ಭಾರತ ಮತ್ತು ಸಿಂಗಾಪುರದ ನಡುವಿನ UPI-PayNow ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್
February 21st, 11:00 am
ಭಾರತದ ಯೂನಿಫೈಡ್ ಪೆಮೆಂಟ್ ಇಂಟರ್ಫೇಸ್ (UPI) ಮತ್ತು ಸಿಂಗಾಪುರದ ಪೆ ನೌ ನಡುವಿನ ವಾಸ್ತವ ಪಾವತಿ ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮತ್ತು ಸಿಂಗಾಪುರ ಪ್ರಧಾನಿ ಶ್ರೀ ಲೀ ಸಿಯೆನ್ ಲೂಂಗ್ ಭಾಗವಹಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಮೆನನ್ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿ ಪರಸ್ಪರ ಗಡಿಯಾಚೆಗಿನ ವಹಿವಾಟು ಮಾಡಿದರು.ಉಭಯ ದೇಶಗಳ ನಡುವೆ ನೈಜ ಸಮಯದ ಪಾವತಿ ವ್ಯವಸ್ಥೆಗಳ ಸಂಪರ್ಕದ ಚಾಲನೆಗೆ ಫೆಬ್ರವರಿ 21 ರಂದು ಭಾರತ ಮತ್ತು ಸಿಂಗಾಪುರದ ಪ್ರಧಾನ ಮಂತ್ರಿಗಳು ಸಾಕ್ಷಿಯಾಗಲಿದ್ದಾರೆ
February 20th, 12:52 pm
ಭಾರತದ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮತ್ತು ಸಿಂಗಾಪುರದ ಪೇ ನೌ ನಡುವಿನ ಗಡಿಯಾಚೆಗಿನ ಸಂಪರ್ಕದ ಚಾಲನೆಗೆ ಫೆಬ್ರವರಿ 21, 2023 ರಂದು ಬೆಳಿಗ್ಗೆ 11 ಗಂಟೆಗೆ (ಭಾರತೀಯ ಕಾಲಮಾನ) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಮಂತ್ರಿ ಶ್ರೀ ಲೀ ಸಿಯೆನ್ ಲೂಂಗ್ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ. ಸಾಕ್ಷಿಯಾಗಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ (ಎಂ ಎ ಎಸ್) ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಮೆನನ್ ಅವರು ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.India regards Singapore as an essential ally in the implementation of our Look and Act East Policy: PM at Singapore
November 24th, 03:48 pm