ಜೈಪುರದ ಖೇಲ್ ಮಹಾಕುಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
February 05th, 05:13 pm
ಮೊದಲನೆಯದಾಗಿ, ಜೈಪುರ ಮಹಾಖೇಲ್ ಕ್ರೀಟಾಕೂಟದಲ್ಲಿ ಭಾಗವಹಿಸಿದ, ಪದಕಗಳನ್ನು ಗೆದ್ದ ಆಟಗಾರರು ಮತ್ತು ಪ್ರತಿಯೊಬ್ಬ ಆಟಗಾರರು, ತರಬೇತುದಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವೆಲ್ಲರೂ ಜೈಪುರದ ಆಟದ ಮೈದಾನಕ್ಕೆ ಬಂದಿರುವುದು ಕೇವಲ ಆಟವಾಡಲು ಅಲ್ಲ ಗೆಲ್ಲಲು ಮತ್ತು ಕಲಿಯಲು. ಮತ್ತು, ಕಲಿಕೆ ಇರುವಲ್ಲಿ, ಗೆಲುವು ತಾನೇತಾನಾಗಿ ಖಚಿತವಾಗುತ್ತದೆ. ಯಾವುದೇ ಆಟಗಾರನು ಸ್ಪರ್ಧೆಯಿಂದ ಬರಿಗೈಯಲ್ಲಿ ಹಿಂತಿರುಗುವುದಿಲ್ಲ.ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಿದರು
February 05th, 12:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಉದ್ದೇಶಿಸಿ ಇಂದು ವಿಡಿಯೊ ಸಮಾವೇಶ ಮೂಲಕ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಕಬ್ಬಡಿ ಪಂದ್ಯವನ್ನು ವೀಕ್ಷಿಸಿದರು. ಜೈಪುರ ಗ್ರಾಮಾಂತರದ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು 2017 ರಿಂದ ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಆಯೋಜಿಸುತ್ತಿದ್ದಾರೆ.