ಭಾರತದ ಮುಂದಿನ ಸಾವಿರ ವರ್ಷಗಳಿಗೆ ನಾವು ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ: ಆಸ್ಟ್ರಿಯಾದಲ್ಲಿ ಪ್ರಧಾನಿ ಮೋದಿ

July 10th, 11:00 pm

ವಿಯೆನ್ನಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ದೇಶವು ಸಾಧಿಸಿರುವ ಪರಿವರ್ತಕ ಪ್ರಗತಿಯ ಕುರಿತು ಮಾತನಾಡಿದ ಅವರು, ಭಾರತವು ಮುಂದಿನ ದಿನಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ - ವಿಕಸಿತ್ ಭಾರತ್ - ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ಆಸ್ಟ್ರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದರು

July 10th, 10:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಯೆನ್ನಾದಲ್ಲಿ ತಮ್ಮ ಗೌರವಾರ್ಥವಾಗಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರನ್ನು ಭಾರತೀಯರು ವಿಶೇಷ ಪ್ರೀತಿ ಮತ್ತು ಅಕ್ಕರೆಯಿಂದ ಸ್ವಾಗತಿಸಿದರು. ಆಸ್ಟ್ರಿಯನ್ ಫೆಡರಲ್ ನ ಕಾರ್ಮಿಕ ಮತ್ತು ಆರ್ಥಿಕ ಸಚಿವ ಶ್ರೀ ಮಾರ್ಟಿನ್ ಕೋಚರ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಸ್ಟ್ರಿಯಾದಾದ್ಯಂತ ನೆಲೆಸಿರುವ ಭಾರತೀಯರು ಭಾಗವಹಿಸುವಿಸಿದ್ದು ವಿಶೇಷವಾಗಿತ್ತು.

ಆಸ್ಟ್ರಿಯಾ-ಭಾರತದ ಸಿ.ಇ.ಒ.ಗಳ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

July 10th, 07:01 pm

ಮೂಲಸೌಕರ್ಯ, ಆಟೋಮೊಬೈಲ್, ಇಂಧನ, ಇಂಜಿನಿಯರಿಂಗ್ ಮತ್ತು ಸ್ಟಾರ್ಟ್-ಅಪ್‌ಗಳು ಸೇರಿದಂತೆ ವಿವಿಧ ವಲಯಗಳ ಪ್ರಮುಖ ಆಸ್ಟ್ರಿಯನ್ ಮತ್ತು ಭಾರತೀಯ ಸಿ.ಇ.ಒ.ಗಳ ತಂಡವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾದ ಚಾನ್ಸೆಲರ್ ಘನತೆವೆತ್ತ ಶ್ರೀ ಕಾರ್ಲ್ ನೆಹಮ್ಮರ್ ಅವರು ಇಂದು ಜಂಟಿಯಾಗಿ ಭಾಷಣ ಮಾಡಿದರು.