ಗುಜರಾತ್‌ನ ದಾಹೋದ್‌ನಲ್ಲಿಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿಪ್ರಧಾನ ಮಂತ್ರಿಯ ಅವರ ಭಾಷಣದ ಕನ್ನಡ ಅನುವಾದ

April 20th, 09:49 pm

ಮೊದಲನೆಯದಾಗಿ, ನಾನು ದಾಹೋದ್‌ನ ಜನರ ಕ್ಷ ಮೆಯಾಚಿಸಲು ಬಯಸುತ್ತೇನೆ. ಆರಂಭದಲ್ಲಿ, ನಾನು ಸ್ವಲ್ಪ ಸಮಯದವರೆಗೆ ಹಿಂದಿಯಲ್ಲಿ ಮಾತನಾಡುತ್ತೇನೆ ಮತ್ತು ಅದರ ನಂತರ ನಾನು ನನ್ನ ಮಾತೃಭಾಷೆಯಲ್ಲಿಮಾತನಾಡುತ್ತೇನೆ.

ಪ್ರಧಾನ ಮಂತ್ರಿ ಮೋದಿಯವರು ಗುಜರಾತ್‌ನ ದಾಹೋದ್ ಮತ್ತು ಪಂಚಮಹಲ್‌ನಲ್ಲಿ 22000 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು

April 20th, 04:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಹೋದ್‌ನಲ್ಲಿ ನಡೆದ ಆದಿಜಾತಿ ಮಹಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ಸುಮಾರು 22,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. 1400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಸುಮಾರು 840 ಕೋಟಿ ರೂಪಾಯಿ ವೆಚ್ಚದಲ್ಲಿ ನರ್ಮದಾ ನದಿಯ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾದ ದಾಹೋದ್ ಜಿಲ್ಲಾ ದಕ್ಷಿಣ ಪ್ರದೇಶದ ಪ್ರಾದೇಶಿಕ ನೀರು ಸರಬರಾಜು ಯೋಜನೆಯನ್ನು ಅವರು ಉದ್ಘಾಟಿಸಿದರು. ಇದು ದಾಹೋದ್ ಜಿಲ್ಲೆ ಮತ್ತು ದೇವಗಢ್ ಬರಿಯಾ ನಗರದ ಸುಮಾರು 280 ಹಳ್ಳಿಗಳ ನೀರು ಸರಬರಾಜಿನ ಅಗತ್ಯಗಳನ್ನು ಪೂರೈಸುತ್ತದೆ. ಪ್ರಧಾನಮಂತ್ರಿಯವರು ಸುಮಾರು 335 ಕೋಟಿ ರೂಪಾಯಿ ಮೌಲ್ಯದ ದಾಹೋದ್ ಸ್ಮಾರ್ಟ್ ಸಿಟಿಯ ಐದು ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳಲ್ಲಿ ಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್ (ಐಸಿಸಿಸಿ) ಕಟ್ಟಡ, ಪ್ರವಾಹ ನೀರಿನ ಒಳಚರಂಡಿ ವ್ಯವಸ್ಥೆ, ಒಳಚರಂಡಿ ಕಾಮಗಾರಿಗಳು, ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆ ಸೇರಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳ 10,000 ಬುಡಕಟ್ಟು ಜನರಿಗೆ 120 ಕೋಟಿ ರೂಪಾಯಿಗಳ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರಧಾನಮಂತ್ರಿಯವರು 66 ಕೆವಿ ಘೋಡಿಯಾ ಸಬ್ ಸ್ಟೇಷನ್, ಪಂಚಾಯತ್ ಮನೆಗಳು, ಅಂಗನವಾಡಿಗಳು ಮತ್ತು ಇತರವುಗಳನ್ನು ಉದ್ಘಾಟಿಸಿದರು.

ಏಪ್ರಿಲ್‌ 18ರಿಂದ 20 ರವರೆಗೆ ಪ್ರಧಾನಮಂತ್ರಿ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ

April 16th, 02:36 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಏಪ್ರಿಲ್‌ 18 ರಿಂದ 20 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಏಪ್ರಿಲ್‌ 18 ರಂದು ಸುಮಾರು ಸಂಜೆ 6 ಗಂಟೆಗೆ ಪ್ರಧಾನಮಂತ್ರಿ ಅವರು ಗಾಂಧಿನಗರದಲ್ಲಿರುವ ಶಾಲೆಗಳ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್‌ 19 ರಂದು, ಬೆಳಗ್ಗೆ 9:40 ರ ಸುಮಾರಿಗೆ, ಅವರು ಬನಸ್ಕಾಂತದ ದಿಯೋದರ್‌ನಲ್ಲಿರುವ ಬನಾಸ್‌ ಡೈರಿ ಸಂಕುಲ್‌ನಲ್ಲಿ ಬಹುವಿಧದ ಅಭಿವೃದ್ಧಿ ಯೋಜನೆಗಳ ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.