Be it COVID, disasters, or development, India has stood by you as a reliable partner: PM in Guyana

November 21st, 02:15 am

PM Modi and Grenada PM Dickon Mitchell co-chaired the 2nd India-CARICOM Summit in Georgetown. PM Modi expressed solidarity with CARICOM nations for Hurricane Beryl's impact and reaffirmed India's commitment as a reliable partner, focusing on development cooperation aligned with CARICOM's priorities.

ಎರಡನೇ ಭಾರತ-ಕಾರಿಕಾಮ್ ಶೃಂಗಸಭೆ

November 21st, 02:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಸ್ತುತ ಕಾರಿಕಾಮ್ ಒಕ್ಕೂಟದ ಅಧ್ಯಕ್ಷರಾದ ಗ್ರೆನಡಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಡಿಕಾನ್ ಮಿಚೆಲ್ ಅವರು 20 ನವೆಂಬರ್ 2024 ರಂದು ಜಾರ್ಜ್‌ಟೌನ್‌ ನಲ್ಲಿ ನಡೆದ 2ನೇ ಭಾರತ-ಕಾರಿಕಾಮ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದರು. ಶೃಂಗಸಭೆಯನ್ನು ಸೌಜನ್ಯದಿಂದ ಆಯೋಜಿಸಿದ್ದಕ್ಕಾಗಿ ಗಯಾನಾ ಅಧ್ಯಕ್ಷರಾದ ಘನತೆವೆತ್ತ ಶ್ರೀ ಇರ್ಫಾನ್ ಅಲಿ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.

ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಶೃಂಗಸಭೆ 2024 ರಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

November 16th, 10:15 am

100 ವರ್ಷಗಳ ಹಿಂದೆ, ಹಿಂದೂಸ್ತಾನ್ ಟೈಮ್ಸ್ ಅನ್ನು ಪೂಜ್ಯ ಬಾಪು ಉದ್ಘಾಟಿಸಿದರು ... ಅವರು ಗುಜರಾತಿ ಭಾಷಣಕಾರರಾಗಿದ್ದರು, ಮತ್ತು ನೀವು 100 ವರ್ಷಗಳ ನಂತರ ಇನ್ನೊಬ್ಬ ಗುಜರಾತಿಯನ್ನು ಆಹ್ವಾನಿಸಿದ್ದೀರಿ. ನಾನು, ಹಿಂದೂಸ್ತಾನ್ ಟೈಮ್ಸ್ ಮತ್ತು ಕಳೆದ 100 ವರ್ಷಗಳಲ್ಲಿ ಈ ಐತಿಹಾಸಿಕ ಪ್ರಯಾಣದೊಂದಿಗೆ ಸಂಬಂಧ ಹೊಂದಿರುವವರು, ಅದನ್ನು ಪೋಷಿಸಲು ಕೊಡುಗೆ ನೀಡಿದವರು, ಹೋರಾಡಿದ ಮತ್ತು ಸವಾಲುಗಳನ್ನು ಎದುರಿಸಿದ ಆದರೆ ದೃಢವಾಗಿ ನಿಂತ ಎಲ್ಲರನ್ನೂ ಅಭಿನಂದಿಸುತ್ತೇನೆ. ಅವರೆಲ್ಲರೂ ಇಂದು ಅಭಿನಂದನೆಗೆ ಅರ್ಹರು ಮತ್ತು ಗೌರವಕ್ಕೆ ಅರ್ಹರು. 100 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸುವುದು ನಿಜಕ್ಕೂ ಮಹತ್ವದ್ದಾಗಿದೆ. ನೀವೆಲ್ಲರೂ ಈ ಮನ್ನಣೆಗೆ ಅರ್ಹರು, ಮತ್ತು ಭವಿಷ್ಯಕ್ಕಾಗಿ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ನಾನು ಇಲ್ಲಿಗೆ ಬಂದಾಗ, ನಾನು ಕುಟುಂಬದ ಸದಸ್ಯರನ್ನು ಭೇಟಿಯಾದೆ ಮತ್ತು ಹಿಂದೂಸ್ತಾನ್ ಟೈಮ್ಸ್ ನ 100 ವರ್ಷಗಳ ಪ್ರಯಾಣವನ್ನು ಪ್ರದರ್ಶಿಸುವ ಗಮನಾರ್ಹ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಸಿಕ್ಕಿತು. ನಿಮಗೆ ಸಮಯವಿದ್ದರೆ ಹೊರಡುವ ಮೊದಲು ಅಲ್ಲಿಗೆ ಭೇಟಿ ನೀಡಿ ಸ್ವಲ್ಪ ಸಮಯ ಕಳೆಯಲು ನಾನು ನಿಮ್ಮೆಲ್ಲರನ್ನೂ ಪ್ರೋತ್ಸಾಹಿಸುತ್ತೇನೆ. ಇದು ಕೇವಲ ಪ್ರದರ್ಶನವಲ್ಲ, ಆದರೆ ಒಂದು ಅನುಭವ. 100 ವರ್ಷಗಳ ಇತಿಹಾಸ ನನ್ನ ಕಣ್ಣ ಮುಂದೆ ಹಾದುಹೋದಂತೆ ಭಾಸವಾಯಿತು. ದೇಶ ಸ್ವಾತಂತ್ರ್ಯ ಪಡೆದ ದಿನದಿಂದ ಮತ್ತು ಸಂವಿಧಾನವನ್ನು ಜಾರಿಗೆ ತಂದ ದಿನದಿಂದ ನಾನು ಪತ್ರಿಕೆಗಳನ್ನು ನೋಡಿದೆ. ಮಾರ್ಟಿನ್ ಲೂಥರ್ ಕಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ.ಎಂ.ಎಸ್.ಸ್ವಾಮಿನಾಥನ್ ಅವರಂತಹ ಪ್ರಸಿದ್ಧ ಮತ್ತು ಪ್ರಖ್ಯಾತ ವ್ಯಕ್ತಿಗಳು ಹಿಂದೂಸ್ತಾನ್ ಟೈಮ್ಸ್ ಗೆ ಬರೆಯುತ್ತಿದ್ದರು. ಅವರ ಬರಹಗಳು ಪತ್ರಿಕೆಯನ್ನು ಅಪಾರವಾಗಿ ಶ್ರೀಮಂತಗೊಳಿಸಿದವು. ನಿಜವಾಗಿಯೂ, ನಾವು ಬಹಳ ದೂರ ಸಾಗಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡುವುದರಿಂದ ಹಿಡಿದು ಸ್ವಾತಂತ್ರ್ಯದ ನಂತರ ಮಿತಿಯಿಲ್ಲದ ಭರವಸೆಯ ಅಲೆಗಳ ಮೇಲೆ ಸವಾರಿ ಮಾಡುವವರೆಗೆ, ಈ ಪ್ರಯಾಣವು ಅಸಾಧಾರಣ ಮತ್ತು ನಂಬಲಾಗದಂತಹದ್ದಾಗಿದೆ. ನಿಮ್ಮ ಪತ್ರಿಕೆಯಲ್ಲಿ, 1947 ರ ಅಕ್ಟೋಬರ್ ನಲ್ಲಿ ಕಾಶ್ಮೀರದ ಸೇರ್ಪಡೆಯ ನಂತರ ಇದ್ದ ಉತ್ಸಾಹವನ್ನು ನಾನು ಗ್ರಹಿಸಿದೆ, ಅದನ್ನು ಪ್ರತಿಯೊಬ್ಬ ನಾಗರಿಕರೂ ಅನುಭವಿಸಿದ್ದಾರೆ. ಆ ಕ್ಷಣದಲ್ಲಿ, ನಿರ್ಧಾರ ತೆಗೆದುಕೊಳ್ಳದಿರುವಿಕೆಯು ಕಾಶ್ಮೀರವನ್ನು ಏಳು ದಶಕಗಳ ಕಾಲ ಹಿಂಸಾಚಾರದಲ್ಲಿ ಮುಳುಗಿಸಿತು ಎಂಬುದನ್ನು ನಾನು ಅರಿತುಕೊಂಡೆ. ಇಂದು, ನಿಮ್ಮ ಪತ್ರಿಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆಯ ಮತದಾನದ ಸುದ್ದಿಗಳನ್ನು ವರದಿ ಮಾಡುತ್ತದೆ, ಇದು ಹಿಂದಿನದಕ್ಕೆ ತೀವ್ರವಾಗಿ ವ್ಯತಿರಿಕ್ತವಾಗಿದೆ. ಮತ್ತೊಂದು ಪತ್ರಿಕೆಯ ಪುಟವು ಗಮನ ಸೆಳೆಯುತ್ತದೆ ಮತ್ತು ಓದುಗರನ್ನು ಆಕರ್ಷಿಸುತ್ತದೆ. ಒಂದು ವಿಭಾಗವು ಅಸ್ಸಾಂ ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಲಾಗಿದೆ ಎಂದು ವರದಿ ಮಾಡಿದರೆ, ಇನ್ನೊಂದು ವಿಭಾಗವು ಅಟಲ್ ಜಿ ಬಿಜೆಪಿಗೆ ಅಡಿಪಾಯ ಹಾಕಿದ ಬಗ್ಗೆ ಮಾತನಾಡಿತು. ಇಂದು ಅಸ್ಸಾಂನಲ್ಲಿ ಶಾಶ್ವತ ಶಾಂತಿಯನ್ನು ತರುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸುತ್ತಿರುವುದು ಆಹ್ಲಾದಕರ ಕಾಕತಾಳೀಯವಾದ ಸಂಗತಿಯಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು

November 16th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹಿಂದೂಸ್ತಾನ್ ಟೈಮ್ಸ್ ಅನ್ನು 100 ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರು ಉದ್ಘಾಟಿಸಿದರು ಎಂದು ಹೇಳಿದರು. ಹಿಂದೂಸ್ತಾನ್ ಟೈಮ್ಸ್ ನ 100 ವರ್ಷಗಳ ಐತಿಹಾಸಿಕ ಪ್ರಯಾಣಕ್ಕಾಗಿ ಮತ್ತು ಅದರ ಉದ್ಘಾಟನೆಯಿಂದ ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು. ಸ್ಥಳದಲ್ಲಿ ಹಿಂದೂಸ್ತಾನ್ ಟೈಮ್ಸ್ ಪ್ರದರ್ಶನಕ್ಕೆ ಭೇಟಿ ನೀಡಿದ ಶ್ರೀ ಮೋದಿ, ಇದೊಂದು ಅಪೂರ್ವ ಅನುಭವವಾಗಿದೆ ಎಂದು ಹೇಳಿದರು ಮತ್ತು ಎಲ್ಲಾ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡುವಂತೆ ಒತ್ತಾಯಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಸಂವಿಧಾನ ಜಾರಿಯಾದ ಕಾಲದ ಹಳೆಯ ದಿನಪತ್ರಿಕೆಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದರು. ಮಾರ್ಟಿನ್ ಲೂಥರ್ ಕಿಂಗ್, ನೇತಾಜಿ ಸುಭಾಷಚಂದ್ರ ಬೋಸ್, ಡಾ.ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಎಂ.ಎಸ್. ಸ್ವಾಮಿನಾಥನ್ ಅವರಂತಹ ಅನೇಕ ದಿಗ್ಗಜರು ಹಿಂದೂಸ್ತಾನ್ ಟೈಮ್ಸ್ ಗಾಗಿ ಲೇಖನಗಳನ್ನು ಬರೆದಿದ್ದಾರೆ ಎಂದು ಶ್ರೀ ಮೋದಿ ಹೇಳಿರು. ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ಭರವಸೆಯೊಂದಿಗೆ ಮುನ್ನಡೆಯುವ ಜೊತೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಸುದೀರ್ಘ ಪ್ರಯಾಣವು ಅಸಾಧಾರಣ ಮತ್ತು ಅದ್ಭುತವಾಗಿದೆ ಎಂದು ಅವರು ಹೇಳಿದರು. 1947ರ ಅಕ್ಟೋಬರ್‌ನಲ್ಲಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನದ ಸುದ್ದಿಯನ್ನು ಓದಿದ ನಂತರ ಪ್ರತಿಯೊಬ್ಬ ಪ್ರಜೆಯಂತೆ ನಾನು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ಹೇಳಿದರು. ಆದಾಗ್ಯೂ, ಏಳು ದಶಕಗಳ ಕಾಲ ಅನಿರ್ದಿಷ್ಟತೆಯು ಕಾಶ್ಮೀರವನ್ನು ಹೇಗೆ ಹಿಂಸಾಚಾರದಲ್ಲಿ ಮುಳುಗಿಸಿತು ಎಂಬುದನ್ನೂ ಆ ಕ್ಷಣದಲ್ಲಿ ತಾನು ಅರಿತುಕೊಂಡೆನು ಎಂದು ಅವರು ಹೇಳಿದರು. ಆದರೆ ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ದಾಖಲೆಯ ಮತದಾನದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ಪತ್ರಿಕೆಯಲ್ಲಿ ಅದರ ಒಂದು ಬದಿಯಲ್ಲಿ ಅಸ್ಸಾಂ ಅನ್ನು ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಲಾಗಿದೆ ಎಂಬ ಸುದ್ದಿ ಇದೆ, ಇನ್ನೊಂದು ಬದಿಯಲ್ಲಿ ಅಟಲ್ ಜಿ ಅವರು ಭಾರತೀಯ ಜನತಾ ಪಕ್ಷದ ಅಡಿಪಾಯವನ್ನು ಹಾಕಿದರು ಎಂಬ ಸುದ್ದಿಯು ಪ್ರಕಟವಾಗಿರುವುದನ್ನು ಗಮನಿಸಿದರು. ಇಂದು ಅಸ್ಸಾಂನಲ್ಲಿ ಶಾಶ್ವತ ಶಾಂತಿಯನ್ನು ತರುವಲ್ಲಿ ಬಿಜೆಪಿ ದೊಡ್ಡ ಪಾತ್ರವನ್ನು ವಹಿಸುತ್ತಿರುವುದು ಕಾಕತಾಳೀಯವಾಗಿದೆ ಎಂದು ಅವರು ಹೇಳಿದರು.

ಬಿಹಾರದ ದರ್ಭಾಂಗದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸಮರ್ಪಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

November 13th, 11:00 am

ನಾನು ರಾಜ ಜನಕ ಮತ್ತು ಮಾತೆ ಸೀತಾ ಅವರ ಪವಿತ್ರ ಭೂಮಿಗೆ ಮತ್ತು ಮಹಾನ್ ಕವಿ ವಿದ್ಯಾಪತಿಯ ಜನ್ಮಸ್ಥಳಕ್ಕೆ ನಮಸ್ಕರಿಸುತ್ತೇನೆ. ಈ ಶ್ರೀಮಂತ ಮತ್ತು ಭವ್ಯವಾದ ಭೂಮಿಯ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದಲ್ಲಿ 12,100 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ಶಂಕುಸ್ಥಾಪನೆ ನೆರವೇರಿಸಿದರು ರಾಷ್ಟ್ರಕ್ಕೆ ಸಮರ್ಪಿಸಿದರು

November 13th, 10:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ದರ್ಭಾಂಗದಲ್ಲಿ ಸುಮಾರು 12,100 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಈ ಅಭಿವೃದ್ಧಿ ಯೋಜನೆಗಳು ಆರೋಗ್ಯ, ರೈಲು, ರಸ್ತೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳನ್ನು ಒಳಗೊಂಡಿವೆ.

ನವೆಂಬರ್ 13ರಂದು ಬಿಹಾರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

November 12th, 08:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ದರ್ಭಾಂಗಕ್ಕೆ ಪ್ರಯಾಣಿಸಲಿದ್ದು, ಬೆಳಗ್ಗೆ 10:45 ಕ್ಕೆ ಅವರು ಬಿಹಾರದಲ್ಲಿ ಸುಮಾರು 12,100 ಕೋಟಿ ರೂ.ಗಳ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದು, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

The unity of OBCs, SCs and STs is troubling Congress, and therefore they want the communities to fight each other: PM Modi in Pune

November 12th, 01:20 pm

In his final Pune rally, PM Modi said, Empowering Pune requires investment, infrastructure, and industry, and we’ve focused on all three. Over the last decade, foreign investment has hit record highs, and Maharashtra has topped India’s list of preferred destinations in the past two and a half years. Pune and nearby areas are gaining a major share of this investment.

PM Modi addresses public meetings in Chimur, Solapur & Pune in Maharashtra

November 12th, 01:00 pm

Campaigning in Maharashtra has gained momentum, with PM Modi addressing multiple public meetings in Chimur, Solapur & Pune. Congratulating Maharashtra BJP on releasing an excellent Sankalp Patra, PM Modi said, “This manifesto includes a series of commitments for the welfare of our sisters, for farmers, for the youth, and for the development of Maharashtra. This Sankalp Patra will serve as a guarantee for Maharashtra's development over the next 5 years.

ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ)ಯಲ್ಲಿ ಬಹುಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

October 29th, 01:28 pm

ಈ ಅರ್ಥಪೂರ್ಣ ಸಮಾರಂಭದಲ್ಲಿ ಉಪಸ್ಥಿತರಿರುವ ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಜಿ, ಮನ್ಸುಖ್ ಮಾಂಡವಿಯಾ ಜಿ, ಪ್ರತಾಪ್ ರಾವ್ ಜಾಧವ್ ಜಿ, ಶ್ರೀಮತಿ. ಅನುಪ್ರಿಯಾ ಪಟೇಲ್ ಜಿ, ಮತ್ತು ಶೋಭಾ ಕರಂದ್ಲಾಜೆ ಜಿ, ಈ ಭಾಗದ ನನ್ನ ಸಂಸದ, ಶ್ರೀ ರಾಮ್‌ವೀರ್ ಸಿಂಗ್ ಬಿಧುರಿ ಜಿ, ವಿವಿಧ ರಾಜ್ಯಗಳಿಂದ ವಾಸ್ತವಿಕ(ವರ್ಚುವಲ್) ಸಂಪರ್ಕ ಹೊಂದಿರುವ ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಇತರೆ ಎಲ್ಲ ಗೌರವಾನ್ವಿತ ಪ್ರತಿನಿಧಿಗಳು, ವೈದ್ಯರು, ಆಯುರ್ವೇದ ವೈದ್ಯರು ಮತ್ತು ದೇಶದ ವಿವಿಧ ಭಾಗಗಳಿಂದ ಆರೋಗ್ಯ ಸಂಸ್ಥೆಗಳಿಗೆ ಸಂಬಂಧಿಸಿದ ಆಯುಷ್ ಮತ್ತು ಆರೋಗ್ಯ ವೃತ್ತಿಪರರು, ಆರೋಗ್ಯ ವ್ಯವಸ್ಥೆಯಲ್ಲಿ ತೊಡಗಿರುವ ಸಹೋದರ ಸಹೋದರಿಯರೆ, ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ, ಮಹಿಳೆಯರು ಮತ್ತು ಮಹನೀಯರೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,850 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು

October 29th, 01:00 pm

ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ (ಎಐಐಎ) ಸುಮಾರು 12,850 ಕೋಟಿ ರೂಪಾಯಿ ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಮಹಾರಾಷ್ಟ್ರದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

October 09th, 01:09 pm

ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೇ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳೇ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಅವರೇ, ಶ್ರೀ ಅಜಿತ್ ಪವಾರ್ ಅವರೇ, ಇತರ ಎಲ್ಲ ಗಣ್ಯರೇ ಮತ್ತು ಮಹಾರಾಷ್ಟ್ರದ ನನ್ನ ಪ್ರಿಯ ಸಹೋದರ ಸಹೋದರಿಯರೇ...

ಮಹಾರಾಷ್ಟ್ರದಲ್ಲಿ 7600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

October 09th, 01:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ 7600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ ನಾಗ್ಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆ ಮತ್ತು ಶಿರಡಿ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ಸೇರಿವೆ. ಶ್ರೀ ಮೋದಿ ಅವರು ಮಹಾರಾಷ್ಟ್ರದ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕಾರ್ಯಾಚರಣೆಗೆ ಚಾಲನೆ ನೀಡಿದರು ಮತ್ತು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಮತ್ತು ಮಹಾರಾಷ್ಟ್ರದ ವಿದ್ಯಾ ಸಮೀಕ್ಷಾ ಕೇಂದ್ರ (ವಿಎಸ್ಕೆ) ಗಳನ್ನು ಉದ್ಘಾಟಿಸಿದರು.

ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟದ ಏಕೈಕ ಅಜೆಂಡಾ ಫ್ಯಾಮಿಲಿ ಫಸ್ಟ್: ಪಶ್ಚಿಮ ದೆಹಲಿಯ ದ್ವಾರಕಾದಲ್ಲಿ ಪ್ರಧಾನಿ ಮೋದಿ

May 22nd, 06:20 pm

ಪಶ್ಚಿಮ ದೆಹಲಿಯ ದ್ವಾರಕಾದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರದ ರಾಜಕೀಯ ಭೂದೃಶ್ಯವನ್ನು ರೂಪಿಸುವಲ್ಲಿ ದೆಹಲಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ನಡೆಯುತ್ತಿರುವ ಚುನಾವಣೆಯಲ್ಲಿ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಮತದಾರರನ್ನು ಒತ್ತಾಯಿಸಿದರು.

ಪಶ್ಚಿಮ ದೆಹಲಿಯ ದ್ವಾರಕಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ

May 22nd, 06:00 pm

ಪಶ್ಚಿಮ ದೆಹಲಿಯ ದ್ವಾರಕಾದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರದ ರಾಜಕೀಯ ಭೂದೃಶ್ಯವನ್ನು ರೂಪಿಸುವಲ್ಲಿ ದೆಹಲಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ನಡೆಯುತ್ತಿರುವ ಚುನಾವಣೆಯಲ್ಲಿ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಮತದಾರರನ್ನು ಒತ್ತಾಯಿಸಿದರು.

ಮನೆಗಳಿದ್ದಂತೆ, ದೇಶವು ಮಹಿಳೆಯರಿಲ್ಲದೆ ನಡೆಯುವುದಿಲ್ಲ: ವಾರಣಾಸಿ, ಯುಪಿಯಲ್ಲಿ ಪ್ರಧಾನಿ ಮೋದಿ

May 21st, 06:00 pm

ವಾರಣಾಸಿಯ ಮಹಿಳಾ ಸಮ್ಮೇಳನದಲ್ಲಿ ಹೃತ್ಪೂರ್ವಕ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬನಾರಸ್ ಜನರಲ್ಲಿ ತಮ್ಮ ಅಚಲವಾದ ವಿಶ್ವಾಸವನ್ನು ಪುನರುಚ್ಚರಿಸಿದರು ಮತ್ತು ಕಳೆದ ದಶಕದಲ್ಲಿ ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿಯತ್ತ ತಮ್ಮ ಸರ್ಕಾರ ಮಾಡಿದ ಮಹತ್ವದ ದಾಪುಗಾಲುಗಳನ್ನು ಎತ್ತಿ ತೋರಿಸಿದರು. ಪ್ರಚಾರದ ಅವಧಿಯಲ್ಲಿ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುವವರನ್ನು ಒತ್ತಾಯಿಸಿದರು.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಹಿಳಾ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

May 21st, 05:30 pm

ವಾರಣಾಸಿಯ ಮಹಿಳಾ ಸಮ್ಮೇಳನದಲ್ಲಿ ಹೃತ್ಪೂರ್ವಕ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬನಾರಸ್ ಜನರಲ್ಲಿ ತಮ್ಮ ಅಚಲವಾದ ವಿಶ್ವಾಸವನ್ನು ಪುನರುಚ್ಚರಿಸಿದರು ಮತ್ತು ಕಳೆದ ದಶಕದಲ್ಲಿ ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿಯತ್ತ ತಮ್ಮ ಸರ್ಕಾರ ಮಾಡಿದ ಮಹತ್ವದ ದಾಪುಗಾಲುಗಳನ್ನು ಎತ್ತಿ ತೋರಿಸಿದರು. ಪ್ರಚಾರದ ಅವಧಿಯಲ್ಲಿ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುವವರನ್ನು ಒತ್ತಾಯಿಸಿದರು.

ನಿಮ್ಮ ಕನಸುಗಳೇ ನನ್ನ ಸಂಕಲ್ಪ ಮತ್ತು ಇದಕ್ಕಾಗಿ 24/7 2047: ಸರನ್‌ನಲ್ಲಿ ಪ್ರಧಾನಿ ಮೋದಿ

May 13th, 11:00 am

ಸರನ್‌ನಲ್ಲಿ ಮೂರನೇ ಮತ್ತು ಅಂತಿಮ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ದಶಕಗಳ ಕಾಲ ಕಾಂಗ್ರೆಸ್ ಸರ್ಕಾರಗಳು ಬಡವರಿಗೆ ಆಹಾರ ನೀಡುವುದನ್ನು ಖಚಿತಪಡಿಸಲಿಲ್ಲ. ಬಡವರ ಪರಿಸ್ಥಿತಿ ಹದಗೆಟ್ಟಿತು ಮತ್ತು ಆರ್ಥಿಕತೆಯು ಕುಸಿಯಿತು. ಆದರೆ, ಅಧಿಕಾರದಲ್ಲಿರುವವರು ‘ನಮ್ಮಲ್ಲಿ ಮಂತ್ರದಂಡವಿದೆಯೇ’ ಎಂದು ಹೇಳುತ್ತಿದ್ದರು. ಅವರು ಭ್ರಷ್ಟಾಚಾರದ ಮೂಲಕ ತಮ್ಮ ಬೊಕ್ಕಸವನ್ನು ತುಂಬಿಸಿದರು ಆದರೆ ಬಡವರಿಗೆ ಆಹಾರ ನೀಡುವ ಬಗ್ಗೆ ಕಾಳಜಿ ವಹಿಸಲಿಲ್ಲ.

ಆರ್‌ಜೆಡಿಯ ಜಂಗಲ್ ರಾಜ್ ಬಿಹಾರವನ್ನು ದಶಕಗಳ ಕಾಲ ಹಿಂದಕ್ಕೆ ತಳ್ಳಿದೆ: ಮುಜಾಫರ್‌ಪುರದಲ್ಲಿ ಪ್ರಧಾನಿ ಮೋದಿ

May 13th, 10:51 am

ಮುಜಾಫರ್‌ಪುರದಲ್ಲಿ ದಿನದ ಎರಡನೇ ರ್ಯಾಲಿಯಲ್ಲಿ ಪ್ರಧಾನಿ ಮೋದಿ, “ಇದು ದೇಶದ ಚುನಾವಣೆ, ದೇಶದ ನಾಯಕತ್ವವನ್ನು ಆಯ್ಕೆ ಮಾಡುವ ಆಯ್ಕೆಯಾಗಿದೆ. ಕಾಂಗ್ರೆಸ್‌ನಂತಹ ದುರ್ಬಲ, ಹೇಡಿತನ ಮತ್ತು ಅಸ್ಥಿರ ಸರಕಾರ ದೇಶಕ್ಕೆ ಬೇಕಾಗಿಲ್ಲ. ನೀವು ಊಹಿಸಬಹುದು... ಇವರು ಎಷ್ಟು ಭಯಭೀತರಾಗಿದ್ದಾರೆ, ಅವರ ಕನಸಿನಲ್ಲಿಯೂ ಅವರು ಪಾಕಿಸ್ತಾನದ ಪರಮಾಣು ಬಾಂಬ್ಗಳನ್ನು ನೋಡುತ್ತಾರೆ. ಕಾಂಗ್ರೆಸ್ ನಾಯಕರು ಮತ್ತು 'INDI ಅಲಯನ್ಸ್' ನಾಯಕರು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ? ಪಾಕಿಸ್ತಾನವು ಬಳೆಗಳನ್ನು ಧರಿಸಿಲ್ಲ ಎಂದು ಹೇಳುತ್ತಿದೆ. ಮುಂಬೈ ದಾಳಿಯಲ್ಲಿ ಪಾಕಿಸ್ತಾನಕ್ಕೆ ಯಾರೋ ಕ್ಲೀನ್ ಚಿಟ್ ನೀಡುತ್ತಿದ್ದಾರೆ. ಯಾರೋ ಸರ್ಜಿಕಲ್ ಮತ್ತು ವೈಮಾನಿಕ ದಾಳಿಗಳನ್ನು ಪ್ರಶ್ನಿಸುತ್ತಿದ್ದಾರೆ ... ಎಡಪಂಥೀಯರು ಸಹ ಭಾರತದ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಬಯಸುತ್ತಾರೆ. ಇಂತಹ ಸ್ವಾರ್ಥಿಗಳು ದೇಶದ ಭದ್ರತೆಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದೇ? ಅಂತಹ ಪಕ್ಷಗಳು ಬಲಿಷ್ಠ ಭಾರತವನ್ನು ನಿರ್ಮಿಸಲು ಸಾಧ್ಯವೇ?

ಬಿಹಾರದ ಹಾಜಿಪುರ, ಮುಜಾಫರ್‌ಪುರ ಮತ್ತು ಸರನ್‌ನಲ್ಲಿ ತಮ್ಮ ಶಕ್ತಿಯುತ ಮಾತುಗಳಿಂದ ಜನಸಮೂಹಕ್ಕೆ ಶಕ್ತಿ ತುಂಬಿದ ಪ್ರಧಾನಿ ಮೋದಿ

May 13th, 10:30 am

ಹಾಜಿಪುರ, ಮುಜಾಫರ್‌ಪುರ ಮತ್ತು ಸರನ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಿದವು. ಬಿಹಾರದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಕಸಿತ್ ಭಾರತ್ ಮತ್ತು ವಿಕಸಿತ್ ಬಿಹಾರವನ್ನು ನಿರ್ಮಿಸಲು ಬಿಜೆಪಿಯ ಅಚಲ ಸಮರ್ಪಣೆಯನ್ನು ಒತ್ತಿ ಹೇಳಿದರು. ಎಲ್ಲರಿಗೂ ನಿರ್ಧಾರ ಕೈಗೊಳ್ಳುವಲ್ಲಿ ಸಮಾನ ಭಾಗವಹಿಸುವಿಕೆಯನ್ನು ಅವರು ಭರವಸೆ ನೀಡಿದರು.