ನೀತಿ ಆಯೋಗದ ಖ್ಯಾತ ಅರ್ಥಶಾಸ್ತ್ರಜ್ಞರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
December 24th, 06:57 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನೀತಿ ಆಯೋಗದಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಸಿದ್ಧತೆಗಾಗಿ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ಚಿಂತಕರ ಗುಂಪಿನೊಂದಿಗೆ ಸಂವಾದ ನಡೆಸಿದರು.The BJP-NDA government will fight the mafia-driven corruption in recruitment: PM Modi in Godda, Jharkhand
November 13th, 01:47 pm
Attending and addressing rally in Godda, Jharkhand, PM Modi expressed gratitude to the women of the state for their support. He criticized the local government for hijacking benefits meant for women, like housing and water supply. PM Modi assured that under the BJP-NDA government, every family in Jharkhand will get permanent homes, water, gas connections, and free electricity. He also promised solar panels for households, ensuring free power and compensation for any surplus electricity generated.We ensured that government benefits directly reach beneficiaries without intermediaries: PM Modi in Sarath, Jharkhand
November 13th, 01:46 pm
PM Modi addressed a large gathering in Jharkhand's Sarath. He said, Today, the first phase of voting is happening in Jharkhand. The resolve to protect livelihood, daughters, and land is visible at every booth. There is strong support for the guarantees that the BJP has given for the future of women and youth. It is certain that the JMM-Congress will be wiped out in the Santhali region this time.PM Modi engages lively audiences in Jharkhand’s Sarath & Godda
November 13th, 01:45 pm
PM Modi addressed a large gathering in Jharkhand's Sarath. He said, Today, the first phase of voting is happening in Jharkhand. The resolve to protect livelihood, daughters, and land is visible at every booth. There is strong support for the guarantees that the BJP has given for the future of women and youth. It is certain that the JMM-Congress will be wiped out in the Santhali region this time.ರೋಜ್ ಗಾರ್ ಮೇಳದ ಅಡಿಯಲ್ಲಿ 51,000+ ನೇಮಕಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
October 29th, 11:00 am
ದೇಶದ ವಿವಿಧ ಭಾಗಗಳಿಂದ ನಮ್ಮ ಜೊತೆಗೆ ಸೇರಿರುವ ನನ್ನ ಸಂಪುಟ ಸಹೋದ್ಯೋಗಿಗಳು, ಸಂಸತ್ ಸದಸ್ಯರು, ವಿಧಾನಸಭೆಗಳ ಸದಸ್ಯರು, ರಾಷ್ಟ್ರದ ಯುವ ಸ್ನೇಹಿತರು, ಮಹಿಳೆಯರೇ ಮತ್ತು ಮಹನೀಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು
October 29th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಉದ್ಯೋಗ ಮೇಳ ಬಿಂಬಿಸುತ್ತದೆ. ಇದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಮೂಲಕ ಯುವಕರನ್ನು ಸಬಲಗೊಳಿಸುತ್ತದೆ.ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್ ಅವತರಿಣಿಕೆ
October 20th, 04:54 pm
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಕಾರ್ಯಕ್ರಮಕ್ಕೆ ತಂತ್ರಜ್ಞಾನದ ನೆರವಿನಿಂದ ವರ್ಚುವಲ್ ಆಗಿ ಪಾಲ್ಗೊಂಡಿರುವ ಗೌರವಾನ್ವಿತ ರಾಜ್ಯಪಾಲರುಗಳೇ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ನಾಯ್ಡು ಅವರೇ, ವರ್ಚ್ಯುವಲ್ ಆಗಿ ಪಾಲ್ಗೊಂಡಿರುವ ಇತರೆ ಸಂಪುಟ ಸಹೋದ್ಯೋಗಿಗಳೇ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಉತ್ತರ ಪ್ರದೇಶ ಸರ್ಕಾರದ ನಾನಾ ಸಚಿವರೇ, ಸಂಸದರೇ, ಶಾಸಕರೇ ಮತ್ತು ಬನಾರಸ್‌ನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
October 20th, 04:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ 6,100 ಕೋಟಿ ರೂ. ಮೊತ್ತದ ಬಹುವಿಧದ ವಿಮಾನ ನಿಲ್ದಾಣ ಯೋಜನೆಗಳು ಮತ್ತು ವಾರಾಣಸಿಯ ಬಹು ಅಭಿವೃದ್ಧಿ ಉಪಕ್ರಮಗಳು ಸೇರಿವೆ.ಗುಜರಾತಿನ ಲೋಥಾಲ್ ನ ರಾಷ್ಟ್ರೀಯ ಸಾಗರ ಪರಂಪರೆಯ ಸಂಕೀರ್ಣ (ಎನ್.ಎಂ.ಹೆಚ್.ಸಿ) ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ
October 09th, 03:56 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಗುಜರಾತ್ ನ ಲೋಥಾಲ್ ನಲ್ಲಿರುವ ರಾಷ್ಟ್ರೀಯ ಸಾಗರ ಪರಂಪರೆಯ ಸಂಕೀರ್ಣ (ಎನ್.ಎಂ.ಹೆಚ್.ಸಿ) ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಈ ಯೋಜನೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ.ಭಾರತದ ಉತ್ಪಾದನಾ ಪುನರಾಗಮನವನ್ನು ಪ್ರಶಂಸಿಸಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯೋಗಗಳಲ್ಲಿ 7.6%, ವೇತನ ಹೆಚ್ಚಳ 5.5%, ಹಣಕಾಸು ವರ್ಷ -23 ರಲ್ಲಿ 21% ಜಿವಿಎ ಜಿಗಿತ
October 01st, 08:11 pm
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ವರ್ಷ-23 ರಲ್ಲಿ ಕಾರ್ಮಿಕರಿಗೆ ಉತ್ಪಾದನಾ ಉದ್ಯೋಗಗಳು ಮತ್ತು ವೇತನದಲ್ಲಿ ಇತ್ತೀಚೆಗೆ ವರದಿಯಾದ ಗಮನಾರ್ಹ ಏರಿಕೆಯನ್ನು ಶ್ಲಾಘಿಸಿದ್ದಾರೆ. ಸರ್ಕಾರದ ಸಮೀಕ್ಷೆಯ ಪ್ರಕಾರ, ಉತ್ಪಾದನಾ ಉದ್ಯೋಗಗಳು 7.6% ರಷ್ಟು ಏರಿಕೆಯಾಗಿದೆ ಮತ್ತು ಹಣಕಾಸು ವರ್ಷ-23 ರಲ್ಲಿ ವೇತನವು 5.5% ರಷ್ಟು ಏರಿಕೆ ಕಂಡಿದೆ.'ಮನ್ ಕಿ ಬಾತ್' ಕೇಳುಗರು ಈ ಕಾರ್ಯಕ್ರಮದ ನಿಜವಾದ ನಿರೂಪಕರು: ಪ್ರಧಾನಿ ಮೋದಿ
September 29th, 11:30 am
ನನ್ನ ಪ್ರೀತಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ ನಾವೆಲ್ಲರೂ 'ಮನದ ಮಾತಿನ' ಮೂಲಕ ಒಗ್ಗೂಡುವ ಅವಕಾಶ ಲಭಿಸಿದೆ. ಇಂದಿನ ಈ ಕಂತು ನನ್ನನ್ನು ಬಹಳ ಭಾವುಕನನ್ನಾಗಿಸಲಿದೆ, ಅನೇಕ ಹಳೆಯ ನೆನಪುಗಳು ನನ್ನನ್ನು ಮುತ್ತಿವೆ - ಕಾರಣ ಏನೆಂದರೆ 'ಮನದ ಮಾತಿನ' ನಮ್ಮ ಈ ಪಯಣಕ್ಕೆ 10 ವರ್ಷಗಳು ತುಂಬುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿಯ ದಿನದಂದು 'ಮನದ ಮಾತು’ ಪ್ರಾರಂಭವಾಗಿತ್ತು ಮತ್ತು ಈ ವರ್ಷ ಅಕ್ಟೋಬರ್ 3 ರಂದು 'ಮನದ ಮಾತಿಗೆ ' 10 ವರ್ಷತುಂಬುವ ಸಂದರ್ಭ ನವರಾತ್ರಿಯ ಮೊದಲ ದಿನವಾಗಿದೆ. 'ಮನದ ಮಾತಿನ’ ಈ ಸುದೀರ್ಘ ಪಯಣದಲ್ಲಿ ನಾನು ಎಂದೂ ಮರೆಯಲಾಗದ ಇಂತಹ ಹಲವಾರು ಮೈಲಿಗಲ್ಲುಗಳಿವೆ, ನಮ್ಮ ಈ ಪಯಣದಲ್ಲಿ ನಿರಂತರ ಸಹಯೋಗವನ್ನು ನೀಡಿದಂತಹ ' ಮನದ ಮಾತಿನ' ಕೋಟ್ಯಂತರ ಶ್ರೋತೃ ಬಾಂಧವರಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಅವರು ಮಾಹಿತಿಯನ್ನು ಒದಗಿಸಿದರು. ಮನದ ಮಾತಿನ ಶ್ರೋತೃಗಳೇ ಈ ಕಾರ್ಯಕ್ರಮದ ನಿಜವಾದ ರೂವಾರಿಗಳು. ಸಾಮಾನ್ಯವಾಗಿ ಎಲ್ಲಿಯವರೆಗೆ ರೋಚಕ ವಿಷಯಗಳನ್ನು ಮಾತನಾಡುವುದಿಲ್ಲವೋ, ನಕಾರಾತ್ಮಕ ವಿಷಯಗಳನ್ನು ಮಾತನಾಡುವುದಿಲ್ಲವೋ ಅಲ್ಲಿವರೆಗೆ ಅದು ಹೆಚ್ಚಿನ ಗಮನ ಸೆಳೆಯುವುದಿಲ್ಲ ಎನ್ನಲಾಗುತ್ತದೆ. ಆದರೆ ಮನದ ಮಾತು ದೇಶದ ಜನರು ಸಕಾರಾತ್ಮಕ ಮಾಹಿತಿಗಾಗಿ , ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಸಕಾರಾತ್ಮಕ ಮಾತು, ಪ್ರೇರಣಾತ್ಮಕ ಉದಾಹರಣೆಗಳು, ಸ್ಫೂರ್ತಿದಾಯಕ ಕಥೆಗಳು ಜನರಿಗೆ ಬಹಳ ಇಷ್ಟವಾಗುತ್ತವೆ. ಕೇವಲ ಮಳೆಹನಿಗಳನ್ನು ಮಾತ್ರ ಕುಡಿಯುವಂತಹ ಚಾತಕ ಪಕ್ಷಿಯಂತೆ ಜನರು ದೇಶದ ಸೌಲಭ್ಯಗಳ ಬಗ್ಗೆ, ಜನರ ಸಾಮೂಹಿಕ ಸಾಧನೆಗಳ ಬಗ್ಗೆ ಮನದ ಮಾತಿನ ಮೂಲಕ ಎಷ್ಟು ಹೆಮ್ಮೆಯಿಂದ ಕೇಳುತ್ತಾರೆ. ಮನದ ಮಾತಿನ 10 ವರ್ಷಗಳ ಪಯಣ ಎಷ್ಟು ಅದ್ಭುತವಾದ ಹಾರವನ್ನು ಸಿದ್ಧಗೊಳಿಸಿದೆ ಎಂದರೆ ಪ್ರತಿ ಸಂಚಿಕೆಯೊಂದಿಗೆ ಹೊಸ ಯಶೋಗಾಥೆಗಳು, ಹೊಸ ಕೀರ್ತಿವಂತರು ಮತ್ತು ಹೊಸ ವ್ಯಕ್ತಿತ್ವಗಳನ್ನು ಸೇರಿಸುತ್ತಾ ಸಾಗಿದೆ. ನಮ್ಮ ಸಮಾಜದಲ್ಲಿ ಸಾಮಾಜಿಕ ಹಿತದೃಷ್ಟಿಯ ಭಾವನೆಯಿಂದ ಯಾವುದೇ ಕೆಲಸ ಮಾಡಿದರೂ ಅವರಿಗೆ 'ಮನದ ಮಾತಿನ' ಮೂಲಕ ಗೌರವ ಲಭಿಸುತ್ತದೆ. 'ಮನದ ಮಾತಿ'ಗೆ ಬಂದ ಪತ್ರಗಳನ್ನು ನಾನು ಓದಿದಾಗ ನನ್ನ ಮನವೂ ಹೆಮ್ಮೆಯಿಂದ ಬೀಗುತ್ತದೆ. ನಮ್ಮ ದೇಶದಲ್ಲಿ ಅದೆಷ್ಟೋ ಪ್ರತಿಭಾವಂತರಿದ್ದಾರೆ, ಅವರು ತಮ್ಮ ಇಡೀ ಜೀವನವನ್ನು ಜನರ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಬಗ್ಗೆ ತಿಳಿಯುವುದು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. 'ಮನದ ಮಾತಿನ' ಈ ಸಂಪೂರ್ಣ ಪ್ರಕ್ರಿಯೆಯು ನನಗೆ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುವಂತಿದೆ. ಮನದ ಮಾತಿನ ಪ್ರತಿ ವಿಷಯ, ಪ್ರತಿ ಘಟನೆ, ಪ್ರತಿ ಪತ್ರವನ್ನು ನೆನಪಿಸಿಕೊಂಡಾಗ, ನನಗೆ ಭಗವಂತನ ರೂಪದಲ್ಲಿರುವ ಜನತಾ ಜನಾರ್ದನನ ದರ್ಶನ ಪಡೆದಂತೆ ಭಾಸವಾಗುತ್ತದೆ.ಹೆಚ್ಚುತ್ತಿರುವ ನಿರುದ್ಯೋಗದೊಂದಿಗೆ ತಮ್ಮ ಯುವಜನತೆಗೆ 'ದ್ರೋಹ' ಮಾಡುತ್ತಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಕ್ಷಗಳ ಆಡಳಿತದ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡರು
September 26th, 09:47 am
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿಶೇಷವಾಗಿ ಯುವಜನರಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ದರಗಳನ್ನು ಪರಿಹರಿಸಲು ವಿಫಲವಾದ ವಿರೋಧ ಪಕ್ಷದ ಆಡಳಿತದ ರಾಜ್ಯಗಳನ್ನು ಬಲವಾಗಿ ಟೀಕಿಸಿದ್ದಾರೆ. ಜುಲೈ 2023 ರಿಂದ ಜೂನ್ 2024 ರವರೆಗಿನ ಅವಧಿಯನ್ನು ಒಳಗೊಂಡಿರುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ (PLFS) ಇತ್ತೀಚಿನ ಡೇಟಾವನ್ನು ಉಲ್ಲೇಖಿಸಿದ ಪ್ರಧಾನ್, ವಿರೋಧ ಪಕ್ಷಗಳ ನೇತೃತ್ವದ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಎದ್ದುಕಾಣುವ ಅಸಮಾನತೆಗಳನ್ನು ಎತ್ತಿ ತೋರಿಸಿದರು.ಗುಜರಾತ್‌ನ ಗಾಂಧಿನಗರದಲ್ಲಿ ರಿ-ಇನ್ವೆಸ್ಟ್ 2024 ಸಮ್ಮೇಳನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 16th, 11:30 am
ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜಿ, ಗುಜರಾತ್ ಮುಖ್ಯಮಂತ್ರಿ, ಶ್ರೀ ಭೂಪೇಂದ್ರಭಾಯಿ ಪಟೇಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಜಿ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಜಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಜಿ, ಛತ್ತೀಸ್‌ಗಢ ಮುಖ್ಯಮಂತ್ರಿ ಮತ್ತು ಗೋವಾ ಮುಖ್ಯಮಂತ್ರಿಗಳೆ, ಸಂಪು ಸಹೋದ್ಯೋಗಿಗಳಾದ ಪ್ರಲ್ಹಾದ್ ಜೋಶಿ ಮತ್ತು ಶ್ರೀಪಾದ್ ನಾಯ್ಕ್ ಜಿ, ಜರ್ಮನಿಯ ಆರ್ಥಿಕ ಸಹಕಾರ ಸಚಿವರು ಮತ್ತು ಡೆನ್ಮಾರ್ಕ್‌ನ ಕೈಗಾರಿಕಾ ವ್ಯವಹಾರ ಸಚಿವರು ಸೇರಿದಂತೆ ವಿದೇಶಿ ಗಣ್ಯ ಅತಿಥಿಗಳೆ, ವಿವಿಧ ರಾಜ್ಯಗಳ ಇಂಧನ ಸಚಿವರೆ, ಹಲವಾರು ದೇಶಗಳ ಪ್ರತಿನಿಧಿಗಳೆ, ಇಲ್ಲಿ ನೆರೆದಿರುವ ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಗಾಂಧಿನಗರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್ ಪೋ (ಮರು ಹೂಡಿಕೆ) ಉದ್ಘಾಟಿಸಿದರು
September 16th, 11:11 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್ ಪೋ (ಮರು ಹೂಡಿಕೆ) ಉದ್ಘಾಟಿಸಿದರು. 3 ದಿನಗಳ ಶೃಂಗಸಭೆಯು 200 ಗಿಗಾವ್ಯಾಟ್ ಗಿಂತ ಹೆಚ್ಚು ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಭಾರತದ ಗಮನಾರ್ಹ ಸಾಧನೆಗೆ ಪ್ರಮುಖ ಕೊಡುಗೆ ನೀಡಿದವರನ್ನು ಗೌರವಿಸುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು, ನವೋದ್ಯಮಗಳು ಮತ್ತು ಪ್ರಮುಖ ಉದ್ಯಮದ ಉದ್ದಿಮಿಗಳ ಅತ್ಯಾಧುನಿಕ ಆವಿಷ್ಕಾರಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನು ಶ್ರೀ ನರೇಂದ್ರ ಮೋದಿ ವೀಕ್ಷಿಸಿದರು.ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
August 31st, 12:16 pm
ಅಶ್ವಿನಿ ವೈಷ್ಣವ್ ಜೀ ಸೇರಿದಂತೆ ಕೇಂದ್ರ ಸರ್ಕಾರದ ನನ್ನ ಗೌರವಾನ್ವಿತ ಸಹೋದ್ಯೋಗಿಗಳೇ; ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಜೀ; ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ; ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ನನ್ನ ಇತರ ಸಂಪುಟ ಸಹೋದ್ಯೋಗಿಗಳೇ; ರಾಜ್ಯಗಳ ಉಪ ಮುಖ್ಯಮಂತ್ರಿಗಳು; ಮಂತ್ರಿಗಳು; ಸಂಸತ್ ಸದಸ್ಯರು; ಮತ್ತು ದೇಶದಾದ್ಯಂತದ ಇತರ ಸಾರ್ವಜನಿಕ ಪ್ರತಿನಿಧಿಗಳು, ಮಹಿಳೆಯರೇ ಮತ್ತು ಮಹನೀಯರೇ!ವಿಡಿಯೋ ಕಾನ್ಪರೆನ್ಸ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
August 31st, 11:55 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಪ್ರಧಾನಮಂತ್ರಿಯವರ ‘ಭಾರತದಲ್ಲೇ ತಯಾರಿಸು - ಮೇಕ್ ಇನ್ ಇಂಡಿಯಾ’ ಮತ್ತು ಸ್ವಾವಲಂಬಿ ಭಾರತ” ದೃಷ್ಟಿಕೋನದ ಮಹತ್ವ ಕುರಿತು ಬೆಳಕು ಚೆಲ್ಲಿದರು. ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರ್‌ಕೋಯಿಲ್ ಮೂರು ಮಾರ್ಗಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತಿದೆ. ಈ ಮೂರು ರೈಲುಗಳು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಪರ್ಕ ವ್ಯವಸ್ಥೆಗೆ ಪುಷ್ಟಿ ನೀಡಲಿದೆ.ಹೊಸ 234 ನಗರಗಳು / ಪಟ್ಟಣಗಳಿಗೆ ಖಾಸಗಿ ಎಫ್.ಎಂ. ರೇಡಿಯೊಗಳನ್ನು ಪ್ರಸಾರ ಮಾಡಲು ಕೇಂದ್ರ ಸಂಪುಟ ಅನುಮೋದನೆ
August 28th, 05:21 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, 234 ಹೊಸ ನಗರಗಳಲ್ಲಿ 730 ಚಾನೆಲ್‌ಗಳಿಗೆ , ಖಾಸಗಿ ಎಫ್.ಎಂ. ರೇಡಿಯೊ ಹಂತದ 1-11 ನೀತಿಯಡಿ ಅಂದಾಜು ಮೀಸಲು ಬೆಲೆ ರೂ.784.87 ಕೋಟಿ ವೆಚ್ಚದಲ್ಲಿ 3 ನೇ ಆವೃತ್ತಿಯ ಆರೋಹಣ ರೀತಿಯ ಇ-ಹರಾಜು ಪ್ರಕ್ರಿಯೆಗಳನ್ನು ನಡೆಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ.309 ಕಿಮೀ ಉದ್ದದ ಹೊಸ ಮಾರ್ಗದ ಯೋಜನೆಗೆ ಕೇಂದ್ರ ಸಂಪುಟದ ಅನುಮೋದನೆ: ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮುಂಬೈ ಮತ್ತು ಇಂದೋರ್ ನಡುವೆ ದೂರ ಕಡಿಮೆಗೊಳಿಸುವ ರೈಲು ಸಂಪರ್ಕವನ್ನು ಒದಗಿಸಲಿದೆ
August 09th, 09:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿ.ಸಿ.ಇ.ಎ.), ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಒಟ್ಟು ರೂ. 18,036 ಕೋಟಿಗಳ (ಅಂದಾಜು) ಹೊಸ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಿದೆ. ಪ್ರಸ್ತಾವಿತ ಹೊಸ ಮಾರ್ಗವು ಇಂದೋರ್ ಮತ್ತು ಮನ್ಮಾಡ್ ನಡುವೆ ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ, ಭಾರತೀಯ ರೈಲ್ವೆಗೆ ವರ್ಧಿತ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಈ ಯೋಜನೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ನವಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿದೆ, ಇದು ಈ ಪ್ರದೇಶದ ಜನರನ್ನು ಆತ್ಮನಿರ್ಭರ ಮಾಡುವ ಮೂಲಕ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಅವರುಗಳಿಗೆ ಉದ್ಯೋಗ/ಸ್ವಯಂ ಉದ್ಯೋಗಗಳಿಗೆ ಅವಕಾಶಗಳನ್ನು ಹೆಚ್ಚಿಸುತ್ತದೆ.ಕಾರ್ಗಿಲ್‌ನಲ್ಲಿ ನಾವು ಕೇವಲ ಯುದ್ಧವನ್ನು ಗೆಲ್ಲಲಿಲ್ಲ; ನಾವು ಸತ್ಯ, ಸಂಯಮ ಮತ್ತು ಸಾಮರ್ಥ್ಯದ ನಂಬಲಾಗದ ಶಕ್ತಿಯನ್ನು ಪ್ರದರ್ಶಿಸಿದ್ದೇವೆ: ಲಡಾಖ್‌ನಲ್ಲಿ ಪ್ರಧಾನಿ ಮೋದಿ
July 26th, 09:30 am
ಲಡಾಖ್‌ನಲ್ಲಿ 25 ನೇ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಕರ್ತವ್ಯದ ಸಾಲಿನಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಧೀರರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ನಾವು ಯುದ್ಧವನ್ನು ಗೆದ್ದಿದ್ದಷ್ಟೇ ಅಲ್ಲ, ಸತ್ಯ, ಸಂಯಮ ಮತ್ತು ಶಕ್ತಿಯ ಅದ್ಭುತ ಉದಾಹರಣೆಯನ್ನು ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ʻಕಾರ್ಗಿಲ್ ವಿಜಯ ದಿನʼದ ಅಂಗವಾಗಿ ಹುತಾತ್ಮ ವೀರ ಯೋಧರಿಗೆ ಪ್ರಧಾನ ಮಂತ್ರಿಗಳು ಗೌರವ ನಮನ ಸಲ್ಲಿಸಿದರು ಮತ್ತು ಲಡಾಖ್‌ನಲ್ಲಿ ನಡೆದ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾಗಿಯಾದರು
July 26th, 09:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಡಾಖ್‌ನಲ್ಲಿ ನಡೆದ 25ನೇ ʻಕಾರ್ಗಿಲ್ ವಿಜಯ ದಿನʼದ ಸಂದರ್ಭದಲ್ಲಿ ಕರ್ತವ್ಯದ ವೇಳೆ ಪರಮೋಚ್ಚ ತ್ಯಾಗ ಮಾಡಿದ ವೀರ ಕಲಿಗಳಿಗೆ ಗೌರವ ನಮನ ಸಲ್ಲಿಸಿದರು. ಕಾರ್ಗಿಲ್ ವೀರ ಯೋಧರ ಶ್ರದ್ಧಾಂಜಲಿ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿದರು. ಕಾರ್ಗಿಲ್ ಯುದ್ಧದ ಬಗ್ಗೆ ʻಎನ್‌ಸಿಓʼಗಳ ಸಂಕ್ಷಿಪ್ತ ವಿವರಣೆಯಾದ ʻಗೌರವ್ ಗಾಥಾʼವನ್ನು ಪ್ರಧಾನಮಂತ್ರಿಯವರು ಆಲಿಸಿದರು. ಅಲ್ಲದೆ, ʻಅಮರ್ ಸಂಸ್ಮರಣ್: ನೆನಪಿನ ಗುಡಿಸಲುʼ ಹಾಗೂ ʻವೀರ ಭೂಮಿʼಗೂ ಅವರು ಭೇಟಿ ನೀಡಿದರು.