ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್ ಕಾರ್ಯಾರಂಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣ

ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್ ಕಾರ್ಯಾರಂಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣ

January 15th, 11:08 am

ಮಹಾರಾಷ್ಟ್ರದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಸಿಪಿ ರಾಧಾಕೃಷ್ಣನ್ ಅವರು, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ, ಶ್ರೀ ದೇವೇಂದ್ರ ಫಡ್ನವೀಸ್ ಅವರು, ಮಂತ್ರಿ ಪರಿಷತ್ತಿನಲ್ಲಿ ನನ್ನ ಹಿರಿಯ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ಅವರು, ಸಂಜಯ್ ಸೇಠ್ ಜಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಅವರೊಂದಿಗೆ ಇಂದು ನಮ್ಮ ಇಬ್ಬರು ಉಪಮುಖ್ಯಮಂತ್ರಿಗಳಾದ. ಉಪಮುಖ್ಯಮಂತ್ರಿ ಶ್ರೀ.ಏಕನಾಥ ಶಿಂಧೆಯವರು, ಶ್ರೀ ಅಜಿತ್ ಪವಾರ್ ಅವರು, CDS, CNS, ಎಲ್ಲ ನೌಕಾ ಸಿಬ್ಬಂದಿ, ಮಡಗಾಂವ್ ನೌಕಾನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಹೋದ್ಯೋಗಿಗಳೇ, ಇತರ ಆಹ್ವಾನಿತರೆ, ಮಹಿಳೆಯರೇ ಮತ್ತು ಮಹನೀಯರೇ,

ಮುಂಚೂಣಿ ಯುದ್ಧ ನೌಕೆಗಳಾದ ಐ ಎನ್ ಎಸ್ ಸೂರತ್, ಐ ಎನ್ ಎಸ್ ನೀಲಗಿರಿ ಮತ್ತು ಐ ಎನ್ ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಮುಂಚೂಣಿ ಯುದ್ಧ ನೌಕೆಗಳಾದ ಐ ಎನ್ ಎಸ್ ಸೂರತ್, ಐ ಎನ್ ಎಸ್ ನೀಲಗಿರಿ ಮತ್ತು ಐ ಎನ್ ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

January 15th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈಯ ನೌಕಾ ಹಡಗುಕಟ್ಟೆಯಲ್ಲಿ ಮೂರು ಮುಂಚೂಣಿ ನೌಕಾ ಯುದ್ಧ ನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಜನವರಿ 15 ಅನ್ನು ಸೇನಾ ದಿನವಾಗಿ ಆಚರಿಸಲಾಗುತ್ತದೆ ಮತ್ತು ರಾಷ್ಟ್ರದ ಸುರಕ್ಷತೆ ಹಾಗು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಪ್ರತಿಯೊಬ್ಬ ಧೈರ್ಯಶಾಲಿ ಯೋಧನಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಎಲ್ಲ ವೀರ ಯೋಧರನ್ನು ಅಭಿನಂದಿಸಿದರು.

ನೈಜೀರಿಯಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ  ಅವರ ಭಾಷಣದ ಕನ್ನಡ ಅನುವಾದ

ನೈಜೀರಿಯಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

November 17th, 07:20 pm

ಇಂದು, ನೀವು ನಿಜವಾಗಿಯೂ ಅಬುಜಾದಲ್ಲಿ ಅದ್ಭುತ ವಾತಾವರಣವನ್ನು ಸೃಷ್ಟಿಸಿದ್ದೀರಿ. ನಿನ್ನೆ ಸಂಜೆಯಿಂದ ಎಲ್ಲವನ್ನೂ ನೋಡಿದಾಗ, ನಾನು ಅಬುಜಾದಲ್ಲಿಲ್ಲ ಆದರೆ ಭಾರತದ ನಗರದಲ್ಲಿ ಇದ್ದೇನೆ ಎಂದು ಅನಿಸುತ್ತದೆ. ನಿಮ್ಮಲ್ಲಿ ಅನೇಕರು ಲಾಗೋಸ್, ಕಾನೊ, ಕಡುನಾ ಮತ್ತು ಪೋರ್ಟ್ ಹಾರ್ಕೋರ್ಟ್ ನಿಂದ ಅಬುಜಾಗೆ ಪ್ರಯಾಣಿಸಿದ್ದೀರಿ, ವಿವಿಧ ಸ್ಥಳಗಳಿಂದ ಬಂದಿದ್ದೀರಿ ಮತ್ತು ನಿಮ್ಮ ಮುಖದ ಮೇಲಿನ ಹೊಳಪು, ನೀವು ಹೊರಸೂಸುವ ಶಕ್ತಿ ಮತ್ತು ಉತ್ಸಾಹವು ಇಲ್ಲಿರಲು ನಿಮ್ಮ ಉತ್ಸುಕತೆಯನ್ನು ಪ್ರತಿಬಿಂಬಿಸುತ್ತದೆ. ನಾನು ಕೂಡ ನಿಮ್ಮನ್ನು ಭೇಟಿಯಾಗುವ ಈ ಅವಕಾಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ನನಗೆ ಅಪಾರ ನಿಧಿಯಾಗಿದೆ. ನಿಮ್ಮ ನಡುವೆ ಇದ್ದು, ನಿಮ್ಮೊಂದಿಗೆ ಸಮಯ ಕಳೆಯುವುದರಿಂದ, ಈ ಕ್ಷಣಗಳು ನನ್ನ ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನೈಜೀರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ

November 17th, 07:15 pm

ಪ್ರಧಾನಮಂತ್ರಿಯಾಗಿ ನೈಜೀರಿಯಾಕ್ಕೆ ಇದು ಅವರ ಮೊದಲ ಭೇಟಿ ಎಂದು ಹೇಳಿದ ಶ್ರೀ ಮೋದಿ, ತಮ್ಮೊಂದಿಗೆ ಕೋಟ್ಯಂತರ ಭಾರತೀಯರ ಶುಭ ಹಾರೈಕೆಗಳನ್ನು ತಂದಿರುವೆನು ಎಂದು ಹೇಳಿದರು. ನೈಜೀರಿಯಾದಲ್ಲಿರುವ ಭಾರತೀಯರ ಪ್ರಗತಿಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ ಎಂದು ಅವರು ಹೇಳಿದರು. ಅಧ್ಯಕ್ಷ ಟಿನುಬು ಮತ್ತು ನೈಜೀರಿಯಾದ ಜನರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು ಎಲ್ಲಾ ವಿನಮ್ರತೆಯೊಂದಿಗೆ ಪ್ರಶಸ್ತಿಯನ್ನು ಕೋಟಿಗಟ್ಟಲೆ ಭಾರತೀಯರಿಗೆ ಅರ್ಪಿಸಿದರು.

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

January 22nd, 05:12 pm

ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂತರು ಮತ್ತು ಸಾಧುಗಳಿಗೆ, ಇಲ್ಲಿ ಉಪಸ್ಥಿತರಿರುವ ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಸಂಪರ್ಕ ಹೊಂದಿರುವ ಎಲ್ಲಾ ರಾಮ ಭಕ್ತರಿಗೆ ನನ್ನ ಶುಭಾಶಯಗಳು. ಎಲ್ಲರಿಗೂ ರಾಮ್ ರಾಮ್!

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

January 22nd, 01:34 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದರು. ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಶ್ರಮಜೀವಿಗಳೊಂದಿಗೆ ಶ್ರೀ ಮೋದಿ ಸಂವಾದ ನಡೆಸಿದರು.

ಕೇರಳದ ಕೊಚ್ಚಿಯಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

January 17th, 12:12 pm

ಶ್ರೀ ಸರ್ಬಾನಂದ ಸೋನೋವಾಲ್ ಜಿ ಅವರ ತಂಡ, ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಜಿ ಮತ್ತು ನಮ್ಮ ಸಹೋದ್ಯೋಗಿಗಳಾದ ಶ್ರೀ ವಿ. ಮುರಳೀಧರನ್ ಜಿ ಮತ್ತು ಶ್ರೀ ಶಾಂತನು ಠಾಕೂರ್ ಜಿ ಅವರಿಗೆ ನಾನು ನನ್ನ ಕೃತಜ್ಞತೆವ್ಯಕ್ತಪಡಿಸುತ್ತೇನೆ.

​​​​​​​ಕೇರಳದ ಕೊಚ್ಚಿಯಲ್ಲಿ 4,000 ಕೋಟಿ ರೂ.ಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ

January 17th, 12:11 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಕೊಚ್ಚಿಯಲ್ಲಿ 4,000 ಕೋಟಿ ರೂ.ಗೂ ಅಧಿಕ ಮೌಲ್ಯದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ʻಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ʼನಲ್ಲಿ(ಸಿಎಸ್‌ಎಲ್) ʻನ್ಯೂ ಡ್ರೈ ಡಾಕ್ʼ(ಎನ್‌ಡಿಡಿ), ʻಸಿಎಸ್‌ಎಲ್ʼನ ಅಂತರರಾಷ್ಟ್ರೀಯ ಹಡಗು ದುರಸ್ತಿ ಘಟಕ (ಐಎಸ್ ಆರ್‌ಎಫ್) ಮತ್ತು ಕೊಚ್ಚಿಯ ಪುದುವೈಪೀನ್‌ನಲ್ಲಿರುವ ʻಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ʼ ಸಂಸ್ಥೆಯ ʻಎಲ್‌ಪಿಜಿʼ ಆಮದು ಟರ್ಮಿನಲ್ ಅನ್ನು ಇಂದು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಪ್ರಮುಖ ಮೂಲಸೌಕರ್ಯ ಯೋಜನೆಗಳು ಭಾರತದ ಬಂದರು, ಹಡಗು ಮತ್ತು ಜಲಮಾರ್ಗ ವಲಯವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ, ಆ ಕ್ಷೇತ್ರಗಳಲ್ಲಿ ಸಾಮರ್ಥ್ಯರ್ಧನೆ ಮತ್ತು ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ನೆರವಾಗಲಿವೆ. ಆ ಮೂಲಕ ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಆಶಯಕ್ಕೆ ಇವು ಅನುಗುಣವಾಗಿವೆ.

ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ 27ನೇ ರಾಷ್ಟ್ರೀಯ ಯುವ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಕನ್ನಡ ಭಾಷಣ

January 12th, 01:15 pm

ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಅನುರಾಗ್ ಠಾಕೂರ್, ಭಾರತಿ ಪವಾರ್, ನಿಶಿತ್ ಪ್ರಾಮಾಣಿಕ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಜೀ, ಸರ್ಕಾರದ ಇತರ ಸಚಿವರು, ಗೌರವಾನ್ವಿತ ಗಣ್ಯರು ಮತ್ತು ನನ್ನ ಯುವ ಸ್ನೇಹಿತರೇ!

ಮಹಾರಾಷ್ಟ್ರದ ನಾಸಿಕ್ ನಲ್ಲಿ 27ನೇ ʻರಾಷ್ಟ್ರೀಯ ಯುವ ಉತ್ಸವʼ ಉದ್ಘಾಟಿಸಿದ ಪ್ರಧಾನಿ

January 12th, 12:49 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ನಾಸಿಕ್ ನಲ್ಲಿ 27ನೇ ʻರಾಷ್ಟ್ರೀಯ ಯುವ ಉತ್ಸವʼವನ್ನು ಉದ್ಘಾಟಿಸಿದರು. ಶ್ರೀ ಮೋದಿ ಅವರು ಸ್ವಾಮಿ ವಿವೇಕಾನಂದ ಮತ್ತು ರಾಜಮಾತಾ ಜಿಜಾವು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ರಾಜ್ಯ ತಂಡದಿಂದ ಪಥಸಂಚಲನ ಹಾಗೂ ಜಿಮ್ನಾಸ್ಟಿಕ್ಸ್, ಮಲ್ಲಕಂಬ, ಯೋಗಾಸನ ಮತ್ತು ರಾಷ್ಟ್ರೀಯ ಯುವ ಉತ್ಸವ ಗೀತೆಯನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಧಾನಿಯವರು ಸಾಕ್ಷಿಯಾದರು. 'ವಿಕಸಿತ ಭಾರತ@2047- ಯುವಕರಿಗಾಗಿ, ಯುವಕರಿಂದʼ ಎಂಬ ವಿಷಯಾಧಾರಿತವಾಗಿ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನಡೆದ ʻನೌಕಾಪಡೆ ದಿನಾಚರಣೆ-2023ʼ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

December 04th, 04:35 pm

ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ರಮೇಶ್ ಅವರೇ, ಮುಖ್ಯಮಂತ್ರಿ ಶ್ರೀ ಏಕನಾಥ್ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ ಅವರೇ, ಶ್ರೀ ನಾರಾಯಣ್ ರಾಣೆ ಅವರೇ, ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರೇ, ಶ್ರೀ ಅಜಿತ್ ಪವಾರ್ ಅವರೇ, ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರೇ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರೇ, ನನ್ನ ನೌಕಾ ಪಡೆ ಸ್ನೇಹಿತರೇ ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರೇ!

ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ 2023ರ ನೌಕಾಪಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ

December 04th, 04:30 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ‘ನೌಕಾಪಡೆಯ ದಿನಾಚರಣೆ 2023’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಿಂಧುದುರ್ಗದ ತರ್ಕರ್ಲಿ ಬೀಚ್‌ನಿಂದ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನಗಳು ಮತ್ತು ವಿಶೇಷ ಪಡೆಗಳ 'ಕಾರ್ಯಾಚರಣೆ ಪ್ರದರ್ಶನಗಳನ್ನು' ಅವರು ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸಿದರು.

ಮಹಾರಾಷ್ಟ್ರಕ್ಕೆ ಡಿಸೆಂಬರ್ 4 ರಂದು ಪ್ರಧಾನಿ ಭೇಟಿ

December 02nd, 04:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2023ರ ಡಿಸೆಂಬರ್ 4 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ಧಾರೆ. ಮಧ್ಯಾಹ್ನ ಸುಮಾರು 4.15ಕ್ಕೆ ಪ್ರಧಾನಮಂತ್ರಿಗಳು ಮಹಾರಾಷ್ಟ್ರದ ಸಿಂಧುದುರ್ಗ್ ತಲುಪಲಿದ್ದು, ರಾಜ್ ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಬಳಿಕ ಅವರು, ‘ನೌಕಾ ದಿನ 2023’ ರ ಅಂಗವಾಗಿ ಸಿಂಧುದುರ್ಗ್ ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾರತೀಯ ನೌಕಾಪಡೆಯ ಹಡುಗುಗಳು, ಸಬ್ ಮರೀನ್, ವಿಮಾನ ಮತ್ತು ವಿಶೇಷ ಪಡೆಗಳ “ಆಪರೇಷನಲ್ ಡೆಮಾನ್ಸ್ ಟ್ರೇಷನ್ “ (ಕಾರ್ಯನಿರ್ವಹಣಾ ಪ್ರದರ್ಶನ) ಅನ್ನು ಸಿಂಧುದುರ್ಗ್ ನ ತರ್ಕರ್ಲಿ ಬೀಚ್ ನಿಂದ ವೀಕ್ಷಿಸಲಿದ್ದಾರೆ.

Aatmanirbharta in Defence: India First Soars as PM Modi Takes Flight in LCA Tejas

November 28th, 03:40 pm

Prime Minister Narendra Modi visited Hindustan Aeronautics Limited (HAL) in Bengaluru today, as the state-run plane maker experiences exponential growth in manufacturing prowess and export capacities. PM Modi completed a sortie on the Indian Air Force's multirole fighter jet Tejas.

Armed forces have taken India’s pride to new heights: PM Modi in Lepcha

November 12th, 03:00 pm

PM Modi addressed brave jawans at Lepcha, Himachal Pradesh on the occasion of Diwali. Addressing the jawans he said, Country is grateful and indebted to you for this. That is why one ‘Diya’ is lit for your safety in every household”, he said. “The place where jawans are posted is not less than any temple for me. Wherever you are, my festival is there. This is going on for perhaps 30-35 years”, he added.

ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ವೀರ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿದ ಪ್ರಧಾನಮಂತ್ರಿ

November 12th, 02:31 pm

ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೀಪಾವಳಿ ಹಬ್ಬ ಮತ್ತು ಯೋಧರ ಧೈರ್ಯದ ಪ್ರತಿಧ್ವನಿಯ ಸಮ್ಮಿಲನ ದೇಶದ ಪ್ರತಿಯೊಬ್ಬ ಪ್ರಜೆಗೂ ಜ್ಞಾನೋದಯದ ಕ್ಷಣವಾಗಿದೆ ಎಂದು ಅವರು ಹೇಳಿದರು. ಈಗ ಮೊದಲ ಗ್ರಾಮವೆಂದು ಪರಿಗಣಿಸಲ್ಪಟ್ಟಿರುವ ದೇಶದ ಕೊನೆಯ ಗ್ರಾಮದಿಂದ ಭಾರತದ ಗಡಿ ಪ್ರದೇಶಗಳ ಯೋಧರೊಂದಿಗೆ ಅವರು ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.

ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

October 31st, 10:00 am

ಇಲ್ಲಿ ನೆರೆದಿರುವ ಎಲ್ಲಾ ಯುವಕರು ಮತ್ತು ನಿಮ್ಮಂತಹ ಧೈರ್ಯಶಾಲಿಗಳ ಈ ಉತ್ಸಾಹವು ರಾಷ್ಟ್ರೀಯ ಏಕತಾ ದಿವಸ್‌ನ (ರಾಷ್ಟ್ರೀಯ ಏಕತಾ ದಿನ) ದೊಡ್ಡ ಶಕ್ತಿಯಾಗಿದೆ. ಒಂದು ರೀತಿಯಲ್ಲಿ, ನನ್ನ ಮುಂದೆ ಮಿನಿ ಭಾರತವನ್ನೇ ನೋಡಬಹುದು. ವಿವಿಧ ರಾಜ್ಯಗಳು, ವಿವಿಧ ಭಾಷೆಗಳು ಮತ್ತು ವಿಭಿನ್ನ ಸಂಪ್ರದಾಯಗಳು ಇಲ್ಲಿವೆ, ಆದರೆ ಇಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯು ಏಕತೆಯ ಗಟ್ಟಿಯಾದ ಎಳೆಯಿಂದ ಸಂಪರ್ಕ ಹೊಂದಿದ್ದಾನೆ. ಲೆಕ್ಕವಿಲ್ಲದಷ್ಟು ಮಣಿಗಳಿವೆ, ಆದರೆ ಹಾರವು ಒಂದೇ ಆಗಿದೆ. ಲೆಕ್ಕವಿಲ್ಲದಷ್ಟು ದೇಹಗಳಿವೆ, ಆದರೆ ಮನಸ್ಸು ಒಂದೇ ಆಗಿದೆ. ಆಗಸ್ಟ್ 15 ನಮ್ಮ ಸ್ವಾತಂತ್ರ್ಯೋತ್ಸವ ಆಚರಣೆಯ ದಿನ ಮತ್ತು ಜನವರಿ 26 ನಮ್ಮ ಗಣರಾಜ್ಯೋತ್ಸವದ ದಿನವಾಗಿದೆ, ಅದೇ ರೀತಿ ಅಕ್ಟೋಬರ್ 31 ದೇಶದ ಮೂಲೆ ಮೂಲೆಗೂ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುವ ಹಬ್ಬವಾಗಿದೆ.

ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ʻರಾಷ್ಟ್ರೀಯ ಏಕತಾ ದಿನʼದ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ

October 31st, 09:12 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻರಾಷ್ಟ್ರೀಯ ಏಕತಾ ದಿನʼದ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿಯಂದು ಏಕತಾ ಪ್ರತಿಮೆಗೆ ಅವರು ಗೌರವ ನಮನ ಸಲ್ಲಿಸಿದರು. ಬಿಎಸ್ಎಫ್ ಮತ್ತು ವಿವಿಧ ರಾಜ್ಯ ಪೊಲೀಸರ ತುಕಡಿಗಳನ್ನು ಒಳಗೊಂಡ ʻರಾಷ್ಟ್ರೀಯ ಏಕತಾ ದಿವಸ್ ಪೆರೇಡ್ʼ, ಸಂಪೂರ್ಣ ಮಹಿಳಾ ʻಸಿಆರ್‌ಪಿಎಫ್ʼ ಬೈಕ್ ಸವಾರರ ʻಡೇರ್ಡೆವಿಲ್ ಶೋʼ, ʻಬಿಎಸ್ಎಫ್‌ʼನ ಮಹಿಳಾ ಪೈಪ್ ಬ್ಯಾಂಡ್, ಗುಜರಾತ್ ಮಹಿಳಾ ಪೊಲೀಸರಿಂದ ನೃತ್ಯ ಸಂಯೋಜನೆ ಕಾರ್ಯಕ್ರಮ, ವಿಶೇಷ ಎನ್‌ಸಿಸಿ ಪ್ರದರ್ಶನ, ಶಾಲಾ ಬ್ಯಾಂಡ್‌ಗಳ ಪ್ರದರ್ಶನ, ಭಾರತೀಯ ವಾಯುಪಡೆಯ ವೈಮಾನಿಕ ಹಾರಾಟ, ʻರೋಮಾಂಚಕ ಗ್ರಾಮʼಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಗೆ ಶ್ರೀ ಮೋದಿ ಅವರು ಸಾಕ್ಷಿಯಾದರು.

ಸಮಾಜದಲ್ಲಿನ ಅನಿಷ್ಟಗಳು, ತಾರತಮ್ಯವನ್ನು ಕೊನೆಗೊಳಿಸಲು ನಾವು ಪ್ರತಿಜ್ಞೆ ತೆಗೆದುಕೊಳ್ಳಬೇಕು: ದೆಹಲಿಯ ದ್ವಾರಕಾದಲ್ಲಿ ಪ್ರಧಾನಿ ಮೋದಿ

October 24th, 06:32 pm

ದೆಹಲಿಯ ದ್ವಾರಕಾದಲ್ಲಿ ರಾಮ್ ಲೀಲಾದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ರಾವಣ ದಹನವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ವಿಜಯದಶಿಮಿಯು ಅನ್ಯಾಯದ ವಿರುದ್ಧ ನ್ಯಾಯದ ವಿಜಯದ ಹಬ್ಬವಾಗಿದೆ, ಅಹಂಕಾರದ ಮೇಲೆ ವಿನಯ ಮತ್ತು ಕೋಪದ ಮೇಲೆ ತಾಳ್ಮೆಯ ಹಬ್ಬವಾಗಿದೆ. ಇದು ಪ್ರತಿಜ್ಞೆಗಳನ್ನು ನವೀಕರಿಸುವ ದಿನವೂ ಆಗಿದೆ ಎಂದು ಹೇಳಿದರು.

ದೆಹಲಿಯ ದ್ವಾರಕಾದಲ್ಲಿ ವಿಜಯ ದಶಮಿ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

October 24th, 06:31 pm

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯದಶಮಿಯು ಅನ್ಯಾಯದ ವಿರುದ್ಧ ನ್ಯಾಯದ ವಿಜಯದ ಹಬ್ಬವಾಗಿದೆ, ಅಹಂಕಾರದ ಮೇಲೆ ವಿನಯ ಮತ್ತು ಕೋಪದ ಮೇಲೆ ತಾಳ್ಮೆಯ ಹಬ್ಬವಾಗಿದೆ. ಇದು ಸಂಕಲ್ಪಗಳನ್ನು ನವೀಕರಿಸುವ ದಿನವೂ ಆಗಿದೆ ಎಂದು ಹೇಳಿದರು.