ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ಕನ್ನಡ ಅನುವಾದ
March 20th, 12:30 pm
ಮೊದಲಿಗೆ ನಾನು ಪ್ರಧಾನಮಂತ್ರಿ ಕಿಶಿದಾ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಪ್ರಧಾನಿ ಕಿಶಿದಾ ಮತ್ತು ನಾನು ಕಳೆದ ಒಂದು ವರ್ಷದಲ್ಲಿ ಹಲವಾರು ಬಾರಿ ಭೇಟಿಯಾಗಿದ್ದೇವೆ ಮತ್ತು ಪ್ರತಿ ಬಾರಿಯೂ, ಭಾರತ-ಜಪಾನ್ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕತೆ ಮತ್ತು ಬದ್ಧತೆ ನನ್ನ ಅನುಭವಕ್ಕೆ ಬಂದಿದೆ. ಆದ್ದರಿಂದ, ನಮ್ಮ ಸಹಕಾರದ ವೇಗವನ್ನು ಕಾಪಾಡಿಕೊಳ್ಳಲು ಅವರ ಇಂದಿನ ಭೇಟಿ ಬಹಳ ಉಪಯುಕ್ತವಾಗಿದೆ.ಜಪಾನ್ ಗೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ
May 22nd, 12:16 pm
ಜಪಾನ್ ಪ್ರಧಾನಿ ಘನತೆವೆತ್ತ ಶ್ರೀ ಫುಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ನಾನು 2022ರ ಮೇ 23 ಹಾಗು 24ರಂದು ಜಪಾನಿನ ಟೋಕಿಯೋಗೆ ಭೇಟಿ ನೀಡಲಿದ್ದೇನೆ.ದೆಹಲಿಯಲ್ಲಿ ಇಂದಿನಿಂದ 2 ದಿನಗಳ ಕಾಲ ಭಾರತ-ಜಪಾನ್ 14ನೇ ವಾರ್ಷಿಕ ಶೃಂಗಸಭೆ
March 17th, 08:29 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಪಾನ್ ಪ್ರಧಾನ ಮಂತ್ರಿ ಶ್ರೀ ಕಿಶಿದಾ ಫುಮಿಯೊ ಅವರು 14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂದಿನಿಂದ 2 ದಿನಗಳ ಅಧಿಕೃತ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಉಭಯ ನಾಯಕರು ನಡೆಸುತ್ತಿರುವ ಭಾರತದಲ್ಲಿನ ಚೊಚ್ಚಲ ಶೃಂಗಸಭೆ ಇದಾಗಿದೆ. ಈ ಮೊದಲಿನ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ 2018 ಅಕ್ಟೋಬರ್ ನಲ್ಲಿ ಟೋಕಿಯೊದಲ್ಲಿ ಜರುಗಿತ್ತು.ಜಪಾನಿನ ವಿದೇಶಾಂಗ ಸಚಿವರಿಂದ ಪ್ರಧಾನಮಂತ್ರಿ ಭೇಟಿ
January 07th, 09:39 pm
ಜಪಾನಿನ ವಿದೇಶಾಂಗ ಸಚಿವ ಘನತೆವೆತ್ತ ಶ್ರೀ ತರೊ ಕೊನೊ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಭಾರತ- ಜಪಾನ್ ವಾರ್ಷಿಕ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ಭಾಷಣ
September 14th, 05:04 pm
ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಮಾತನಾಡುತ್ತಾ, ಪ್ರಧಾನಿ ಮೋದಿ ಭಾರತ-ಜಪಾನ್ ಪಾಲುದಾರಿಕೆಯ ಹಲವು ಅಂಶಗಳಿಗೆ ಒತ್ತು ನೀಡಿದರು . ಜಪಾನ್ ಭಾರತವು ಒದಗಿಸುವ ನಮ್ಮ ಸಂಭಾವ್ಯ ಮತ್ತು ಪರಿಣಿತ ಕೈಗಳ ಗಾತ್ರ ಮತ್ತು ಪ್ರಮಾಣದೊಂದಿಗೆ ಪ್ರಯೋಜನಕಾರಿಯಾಗಿದೆ. 21 ನೇ ಶತಮಾನವು ಏಷ್ಯಾದ್ದು ಮತ್ತು ಜಾಗತಿಕ ಬೆಳವಣಿಗೆಯ ಹೊಸ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಮೋದಿ ಹೇಳಿದ್ದಾರೆ.