ದೆಹಲಿಯ ಕೆಂಪು ಕೋಟೆಯಲ್ಲಿ ಇಂಡಿಯಾ ಆರ್ಟ್, ಆರ್ಕಿಟೆಕ್ಚರ್ ಮತ್ತು ಡಿಸೈನ್ ಬಿನಾಲೆ 2023 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

December 08th, 06:00 pm

ಕೆಂಪು ಕೋಟೆಯ ಈ ಅಂಗಳವು ಸ್ವತಃ ಐತಿಹಾಸಿಕವಾಗಿದೆ. ಈ ಕೋಟೆ ಕೇವಲ ಕಟ್ಟಡವಲ್ಲ; ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸ್ವಾತಂತ್ರ್ಯದ ಮೊದಲು ಮತ್ತು ನಂತರ ಹಲವಾರು ತಲೆಮಾರುಗಳು ಕಳೆದಿವೆ, ಆದರೆ ಕೆಂಪು ಕೋಟೆಯು ಸ್ಥಿರ ಮತ್ತು ಅಳಿಸಲಾಗದು. ಈ ವಿಶ್ವ ಪರಂಪರೆಯ ತಾಣವಾದ ಕೆಂಪು ಕೋಟೆಗೆ ನಿಮ್ಮೆಲ್ಲರನ್ನೂ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.

ದೆಹಲಿಯ ಕೆಂಪು ಕೋಟೆಯಲ್ಲಿ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ ಅಥವಾ ಉತ್ಸವ-2023 ಉದ್ಘಾಟಿಸಿದ ಪ್ರಧಾನ ಮಂತ್ರಿ

December 08th, 05:15 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿಂದು ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ(ಐಎಎಡಿಬಿ) ಅಥವಾ ಉತ್ಸವ-2023 ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ 'ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್' ಮತ್ತು ವಿದ್ಯಾರ್ಥಿಗಳ ವಸ್ತುಪ್ರದರ್ಶನ-ಸಮುನ್ನತಿಯನ್ನು ಸಹ ಉದ್ಘಾಟಿಸಿದರು. ಕಾರ್ಯಕ್ರಮದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು. ನಂತರ ಅವರು ವಸ್ತುಪ್ರದರ್ಶನ ವೀಕ್ಷಿಸಿದರು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ವಸ್ತುಪ್ರದರ್ಶನ((ಐಎಎಡಿಬಿ)ವು ದೆಹಲಿಯ ಸಾಂಸ್ಕೃತಿಕ ಸ್ಥಳಕ್ಕೆ ಪೀಠಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಪ್ರದರ್ಶನ 2023 ಅನ್ನು ಡಿಸೆಂಬರ್ 8 ರಂದು ಉದ್ಘಾಟಿಸಲಿರುವ ಪ್ರಧಾನಮಂತ್ರಿ

December 07th, 02:13 pm

ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಪ್ರದರ್ಶನ (ಐಎಎಡಿಬಿ) 2023 ಅನ್ನು 2023 ರ ಡಿಸೆಂಬರ್ 8 ರಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಕೆಂಪು ಕೋಟೆಯಲ್ಲಿ ಆತ್ಮನಿರ್ಭರ ಭಾರತ ವಿನ್ಯಾಸ ಕೇಂದ್ರವನ್ನು ಮತ್ತು ವಿದ್ಯಾರ್ಥಿಗಳಿಗಾಗಿ “ಸಮುನ್ನತಿ” ಎಂಬ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಮನ್ ಕಿ ಬಾತ್‌ಗಾಗಿ ಜನರು ತೋರಿದ ಪ್ರೀತಿ ಅಭೂತಪೂರ್ವ: ಪ್ರಧಾನಿ ಮೋದಿ

May 28th, 11:30 am

ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಬಾರಿಯ 'ಮನದ ಮಾತಿನ' ಸಂಚಿಕೆ 2ನೇ ಶತಕದ ಆರಂಭವಾಗಿದೆ. ಕಳೆದ ತಿಂಗಳು ನಾವೆಲ್ಲರೂ ಶತಕದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದೇವೆ. ನಿಮ್ಮ ಭಾಗವಹಿಸುವಿಕೆ ಈ ಕಾರ್ಯಕ್ರಮದ ಬಹು ದೊಡ್ಡ ಶಕ್ತಿಯಾಗಿದೆ. 100ನೇ ಸಂಚಿಕೆ ಪ್ರಸಾರವಾಗುವ ಸಮಯದಲ್ಲಿ ಸಂಪೂರ್ಣ ದೇಶ ಒಂದು ಸೂತ್ರದಲ್ಲಿ ಬಂಧಿಸಿದಂತಾಗಿತ್ತು. ನಮ್ಮ ಸ್ವಚ್ಛತಾ ಕರ್ಮಚಾರಿ ಸಹೋದರ ಮತ್ತು ಸಹೋದರಿಯರು ಅಥವಾ ವಿವಿಧ ಕ್ಷೇತ್ರಗಳ ಅನುಭವಿಗಳಾಗಿರಲಿ, 'ಮನದ ಮಾತು' ಎಲ್ಲರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. 'ಮನದ ಮಾತಿಗೆ' ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಅದು ಭಾವುಕರನ್ನಾಗಿಸುವಂತಿದೆ. 'ಮನದ ಮಾತು' ಪ್ರಸಾರವಾದಾಗ, ಪ್ರಪಂಚದ ವಿವಿಧ ದೇಶಗಳಲ್ಲಿ, ಬೇರೆ ಬೇರೆ ಸಮಯಕ್ಕೆ ಅಂದರೆ, ಎಲ್ಲೋ ಸಂಜೆ ಮತ್ತು ಎಲ್ಲೋ ತಡರಾತ್ರಿಯಾಗಿತ್ತು, ಇದನ್ನು ಲೆಕ್ಕಿಸದೆ, 100 ನೇ ಸಂಚಿಕೆಯನ್ನು ಹೆಚ್ಚಿನ ಸಂಖ್ಯೆಯ ಜನರು ಆಲಿಸಲು ಸಮಯ ಮೀಸಲಿಟ್ಟರು. ನಾನು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ನ್ಯೂಜಿಲೆಂಡ್‌ನ ಆ ವೀಡಿಯೊವನ್ನು ಕೂಡ ನೋಡಿದೆ, ಅದರಲ್ಲಿ 100 ವರ್ಷದ ತಾಯಿಯೊಬ್ಬರು ಆಶೀರ್ವಾದ ನೀಡುತ್ತಿದ್ದರು. ದೇಶ ವಿದೇಶದ ಜನರು 'ಮನದ ಮಾತಿನ' ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ರಚನಾತ್ಮಕ ವಿಶ್ಲೇಷಣೆಯನ್ನು ಸಹ ಮಾಡಿದ್ದಾರೆ. ‘ಮನದ ಮಾತಿನಲ್ಲಿ’ ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತ್ರ ಚರ್ಚೆಯಾಗಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಆಶೀರ್ವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.

ಮೇ 18ರಂದು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋ 2023 ಉದ್ಘಾಟಿಸಲಿರುವ ಪ್ರಧಾನಮಂತ್ರಿ

May 16th, 06:56 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಪ್ರಗತಿ ಮೈದಾನದಲ್ಲಿ ಮೇ 18 ರಂದು ಬೆಳಿಗ್ಗೆ 10:30 ಕ್ಕೆ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋ 2023 ಅನ್ನು ಉದ್ಘಾಟಿಸಲಿದ್ದಾರೆ.