ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ
April 08th, 09:24 pm
ಈಗಿನ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಮೌಲ್ಯಮಾಪನ ಮಾಡುವಾಗ ನೀವೆಲ್ಲರೂ ಹಲವಾರು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದ್ದೀರಿ, ಮತ್ತು ಹಲವಾರು ಅವಶ್ಯ ಸಲಹೆಗಳನ್ನು ನೀಡಿದ್ದೀರಿ. ಕೊರೊನಾ ಹರಡುವಿಕೆಯ ಪ್ರಮಾಣ ಹೆಚ್ಚು ಇರುವ ಮತ್ತು ಸಾವಿನ ಪ್ರಮಾಣ ಹೆಚ್ಚು ಇರುವ ರಾಜ್ಯಗಳ ಜೊತೆ ವಿಶೇಷ ಸಮಾಲೋಚನೆ ನಡೆಸುವುದು ಸಹಜ. ಆದರೆ ಉಳಿದ ರಾಜ್ಯಗಳೂ ಬಹಳ ಉತ್ತಮ ಸಲಹೆಗಳನ್ನು ಹೊಂದಿರಬಹುದು. ಆದುದರಿಂದ ನಾನು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಏನೆಂದರೆ ಅವಶ್ಯ ಇರುವಂತಹ ಧನಾತ್ಮಕ ಸಲಹೆಗಳನ್ನು ನನಗೆ ತಿಳಿಸಿ, ಇದರಿಂದ ಒಂದು ಸಮರ್ಪಕ ತಂತ್ರ ರೂಪಿಸುವುದಕ್ಕೆ ಸಹಾಯವಾಗುತ್ತದೆ.ಕೋವಿಡ್-19 ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
April 08th, 09:23 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ಸ್ಥಿತಿಗತಿ ಕುರಿತಂತೆ ಇಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.