ಅಹಮದಾಬಾದ್ ಅಂತಾರಾಷ್ಟ್ರೀಯ ಫಲಪುಷ್ಪ ಪ್ರದರ್ಶನದ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
January 04th, 04:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಹಮದಾಬಾದ್ ಅಂತಾರಾಷ್ಟ್ರೀಯ ಫಲಪುಷ್ಪ ಪ್ರದರ್ಶನದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಪ್ರದರ್ಶನದ ಬೆಳವಣಿಗೆಯನ್ನು ಗಮನಿಸುತ್ತಿರುವುದರಿಂದ ಈ ಪ್ರದರ್ಶನದೊಂದಿಗೆ ನನಗೆ ಬಲವಾದ ನಂಟಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ. ಇಂತಹ ಪ್ರದರ್ಶನಗಳು ಪ್ರಕೃತಿಯ ಸೌಂದರ್ಯವನ್ನು ವೈಭವೀಕರಿಸಿ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.