ಭಕ್ತಿ ಕಾಲದ ಸಾಮಾಜಿಕ ಕ್ರಾಂತಿಯಿಲ್ಲದೆ ಭಾರತದ ಸ್ಥಿತಿ ಮತ್ತು ರೂಪವನ್ನು ಊಹಿಸಿಕೊಳ್ಳುವುದು ಕಷ್ಟ: ಪ್ರಧಾನಿ ಮೋದಿ
September 01st, 04:31 pm
ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಜೀ ಅವರ 125 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು. ಗುಲಾಮಗಿರಿಯ ಕಾಲದಲ್ಲಿ ಭಕ್ತಿ ಭಾರತದ ಚೈತನ್ಯವನ್ನು ಜೀವಂತವಾಗಿರಿಸಿದೆ ಎಂದು ಪ್ರಧಾನಿ ಹೇಳಿದರು. ಭಕ್ತಿ ಕಾಲದ ಸಾಮಾಜಿಕ ಕ್ರಾಂತಿ ಇಲ್ಲದಿದ್ದರೆ, ಭಾರತದ ಸ್ಥಿತಿ ಮತ್ತು ರೂಪವನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು ಎಂದು ಇಂದು ವಿದ್ವಾಂಸರು ನಿರ್ಣಯಿಸುತ್ತಾರೆ ಎಂದು ಅವರು ಹೇಳಿದರು.ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ 125 ನೇ ಜಯಂತಿಯ ಅಂಗವಾಗಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ಪ್ರಧಾನಿ
September 01st, 04:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ 125 ನೇ ಜಯಂತಿಯ ಅಂಗವಾಗಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.ಭಾರತದ ಯುವಜನತೆ ಈಗ ಏನಾದರೂ ದೊಡ್ಡಪ್ರಮಾಣದಲ್ಲಿ ಹೊಸ ಪ್ರಯತ್ನವನ್ನು ಮಾಡಲು ಬಯಸುತ್ತಾರೆ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.
August 29th, 11:30 am
ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೇಜರ್ ಧ್ಯಾನಚಂದ್ ಅವರಿಗೆ ಗೌರವ ಸಲ್ಲಿಸಿದರು ಮತ್ತು ವಿಶ್ವ ವೇದಿಕೆಯಲ್ಲಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದ ನಮ್ಮ ಒಲಿಂಪಿಯನ್ ಗಳ ಬಗ್ಗೆ ಮಾತನಾಡಿದರು. ದೇಶದ ಯುವಕರು ಅಪಾಯಗಳನ್ನು ತೆಗೆದುಕೊಂಡು ಮುಂದೆ ಸಾಗುವ ಸಾಮರ್ಥ್ಯಕ್ಕಾಗಿ ಅವರು ಶ್ಲಾಘಿಸಿದರು. ಪ್ರಧಾನಮಂತ್ರಿಯವರು ನಮ್ಮ ನುರಿತ ಮಾನವಶಕ್ತಿಯ ಪ್ರಯತ್ನಗಳನ್ನು ಎತ್ತಿ ತೋರಿಸಿದರು ಮತ್ತು ಭಗವಾನ್ ವಿಶ್ವಕರ್ಮರಿಗೆ ಗೌರವ ಸಲ್ಲಿಸಿದರು.ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 19 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ
December 27th, 11:30 am
ಸ್ನೇಹಿತರೆ, ದೇಶದ ಸಾಮಾನ್ಯ ಜನರು ಕೂಡ ಈ ಬದಲಾವಣೆಯನ್ನು ಅನುಭವಿಸಿದ್ದಾರೆ. ನಾನು ದೇಶದಲ್ಲಿ ಒಂದು ಸದಾಶಯದ ಪ್ರವಾಹವನ್ನೂ ಕಂಡಿದ್ದೇನೆ. ಹಲವಾರು ಸವಾಲುಗಳು ಎದುರಾದವು. ಹಲವಾರು ಸಂಕಷ್ಟಗಳು ಎದುರಾದವು. ಅನೇಕ ತೊಂದರೆಗಳು ಎದುರಾದವು. ಕೊರೊನದಿಂದಾಗಿ ವಿಶ್ವದಲ್ಲಿ ಸರಬರಾಜು ಸರಪಳಿಯಲ್ಲಿ ಅನೇಕ ತೊಂದರೆಗಳು ಎದುರಾದವು. ಆದರೆ ನಾವು ಪ್ರತಿಯೊಂದು ಸಂಕಷ್ಟದಿಂದಲೂ ಹೊಸತೊಂದು ಪಾಠವನ್ನು ಕಲಿತೆವು. ದೇಶದಲ್ಲಿ ಹೊಸ ಸಾಮರ್ಥ್ಯವೂ ಸೃಷ್ಟಿಯಾಯಿತು. ಶಬ್ದಗಳಲ್ಲಿ ಹೇಳಬೇಕೆಂದರೆ ಈ ಸಾಮರ್ಥ್ಯದ ಹೆಸರು ಸ್ವಾವಲಂಬನೆ.ಗೀತಾ ನಮಗೆ ಸಾಮರಸ್ಯ ಮತ್ತು ಸಹೋದರತ್ವವನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ
February 26th, 05:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೊಸದಿಲ್ಲಿಯ ಇಸ್ಕಾನ್ ಗ್ಲೋರಿ ಆಫ್ ಇಂಡಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ಏರ್ಪಟ್ಟ ಗೀತ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು.ಅವರು ಇಸ್ಕಾನ್ ಭಕ್ತರು ರೂಪಿಸಿದ ವಿಶಿಷ್ಟ ಭಗವದ್ಗೀತೆಯನ್ನು ಅನಾವರಣ ಮಾಡಿದರು. ಇದು 2.8 ಮೀಟರಿಗೂ ಅಧಿಕ ಅಳತೆಯದಾಗಿದ್ದು, 800 ಕಿಲೋ ಗ್ರಾಂ ಭಾರವಿದೆ. ಈ ಸಂದರ್ಭ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಈ ಭವ್ಯವಾದ ಭಗವದ್ಗೀತೆಯನ್ನು ಅನಾವರಣ ಮಾಡುವುದು ನಿಜವಾಗಿಯೂ ವಿಶೇಷ ಸಂದರ್ಭ ಎಂದರು. ಈ ವಿಶಿಷ್ಟ ಪುಸ್ತಕವು ವಿಶ್ವಕ್ಕೆ ಭಾರತದ ಜ್ಞಾನದ ಸಂಕೇತವಾಗಲಿದೆ ಎಂದರು.ಹೊಸದಿಲ್ಲಿಯ ಇಸ್ಕಾನ್ ನ ಗೀತ ಆರಾಧನಾ ಮಹೋತ್ಸವದಲ್ಲಿ ಭಾಗಿಯಾದ ಪ್ರಧಾನಮಂತ್ರಿ
February 26th, 05:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೊಸದಿಲ್ಲಿಯ ಇಸ್ಕಾನ್ ಗ್ಲೋರಿ ಆಫ್ ಇಂಡಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ಏರ್ಪಟ್ಟ ಗೀತ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು.