ದ್ವೀಪ ರಾಷ್ಟ್ರ ಟಿಮೋರ್-ಲೆಸ್ಟೆ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿ ಸಭೆ
January 09th, 11:16 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಹೋರ್ಟಾ ಗಾಂಧಿನಗರದಲ್ಲಿಂದು ಭೇಟಿಯಾದರು. ವೈಬ್ರಂಟ್ ಗುಜರಾತ್ ಶೃಂಗಸಭೆಗೆ ಅಧ್ಯಕ್ಷ ಹೋರ್ಟಾ ಮತ್ತು ಅವರ ನಿಯೋಗಕ್ಕೆ ಪ್ರಧಾನ ಮಂತ್ರಿ ಮೋದಿ ಅವರು ಆತ್ಮೀಯ ಸ್ವಾಗತ ನೀಡಿದರು. ಉಭಯ ದೇಶಗಳ ನಡುವಿನ ರಾಷ್ಟ್ರ ಮಟ್ಟದ ಅಥವಾ ಸರ್ಕಾರ ಮಟ್ಟದ ಮುಖ್ಯಸ್ಥರ ಮೊದಲ ಭೇಟಿ ಇದಾಗಿದೆ. ರೋಮಾಂಚಕ ದೆಹಲಿ-ದಿಲಿ ಸಂಪರ್ಕವನ್ನು ಬಲವಾಗಿ ನಿರ್ಮಿಸುವ ಭಾರತದ ಬದ್ಧತೆಯನ್ನು ಪ್ರಧಾನ ಮಂತ್ರಿ ಪುನರುಚ್ಚರಿಸಿದರು. ಟಿಮೋರ್-ಲೆಸ್ಟೆಯಲ್ಲಿ ಭಾರತೀಯ ಮಿಷನ್ ತೆರೆಯುವುದಾಗಿ 2023 ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ಘೋಷಿಸಿದ್ದರು. ಸಾಮರ್ಥ್ಯ ಬಲವರ್ಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಸಾಂಪ್ರದಾಯಿಕ ಔಷಧ ಮತ್ತು ಫಾರ್ಮಾ, ಇಂಧನ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಟಿಮೋರ್-ಲೆಸ್ಟೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಇಂಟರ್‌ನ್ಯಾಶನಲ್ ಸೋಲಾರ್ ಅಲೈಯನ್ಸ್ (ISA) ಮತ್ತು ವಿಪತ್ತು ನಿರ್ವಹಣಾ ಮೂಲಸೌಕರ್ಯ(CDRI)ಕ್ಕೆ ಸೇರುವಂತೆ ಟಿಮೋರ್-ಲೆಸ್ಟೆಗೆ ಪ್ರಧಾನಿ ಆಹ್ವಾನ ನೀಡಿದರು.