ಡೆಹ್ರಾಡೂನ್ ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ದೇಶೀಯ ಉತ್ಪನ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ
December 08th, 05:11 pm
ಡೆಹ್ರಾಡೂನ್ ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರದರ್ಶಿಸಿದ ದೇಶೀಯ ಉತ್ಪನ್ನಗಳ ನೋಟದ ತುಣುಕುಗಳನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.ಹೊಸ ಸ್ಕ್ರ್ಯಾಪ್ಪಿಂಗ್ ನೀತಿಯು ಸಂಪತ್ತಿನ ತ್ಯಾಜ್ಯ ಮತ್ತು ಪಠ್ಯಕ್ರಮದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಕೊಂಡಿಯಾಗಿದೆ: ಪ್ರಧಾನಿ ಮೋದಿ
August 13th, 11:01 am
ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಾರಂಭಿಸುವಾಗ, ಪ್ರಧಾನಿ ಮೋದಿ ಈ ನೀತಿಯು ಆಟೋ ಕ್ಷೇತ್ರಕ್ಕೆ ಮತ್ತು ಹೊಸ ಭಾರತದ ಚಲನಶೀಲತೆಗೆ ಹೊಸ ಗುರುತನ್ನು ನೀಡಲಿದೆ ಎಂದು ಹೇಳಿದರು. ಅವರು ಹೇಳಿದರು, ಚಲನಶೀಲತೆಯಲ್ಲಿ ಆಧುನಿಕತೆ, ಪ್ರಯಾಣ ಮತ್ತು ಸಾರಿಗೆಯ ಹೊರೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. 21 ನೇ ಶತಮಾನದ ಭಾರತವು ಸ್ವಚ್ಛ, ದಟ್ಟಣೆ ಮುಕ್ತ ಮತ್ತು ಅನುಕೂಲಕರ ಚಲನಶೀಲತೆಯ ಗುರಿಯಾಗಿದೆ, ಇದು ಇಂದಿನ ಅಗತ್ಯ .ಗುಜರಾತ್ ನ ಹೂಡಿಕೆದಾರರ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
August 13th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ನ ಹೂಡಿಕೆದಾರರ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಸ್ವಯಂಪ್ರೇರಿತ ವಾಹನ ಆಧುನೀಕರಣ ಕಾರ್ಯಕ್ರಮ ಅಥವಾ ವಾಹನ ಗುಜರಿ ನೀತಿಯಡಿಯಲ್ಲಿ ವಾಹನ ಗುಜರಿ ಮೂಲಸೌಕರ್ಯ ಸ್ಥಾಪನೆಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಈ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲದೆ ಅಲ್ಲಂಗ್ ನಲ್ಲಿ ಸಮಗ್ರ ಗುಜರಿ ತಾಣ ಅಭಿವೃದ್ಧಿಗೆ ಹಡಗು ಒಡೆಯುವ ಉದ್ಯಮದ ಜತೆ ಸಮನ್ವಯ ಸಾಧಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹಾಗೂ ಗುಜರಾತ್ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಆಗಸ್ಟ್ 13ರಂದು ಗುಜರಾತ್ ನ ಹೂಡಿಕೆದಾರರ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ
August 11th, 09:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ಆಗಸ್ಟ್ 13ರಂದು ಬೆಳಗ್ಗೆ 11 ಗಂಟೆಗೆ ಗುಜರಾತ್ನಲ್ಲಿ ನಡೆಯಲಿರುವ ಹೂಡಿಕೆದಾರರ ಶೃಂಗಸಭೆ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ವಾಹನ ಗುಜರಿ(ನಿರುಪಯುಕ್ತಗೊಳಿಸುವುದು) ನೀತಿ ಅಥವಾ ಸ್ವಯಂಪ್ರೇರಿತ ವಾಹನ ಆಧುನೀಕರಣ ಕಾರ್ಯಕ್ರಮದಡಿ ವಾಹನ ಗುಜರಿ (ಸ್ಕ್ರಾಪಿಂಗ್ ) ಮೂಲಸೌಕರ್ಯ ಸ್ಥಾಪನೆಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಈ ಶೃಂಗಸಭೆ ಆಯೋಜಿಸಲಾಗಿದೆ. ಅಲ್ಲದೆ ಅಲಾಂಗ್ ನಲ್ಲಿ ಹಡಗುಗಳನ್ನು ಒಡೆಯುವ ಉದ್ಯಮದ ಜೊತೆಗೆ ಸಮಗ್ರ ಗುಜರಿ ತಾಣ ಅಭಿವೃದ್ಧಿಗೆ ಸಮನ್ವಯ ಸಾಧಿಸಲು ಒತ್ತು ನೀಡಲಾಗುವುದು."ಡೆಸ್ಟಿನೇಷನ್ ಉತ್ತರಾಖಂಡ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಧಾನಮಂತ್ರಿ : ಅಕ್ಟೋಬರ್ 7ರಂದು ಹೂಡಿಕೆದಾರರ ಶೃಂಗಸಭೆ 2018 "
October 06th, 06:55 pm
ಪ್ರಧಾನಿ, ಶ್ರೀ ನರೇಂದ್ರ ಮೋದಿ, ಡೆಸ್ಟಿನೇಷನ್ ಉತ್ತರಾಖಂಡ್ ನಲ್ಲಿ ಪಾಲ್ಗೊಳ್ಳಲಿದ್ದಾರೆ : 2018 ರ ಅಕ್ಟೋಬರ್ 7 ರಂದು ಡೆಹ್ರಾಡೂನ್ ನಲ್ಲಿ ನಡೆಯಲಿದೆ ಹೂಡಿಕೆದಾರರ ಶೃಂಗಸಭೆ 2018.