ಭಾರತ-ಪೋಲೆಂಡ್ ನಡುವೆ ಕಾರ್ಯತಂತ್ರ ಸಹಭಾಗಿತ್ವದ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ (2024-2028)

August 22nd, 08:22 pm

ಪೋಲೆಂಡ್ ನ ವಾರ್ಸಾದಲ್ಲಿ 2024 ಆಗಸ್ಟ್ 22ರಂದು ಭಾರತ ಮತ್ತು ಪೋಲೆಂಡ್ ಪ್ರಧಾನ ಮಂತ್ರಿಗಳು ನಡೆಸಿದ ಮಾತುಕತೆ ವೇಳೆ ಸಾಧಿಸಿದ ಒಮ್ಮತಾಭಿಪ್ರಾಯದ ಮೇಲೆ ಕಾರ್ಯತಂತ್ರ ಸಹಭಾಗಿತ್ವ ಸ್ಥಾಪನೆಯಿಂದ ಉಂಟಾದ ದ್ವಿಪಕ್ಷೀಯ ಸಹಕಾರದ ಆವೇಗ ಗುರುತಿಸಿ, ಉಭಯ ನಾಯಕರು 5 ವರ್ಷಗಳ ಕ್ರಿಯಾಯೋಜನೆ(2024-2028) ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಪ್ಪಿಕೊಂಡರು. ಕ್ರಿಯಾಯೋಜನೆಯು 5 ವರ್ಷಗಳ ದ್ವಿಪಕ್ಷೀಯ ಸಹಭಾಗಿತ್ವವನ್ನು ಈ ಕೆಳಗಿನ ವಲಯಗಳಲ್ಲಿ ಆದ್ಯತೆಯಾಗಿ ರೂಪಿಸಲು ಮಾರ್ಗದರ್ಶನ ಮಾಡುತ್ತದೆ:

"ಕಾರ್ಯತಂತ್ರ ಸಹಭಾಗಿತ್ವದ ಸ್ಥಾಪನೆ" ಕುರಿತು ಭಾರತ-ಪೋಲೆಂಡ್ ಜಂಟಿ ಹೇಳಿಕೆ

August 22nd, 08:21 pm

ಪೋಲೆಂಡ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಆಗಸ್ಟ್ 21-22ರಂದು ಪೋಲೆಂಡ್‌ಗೆ ಅಧಿಕೃತ ಭೇಟಿ ನೀಡಿದರು. ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಈ ಐತಿಹಾಸಿಕ ಭೇಟಿ ನೀಡಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪೋಲೆಂಡ್ ಪ್ರಧಾನ ಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ಕನ್ನಡ ಅನುವಾದ

August 22nd, 03:00 pm

ಘನತೆವೆತ್ತ ಪ್ರಧಾನ ಮಂತ್ರಿ ಡೊನಾಲ್ಡ್ ಟಸ್ಕ್ ಅವರೇ, ಎರಡೂ ದೇಶಗಳ ಪ್ರತಿನಿಧಿಗಳೇ, ಮಾಧ್ಯಮ ಮಿತ್ರರೇ,