ಜಲ ಜೀವನ ಮಿಷನ್ ನ ದೃಷ್ಟಿಕೋನವು ಜನರಿಗೆ ನೀರನ್ನು ತಲುಪುವಂತೆ ಮಾಡುವುದು ಮಾತ್ರವಲ್ಲ, ಇದು ವಿಕೇಂದ್ರಿಕರಣದ ಒಂದು ದೊಡ್ಡ ಚಳುವಳಿಯಾಗಿದೆ: ಪ್ರಧಾನಿ

October 02nd, 02:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲ ಜೀವನ ಅಭಿಯಾನ ಕುರಿತಂತೆ ಇಂದು ಗ್ರಾಮ ಪಂಚಾಯ್ತಿಗಳು ಮತ್ತು ಜಲ ಸಮಿತಿಗಳು/ ಗ್ರಾಮೀಣ ನೀರು ಮತ್ತು ಒಳಚರಂಡಿ ಸಮಿತಿ (ವಿಡಬ್ಲ್ಯುಎಸ್.ಸಿ.)ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಅಭಿಯಾನದ ಅಡಿಯಲ್ಲಿ ಬಾಧ್ಯಸ್ಥರ ನಡುವೆ ಜಾಗೃತಿಯನ್ನು ಸುಧಾರಿಸಲು ಮತ್ತು ಅಭಿಯಾನದಡಿಯಲ್ಲಿ ಯೋಜನೆಯ ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ಹೊಣೆಗಾರಿಕೆಗಾಗಿ ಜಲ್ ಜೀವನ ಅಭಿಯಾನದ ಆಪ್ ಗೆ ಚಾಲನೆ ನೀಡಿದರು. ರಾಷ್ಟ್ರೀಯ ಜಲ ಜೀವನ ಕೋಶಕ್ಕೂ ಅವರು ಚಾಲನೆ ನೀಡಿದರು .

ಜಲ ಜೀವನ ಅಭಿಯಾನ ಕುರಿತಂತೆ ಪ್ರಧಾನಮಂತ್ರಿ ಮೋದಿ ಅವರು ಗ್ರಾಮ ಪಂಚಾಯ್ತಿಗಳು ಮತ್ತು ಜಲ ಸಮಿತಿಗಳೊಂದಿಗೆ ಸಂವಾದ ನಡೆಸಿದರು

October 02nd, 01:13 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲ ಜೀವನ ಅಭಿಯಾನ ಕುರಿತಂತೆ ಇಂದು ಗ್ರಾಮ ಪಂಚಾಯ್ತಿಗಳು ಮತ್ತು ಜಲ ಸಮಿತಿಗಳು/ ಗ್ರಾಮೀಣ ನೀರು ಮತ್ತು ಒಳಚರಂಡಿ ಸಮಿತಿ (ವಿಡಬ್ಲ್ಯುಎಸ್.ಸಿ.)ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಅಭಿಯಾನದ ಅಡಿಯಲ್ಲಿ ಬಾಧ್ಯಸ್ಥರ ನಡುವೆ ಜಾಗೃತಿಯನ್ನು ಸುಧಾರಿಸಲು ಮತ್ತು ಅಭಿಯಾನದಡಿಯಲ್ಲಿ ಯೋಜನೆಯ ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ಹೊಣೆಗಾರಿಕೆಗಾಗಿ ಜಲ್ ಜೀವನ ಅಭಿಯಾನದ ಆಪ್ ಗೆ ಚಾಲನೆ ನೀಡಿದರು. ರಾಷ್ಟ್ರೀಯ ಜಲ ಜೀವನ ಕೋಶಕ್ಕೂ ಅವರು ಚಾಲನೆ ನೀಡಿದರು, ಇದರಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆ, ನಿಗಮ ಅಥವಾ ಭಾರತದಲ್ಲಿರುವ ಅಥವಾ ವಿದೇಶದಲ್ಲಿರುವ ದಾನಿಗಳು ಪ್ರತಿ ಗ್ರಾಮೀಣ ವಸತಿಗಳಿಗೆ, ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ, ಆಶ್ರಮ ಶಾಲೆಗಳಿಗೆ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಕೊಳವೆಯ ನೀರಿನ ಸಂಪರ್ಕ ಕಲ್ಪಿಸಲು ಕೊಡುಗೆ ನೀಡಬಹುದಾಗಿದೆ. ಗ್ರಾಮ ಪಂಚಾಯ್ತಿಯ ಮತ್ತು ಜಲ ಸಮಿತಿಗಳ ಸದಸ್ಯರುಗಳ ಜೊತೆಗೆ, ಕೇಂದ್ರ ಸಚಿವರುಗಳಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಶ್ರೀ ಬಿಶ್ವೇಶ್ವರ್ ತುಡು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಕ್ಟೋಬರ್ 2ರಂದು ಗ್ರಾಮ ಪಂಚಾಯ್ತಿ ಮತ್ತು ಜಲಜೀವನ್ ಮಿಷನ್ ನ ಜಲ ಸಮಿತಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ

October 01st, 12:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 2ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮ ಪಂಚಾಯ್ತಿಗಳು ಮತ್ತು ಜಲಜೀವನ್ ಮಿಷನ್ ನ ಜಲ ಸಮಿತಿ/ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲೂಎಸ್ ಸಿ)ಗಳೊಂದಿಗೆ ಸಂವಾದ ನಡೆಸಲಿದ್ದಾರೆ.