ಗುಜರಾತ್ ನ ಜಂಬೂಘೋಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ
November 01st, 01:12 pm
ಇಂದು ಗುಜರಾತ್ ಮತ್ತು ಇಡೀ ದೇಶದ ಬುಡಕಟ್ಟು ಸಮಾಜಕ್ಕೆ ಬಹಳ ನಿರ್ಣಾಯಕ ದಿನವಾಗಿದೆ. ಸ್ವಲ್ಪ ಸಮಯದ ಹಿಂದೆ ನಾನು ಮಾನ್ ಗಢ್ ಧಾಮ್ ನಲ್ಲಿದ್ದೆ. ಮತ್ತು 'ಆಜಾದಿ ಕಾ ಅಮೃತ್ ಮಹೋತ್ಸವ'ದಲ್ಲಿ, ಮಾನ್ ಗಢ್ ಧಾಮ್ ನಲ್ಲಿ ಗೋವಿಂದ ಗುರು ಸೇರಿದಂತೆ ಸಾವಿರಾರು ಹುತಾತ್ಮ ಬುಡಕಟ್ಟು ಸಹೋದರ ಮತ್ತು ಸಹೋದರಿಯರಿಗೆ ಗೌರವ ಸಲ್ಲಿಸುವ ಮೂಲಕ ಬುಡಕಟ್ಟು ಜನರ ಮಹಾನ್ ತ್ಯಾಗಕ್ಕೆ ವಂದಿಸುವ ಅವಕಾಶ ನನಗೆ ದೊರಕಿತು. ಈಗ ನಾನು ನಿಮ್ಮೊಂದಿಗೆ ಜಂಬುಘೋಡದಲ್ಲಿದ್ದೇನೆ ಮತ್ತು ಜಂಬೂಘೋಡವು ನಮ್ಮ ಬುಡಕಟ್ಟು ಸಮಾಜದ ಮಹಾನ್ ಬಲಿದಾನಕ್ಕೆ ಸಾಕ್ಷಿಯಾಗಿದೆ. ಇಂದು ನಾವು ಶಹೀದ್ ಜೋರಿಯಾ ಪರಮೇಶ್ವರ, ರೂಪ್ ಸಿಂಗ್ ನಾಯಕ್, ಗಲಾಲಿಯಾ ನಾಯಕ್, ರಾವ್ ಜಿದಾ ನಾಯಕ್ ಮತ್ತು ಬಾಬರಿಯಾ ಗಲ್ಮಾ ನಾಯಕ್ ಅವರಂತಹ ಅಮರ ಹುತಾತ್ಮರಿಗೆ ಗೌರವ ಸಲ್ಲಿಸುವ ಅವಕಾಶವನ್ನು ಪಡೆದಿದ್ದೇವೆ.“ಪ್ರಧಾನ ಮಂತ್ರಿಗಳಿಂದ ಗುಜರಾತ್‌ನ ಜಂಬುಘೋಡಾದಲ್ಲಿ ಸುಮಾರು 860 ಕೋಟಿ ರೂ. ಮೊತ್ತದ ರಾಷ್ಟ್ರೀಯ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ”
November 01st, 01:11 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುಜರಾತ್‌ನ ಪಂಚಮಹಲ್‌ನ ಜಂಬುಘೋಡಾದಲ್ಲಿ ಇಂದು ಸುಮಾರು 860 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಪೂರ್ಣಗೊಂಡ ಯೋಜನೆಗಳನ್ನು ಲೋಕಾರ್ಪಣೆ ನೆರವೇರಿಸಿದರು.