ಭಾರತ – ಮಧ್ಯ ಏಷ್ಯಾ ಶೃಂಗ ಸಭೆಯ ಮೊದಲ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಭಾಷಣದ ಕನ್ನಡ ಅನುವಾದ

January 27th, 04:40 pm

ಭಾರತ – ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಅರ್ಥಪೂರ್ಣ 30 ವರ್ಷಗಳು ಪೂರ್ಣಗೊಂಡಿವೆ. ಕಳೆದ ಮೂರು ದಶಕಗಳಲ್ಲಿ ನಮ್ಮ ಸಹಕಾರ ಹಲವಾರು ಯಶಸ್ವಿ ಸಾಧನೆಗಳನ್ನು ಮಾಡಿದೆ. ಮತ್ತು ಈಗ, ಈ ನಿರ್ಣಾಯಕ ಹಂತದಲ್ಲಿ ಮುಂಬರುವ ವರ್ಷಗಳಲ್ಲಿ ನಾವು ಮಹತ್ವಾಕಾಂಕ್ಷೆಯ ದೃಷ್ಟಿಯನ್ನು ವ್ಯಾಖ್ಯಾನಿಸಬೇಕಿದೆ. ಬದಲಾಗುತ್ತಿರುವ ಈ ಜಗತ್ತಿನಲ್ಲಿ ನಮ್ಮ ಜನರ, ವಿಶೇಷವಾಗಿ ಯುವ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ ದೃಷ್ಟಿಕೋನ ಹೊಂದಿದೆ.

ಭಾರತ-ಮಧ್ಯ ಏಷ್ಯಾ ವರ್ಚುವಲ್ ಶೃಂಗಸಭೆ

January 27th, 04:36 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜನವರಿ 27ರಂದು ಚೊಚ್ಚಲ ಭಾರತ-ಮಧ್ಯ ಏಷ್ಯಾ ವರ್ಚ್ಯವಲ್‌ ಶೃಂಗಸಭೆಯ ಆತಿಥ್ಯ ವಹಿಸಿದರು. ಇದರಲ್ಲಿ ಕಜಕಿಸ್ತಾನ್ ಗಣರಾಜ್ಯ, ಕಿರ್ಗಿಜ್ ಗಣರಾಜ್ಯ, ತಜಕಿಸ್ತಾನ ಗಣರಾಜ್ಯ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷರು ಭಾಗವಹಿಸಿದ್ದರು. ಈ ಮೊದಲ ಭಾರತ-ಮಧ್ಯ ಏಷ್ಯಾ ಶೃಂಗ ಸಭೆಯು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಜರುಗಿದ್ದು ವಿಶೇಷ.

ಭಾರತ - ಮಧ್ಯ ಏಷ್ಯಾ ಸಮಾವೇಶದ ಚೊಚ್ಚಲ ಸಭೆ

January 19th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಮಧ್ಯ ಏಷ್ಯಾ ಶೃಂಗಸಭೆಯ ಮೊದಲ ವರ್ಚುಯಲ್ ಸಭೆಯನ್ನು ಜನವರಿ 27ರಂದು ಆಯೋಜಿಸಲಿದ್ದಾರೆ. ಕಝಾಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ನಾಯಕರ ಮಟ್ಟದಲ್ಲಿ ನಡೆಯುತ್ತಿರುವ ಚೊಚ್ಚಲ ಸಮಾವೇಶ ಇದಾಗಿದೆ.