ನೈಜೀರಿಯಾ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅಧಿಕೃತ ಮಾತುಕತೆ
November 17th, 06:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17-18 ನವೆಂಬರ್ 2024 ರಿಂದ ನೈಜೀರಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ನೈಜೀರಿಯಾದ ಅಧ್ಯಕ್ಷ ಶ್ರೀ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದರು. ಇಂದು ಅಬುಜಾದಲ್ಲಿ ರಾಜ್ಯ ಭವನಕ್ಕೆ ಆಗಮಿಸಿದ ಪ್ರಧಾನಿಯವರಿಗೆ 21 ಗನ್ ಸೆಲ್ಯೂಟ್‌ನೊಂದಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು.ವಿಶ್ವ ಸಿಂಹ ದಿನದ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಮಂತ್ರಿ
August 10th, 09:03 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಶ್ವ ಸಿಂಹ ದಿನದ ಶುಭ ಸಂದರ್ಭದಲ್ಲಿ, ಸಿಂಹ ಸಂರಕ್ಷಣೆ ಮತ್ತು ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. 2024ರ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯನ್ನು ಶ್ರೀ ಮೋದಿಯವರು ಪ್ರಸ್ತಾಪಿಸಿದ್ದು, ದೊಡ್ಡ ಬೆಕ್ಕುಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ. ಇದಕ್ಕಾಗಿ ವಿಶ್ವದಾದ್ಯಂತ ದೊರೆತ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.ಕೇಂದ್ರ ಸಚಿವ ಸಂಪುಟದಿಂದ ಇಂಟರ್ ನ್ಯಾಶನಲ್ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಸ್ಥಾಪನೆಗೆ ಅನುಮೋದನೆ
February 29th, 04:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2023-24 ರಿಂದ 2027-28 ರವರೆಗಿನ ಐದು ವರ್ಷಗಳ ಅವಧಿಗೆ ರೂ.150 ಕೋಟಿಗಳ ಒಂದು ಬಾರಿಯ ಬಜೆಟ್ ಬೆಂಬಲದೊಂದಿಗೆ ಇಂಟರ್ ನ್ಯಾಶನಲ್ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಸ್ಥಾಪನೆಗೆ ಅನುಮೋದನೆ ನೀಡಿದೆ. ಇದರ ಪ್ರಧಾನ ಕಛೇರಿ ಭಾರತದಲ್ಲಿರುತ್ತದೆ.There is continuous progress in bilateral trade, investment between India and Kenya: PM Modi
December 05th, 01:33 pm
Addressing the event during the visit of the President of Kenya to India, PM Modi said, Africa has always been given high priority in India's foreign policy. Over the past decade, we have strengthened our collaboration with Africa in mission mode. I am confident that President Ruto's visit will not only enhance our bilateral relations but also provide new impetus to our engagement with the entire African continent.ತಾಂಜಾನಿಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆಯ ಅನುವಾದ
October 09th, 12:00 pm
ಮೊದಲನೆಯದಾಗಿ, ನಾನು ಅಧ್ಯಕ್ಷರಿಗೆ ಮತ್ತು ಅವರ ನಿಯೋಗಕ್ಕೆ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಇದು ತಾಂಜಾನಿಯಾದ ಅಧ್ಯಕ್ಷರಾಗಿ ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿದೆ. ಆದರೆ ಅವರು ಭಾರತ ಮತ್ತು ಅದರ ಜನರೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದಾರೆ.15 ನೇ ಬ್ರಿಕ್ಸ್ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
August 23rd, 03:30 pm
15ನೇ ಬ್ರಿಕ್ಸ್ ಶೃಂಗಸಭೆಯ ಅದ್ಧೂರಿ ಆಯೋಜನೆ ಮತ್ತು ನಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ನಾನು ಮತ್ತೊಮ್ಮೆ ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ರಾಮಾಫೋಸಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ.ಹವಾಮಾನ ಬಿಕ್ಕಟ್ಟಿನೊಂದಿಗೆ ಜಗತ್ತು ಹೋರಾಡುತ್ತಿರುವಾಗ ಪರಿಸರಕ್ಕಾಗಿ ಜೀವನ ಶೈಲಿಯನ್ನು ಪ್ರಾರಂಭಿಸಿದ್ದೇವೆ ಮತ್ತು ದಾರಿ ತೋರಿಸಿದ್ದೇವೆ - ಜೀವನ [ಲೈಫ್ ಮಿಷನ್ ಇನಿಷಿಯೇಟೀವ್] ಅಭಿಯಾನ ಉಪಕ್ರಮ
August 15th, 05:08 pm
ನಾವು ಜಿ20 ಶೃಂಗಸಭೆಗಾಗಿ “ಒಂದು ಪ್ರಪಂಚ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದ್ದೇವೆ ಮತ್ತು ಅ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.ವಿಶ್ವ ಪರಿಸರ ದಿನ 2023ರ ಪ್ರಯುಕ್ತ ಪ್ರಧಾನ ಮಂತ್ರಿಗಳ ವಿಡಿಯೋ ಸಂದೇಶದ ಇಂಗ್ಲಿಷ್ ಭಾಷಣದ ವಿವರ
June 05th, 03:00 pm
ವಿಶ್ವ ಪರಿಸರ ದಿನಾಚರಣೆಯಂದು ನಿಮ್ಮೆಲ್ಲರಿಗೂ, ದೇಶ ಹಾಗೂ ಜಗತ್ತಿನಾದ್ಯಂತ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಏಕ ಬಳಕೆ ಪ್ಲಾಸ್ಟಿಕ್ ಬಳಕೆ ತೊಡೆದು ಹಾಕುವುದು ಈ ವರ್ಷದ ಪರಿಸರ ದಿನದ ಧ್ಯೇಯವಾಗಿದೆ. ಈ ಜಾಗತಿಕ ಉಪಕ್ರಮಕ್ಕೂ ಮೊದಲೇ ಭಾರತದವು ಕಳೆದ 4-5 ವರ್ಷಗಳಿಂದ ಈ ವಿಚಾರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಹಿಂದೆ ಅಂದರೆ 2018ರ ಆರಂಭದಲ್ಲೇ ಭಾರತವು ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಎರಡು ಹಂತದ ಪ್ರಯತ್ನ ಆರಂಭಿಸಿತು. ಒಂದೆಡೆ ಏಕ ಬಳಕೆ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿದ್ದರೆ ಮತ್ತೊಂದೆಡೆ ಪ್ಲಾಸ್ಟಿಕ್ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಯನ್ನು ಕಡ್ಡಾಯಗೊಳಿಸಲಾಗಿತು. ಇದರ ಪರಿಣಾಮವಾಗಿ ದೇಶದಲ್ಲಿ ಸುಮಾರು 30 ಲಕ್ಷ ಟನ್‌ನಷ್ಟು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಉತ್ಪನ್ನಗಳನ್ನು ಕಡ್ಡಾಯವಾಗಿ ಮರುಬಳಕೆ ಮಾಡಲಾಗುತ್ತಿದೆ. ಇದು ದೇಶದಲ್ಲಿ ವಾರ್ಷಿಕವಾಗಿ ಉತ್ಪತ್ತಿಯಾಗುವ ಶೇ. 75ರಷ್ಟು ಪ್ಲಾಸ್ಟಿಕ್ ತ್ಯಾಜ್ಯದಷ್ಟಾಗಿದೆ. ಈ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಪ್ರಕ್ರಿಯೆಯಲ್ಲಿ 10000ಕ್ಕೂ ಹೆಚ್ಚು ಉತ್ಪಾದಕರು, ಆಮದುದಾರರು, ಪ್ರತಿಷ್ಠಿತ ಬ್ರ್ಯಾಂಡ್‌ನ ಮಾಲೀಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ವಿಶ್ವ ಪರಿಸರ ದಿನವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಪ್ರಧಾನಿ ಭಾಷಣ
June 05th, 02:29 pm
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಶ್ವ ಪರಿಸರ ದಿನದಂದು ವಿಶ್ವದ ಪ್ರತಿಯೊಂದು ದೇಶಕ್ಕೂ ತಮ್ಮ ಶುಭಾಶಯಗಳನ್ನು ತಿಳಿಸಿದರು. ಈ ವರ್ಷದ ಪರಿಸರ ದಿನದ ಘೋಷ ವಾಕ್ಯ ಏಕ-ಬಳಕೆಯ ಪ್ಲಾಸ್ಟಿಕ್ ತೊಡೆದುಹಾಕಲು ಅಭಿಯಾನದ ಕುರಿತು ಒತ್ತಿ ಹೇಳಿದ ಅವರು, ಭಾರತವು ಕಳೆದ 4-5 ವರ್ಷಗಳಿಂದ ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಭಾರತವು 2018ರಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡಲು ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಒಂದೆಡೆ, ನಾವು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದೇವೆ, ಮತ್ತೊಂದೆಡೆ, ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು. ಆ ಕಾರಣದಿಂದಾಗಿ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ವಾರ್ಷಿಕ ಪ್ಲಾಸ್ಟಿಕ್ ತ್ಯಾಜ್ಯದ ಶೇಕಡ 75 ರಷ್ಟಿರುವ ಸುಮಾರು 30 ಲಕ್ಷ ಟನ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನ್ನು ಭಾರತದಲ್ಲಿ ಕಡ್ಡಾಯವಾಗಿ ಮರುಬಳಕೆ ಮಾಡಲಾಗುತ್ತಿದೆ ಮತ್ತು ಸುಮಾರು 10 ಸಾವಿರ ಉತ್ಪಾದಕರು, ಆಮದುದಾರರು ಮತ್ತು ಬ್ರ್ಯಾಂಡ್‌ಗಳು ಬಂದಿವೆ ಇದರ ವ್ಯಾಪ್ತಿಗೆ ಬಂದಿವೆ ಎಂದು ಪ್ರಧಾನಿ ಹೇಳಿದರು.