸೆಪ್ಟಂಬರ್ 23ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕಾದ ಗೌರವಾನ್ವಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರನ್ನು ಭೇಟಿ ಮಾಡಿದರು.ಅಮೆರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ
September 22nd, 10:37 am
ಅಮೆರಿಕಾದ ಅಧ್ಯಕ್ಷ ಗೌರವಾನ್ವಿತ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ 2021ರ ಸೆಪ್ಟಂಬರ್ 22ರಿಂದ 25ರವರೆಗೆ ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದೇನೆ.ಅಮೆರಿಕಾ ಉಪಾಧ್ಯಕ್ಷರಾದ ಶ್ರೀಮತಿ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಮಂತ್ರಿ ಶುಭಾಶಯ
January 21st, 09:19 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಕಮಲಾ ಹ್ಯಾರಿಸ್ ಅವರಿಗೆ ಶುಭ ಕೋರಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕದ ಚುನಾಯಿತ ಅಧ್ಯಕ್ಷ ಘನತೆವೆತ್ತ ಜೋಸೆಫ್ ಆರ್ ಬೈಡನ್ ನಡುವೆ ದೂರವಾಣಿ ಸಂಭಾಷಣೆ
November 17th, 11:58 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಚುನಾಯಿತ ಅಧ್ಯಕ್ಷ ಘನತೆವೆತ್ತ ಜೋಸೆಫ್ ಆರ್ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.ಅಮೆರಿಕಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಿ ಅಭಿನಂದನೆ
November 08th, 10:23 am
ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.