ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಜುಲೈ, 2024 ರಿಂದ ಡಿಸೆಂಬರ್, 2028 ರವರೆಗೆ ಉಚಿತ ಪೋಷಕಾಂಶ ವರ್ಧಿತ ಅಕ್ಕಿ ಪೂರೈಕೆಯನ್ನು ಮುಂದುವರಿಸಲು ಸಂಪುಟ ಅನುಮೋದಿಸಿದೆ

October 09th, 03:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಜುಲೈ, 2024 ರಿಂದ ಡಿಸೆಂಬರ್, 2028 ರವರೆಗೆ ಉಚಿತ ಪೋಷಕಾಂಶ ವರ್ಧಿತ ಅಕ್ಕಿಯ ಸಾರ್ವತ್ರಿಕ ಪೂರೈಕೆಯನ್ನು ಪ್ರಸ್ತುತ ರೂಪದಲ್ಲಿಯೇ ಮುಂದುವರಿಸಲು ಅನುಮೋದನೆ ನೀಡಿದೆ.

ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಂದ ದೇಶದ ಯುವಕರು ಪ್ರಯೋಜನ ಪಡೆದಿದ್ದಾರೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

August 25th, 11:30 am

ನನ್ನ ಪ್ರಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ಸ್ವಾಗತ. ಇಂದು ಮತ್ತೊಮ್ಮೆ ನಾವು ದೇಶದ ಸಾಧನೆಗಳು ಮತ್ತು ದೇಶದ ಜನತೆಯ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡಲಿದ್ದೇವೆ. 21 ನೇ ಶತಮಾನದ ಭಾರತದಲ್ಲಿ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ, ಇದೇ ಆಗಸ್ಟ್ 23 ರಂದು, ನಾವೆಲ್ಲರೂ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದೆವು. ನೀವೆಲ್ಲರೂ ಈ ದಿನವನ್ನು ಆಚರಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಮತ್ತೊಮ್ಮೆ ಚಂದ್ರಯಾನ-3 ರ ಯಶಸ್ಸನ್ನು ಆಚರಿಸಿರಬಹುದು. ಕಳೆದ ವರ್ಷ, ಇದೇ ದಿನದಂದು, ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿರುವ ಶಿವ-ಶಕ್ತಿ ಪಾಯಿಂಟ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು. ಭಾರತ ಈ ಅಮೋಘ ಸಾಧನೆ ಮಾಡಿದ ವಿಶ್ವದ ಮೊದಲ ದೇಶವಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಜೊತೆ ಮಾತುಕತೆ ನಡೆಸಿದ್ದಾರೆ

August 16th, 05:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೂರವಾಣಿ ಕರೆಯನ್ನು ಇಸ್ರೇಲ್ ಪ್ರಧಾನಮಂತ್ರಿ ಹೆಚ್.ಇ. ಶ್ರೀ ಬೆಂಜಮಿನ್ ನೆತನ್ಯಾಹು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದಗಳು

August 15th, 09:20 pm

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ಪ್ರಗತಿಯತ್ತ ರಾಷ್ಟ್ರದ ಪ್ರಯಾಣ ಮತ್ತು ಅದರ ಬೆಳೆಯುತ್ತಿರುವ ಜಾಗತಿಕ ಪ್ರಭಾವವನ್ನು ಒತ್ತಿ ಹೇಳಿದರು. ಪ್ರಧಾನಿಯವರು ಅಂತಾರಾಷ್ಟ್ರೀಯ ಸಂಬಂಧಗಳ ಬಲವನ್ನು ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಹಂಚಿಕೊಂಡ ದೃಷ್ಟಿಯನ್ನು ಎತ್ತಿ ತೋರಿಸಿದರು.

78 ನೇ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

August 15th, 03:04 pm

ಭಾಷಣದ ಮುಖ್ಯಾಂಶಗಳು ಈ ಕೆಳಕಂಡಂತಿವೆ

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

August 15th, 01:09 pm

ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಅಸಂಖ್ಯಾತ ಪೂಜನೀಯ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವ ಶುಭ ದಿನ, ಶುಭ ಕ್ಷಣ ಇದಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳೊಂದಿಗೆ ಧೈರ್ಯದಿಂದ ನೇಣುಗಂಬವನ್ನು ಅಪ್ಪಿಕೊಂಡರು. ಇದು ಅವರ ಧೈರ್ಯ, ಸಂಕಲ್ಪ ಮತ್ತು ದೇಶಭಕ್ತಿ ಸದ್ಗುಣಗಳನ್ನು ಸ್ಮರಿಸುವ ಹಬ್ಬವಾಗಿದೆ. ಈ ವೀರಕಲಿಗಳಿಂದಾಗಿಯೇ ಈ ಸ್ವಾತಂತ್ರ್ಯದ ಹಬ್ಬದಂದು ಮುಕ್ತವಾಗಿ ಉಸಿರಾಡುವ ಸೌಭಾಗ್ಯ ನಮಗೆ ದಕ್ಕದೆ. ದೇಶವು ಅವರಿಗೆ ಬಹಳ ಋಣಿಯಾಗಿದೆ. ಅಂತಹ ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಬಗ್ಗೆ ನಮ್ಮ ಗೌರವ ವನ್ನು ವ್ಯಕ್ತಪಡಿಸೋಣ.

ದೆಹಲಿಯ ಕೆಂಪು ಕೋಟೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ನೋಟ

August 15th, 10:39 am

78 ನೇ ಸ್ವಾತಂತ್ರ್ಯ ದಿನದಂದು, ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಭಾರತದ ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು. 2036 ರ ಒಲಂಪಿಕ್ಸ್‌ನ ಆತಿಥ್ಯದಿಂದ ಸೆಕ್ಯುಲರ್ ಸಿವಿಲ್ ಕೋಡ್ ಅನ್ನು ಚಾಂಪಿಯನ್ ಮಾಡುವವರೆಗೆ, ಪಿಎಂ ಮೋದಿ ಅವರು ಭಾರತದ ಸಾಮೂಹಿಕ ಪ್ರಗತಿ ಮತ್ತು ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕೆ ಒತ್ತು ನೀಡಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹೊಸ ಹುರುಪಿನೊಂದಿಗೆ ಮುಂದುವರಿಸುವ ಕುರಿತು ಮಾತನಾಡಿದರು. ನಾವೀನ್ಯತೆ, ಶಿಕ್ಷಣ ಮತ್ತು ಜಾಗತಿಕ ನಾಯಕತ್ವದ ಮೇಲೆ ಕೇಂದ್ರೀಕರಿಸಿದ ಅವರು 2047 ರ ವೇಳೆಗೆ ಭಾರತವು ವಿಕಸಿತ ಭಾರತವಾಗುವುದನ್ನು ತಡೆಯಲು ಯಾವುದೂ ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 78 ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭಾರತದ ಭವಿಷ್ಯಕ್ಕಾಗಿ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಹೊಂದಿದ್ದಾರೆ

August 15th, 10:16 am

ತಮ್ಮ 78ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಅಭಿವೃದ್ಧಿಯನ್ನು ರೂಪಿಸುವ, ಹೊಸ ಆವಿಷ್ಕಾರಗಳಿಗೆ ಚಾಲನೆ ನೀಡುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿಸುವ ತಮ್ಮ ಸರ್ಕಾರದ ಭವಿಷ್ಯದ ಸರಣಿ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಭಾರತವು 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ

August 15th, 07:30 am

78 ನೇ ಸ್ವಾತಂತ್ರ್ಯ ದಿನದಂದು, ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಭಾರತದ ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು. 2036 ರ ಒಲಂಪಿಕ್ಸ್‌ನ ಆತಿಥ್ಯದಿಂದ ಸೆಕ್ಯುಲರ್ ಸಿವಿಲ್ ಕೋಡ್ ಅನ್ನು ಚಾಂಪಿಯನ್ ಮಾಡುವವರೆಗೆ, ಪಿಎಂ ಮೋದಿ ಅವರು ಭಾರತದ ಸಾಮೂಹಿಕ ಪ್ರಗತಿ ಮತ್ತು ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕೆ ಒತ್ತು ನೀಡಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹೊಸ ಹುರುಪಿನೊಂದಿಗೆ ಮುಂದುವರಿಸುವ ಕುರಿತು ಮಾತನಾಡಿದರು. ನಾವೀನ್ಯತೆ, ಶಿಕ್ಷಣ ಮತ್ತು ಜಾಗತಿಕ ನಾಯಕತ್ವದ ಮೇಲೆ ಕೇಂದ್ರೀಕರಿಸಿದ ಅವರು 2047 ರ ವೇಳೆಗೆ ಭಾರತವು ವಿಕಸಿತ ಭಾರತವಾಗುವುದನ್ನು ತಡೆಯಲು ಯಾವುದೂ ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲರಿಗೂ ಶುಭ ಕೋರಿದ್ದಾರೆ

August 15th, 07:05 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ರಾಷ್ಟ್ರಪತಿ ಜಿ ಅವರ ಭಾಷಣವು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ: ಪ್ರಧಾನಿ

August 14th, 09:05 pm

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರಪತಿಗಳ ಭಾಷಣವು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜವನ್ನು ಹೊಂದಿರುವಂತೆ ಬದಲಾಯಿಸಲು ನಾಗರಿಕರಿಗೆ ಪ್ರಧಾನ ಮಂತ್ರಿ ಮನವಿ

August 09th, 09:01 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜವನ್ನು ಹೊಂದಿರುವಂತೆ ಬದಲಾಯಿಸುಕೊಳ್ಳುವಂತೆ ನಾಗರಿಕರನ್ನು ಕೋರಿದ್ದಾರೆ. ಸ್ವಾತಂತ್ರ್ಯ ದಿನ ಆಚರಿಸಲು ಶ್ರೀ ಮೋದಿ ಅವರು ತಮ್ಮ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ್ದಾರೆ. ಹರ್ ಘರ್ ತಿರಂಗಾ ಆಂದೋಲನವನ್ನು ಸ್ಮರಣೀಯ ಜನಾಂದೋಲನವನ್ನಾಗಿ ಮಾಡಲು ಪ್ರತಿಯೊಬ್ಬರೂ ಅದೇ ರೀತಿ ಮಾಡಬೇಕೆಂದು ಅವರು ತಿಳಿಸಿದ್ದಾರೆ.

ಪಿಂಗಲಿ ವೆಂಕಯ್ಯನವರ ಜಯಂತಿಯಂದು ಪ್ರಧಾನಮಂತ್ರಿ ಅವರಿಗೆ ಗೌರವ ನಮನ ಸಲ್ಲಿಸಿದರು

August 02nd, 02:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಪಿಂಗಲಿ ವೆಂಕಯ್ಯನವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ನಮ್ಮ ರಾಷ್ಟ್ರಕ್ಕೆ ತ್ರಿವರ್ಣ ಧ್ವಜವನ್ನು ನೀಡುವಲ್ಲಿ ಪಿಂಗಲಿ ವೆಂಕಯ್ಯನವರ ಪರಿಶ್ರಮವನ್ನು ಪ್ರಧಾನಮಂತ್ರಿ ಮೋದಿಯವರು ಸ್ಮರಿಸಿದ್ದಾರೆ. ಆಗಸ್ಟ್ 9 ಮತ್ತು 15 ರ ನಡುವೆ ತ್ರಿವರ್ಣ ಧ್ವಜವನ್ನು ಹಾರಿಸಿ, https://harghartiranga.com ನಲ್ಲಿ ತಮ್ಮ ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ 'ಹರ್ ಘರ್ ತಿರಂಗಾ' ಆಂದೋಲನವನ್ನು ಬೆಂಬಲಿಸುವಂತೆ ಶ್ರೀ ಮೋದಿಯವರು ನಾಗರಿಕರನ್ನು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ ನಿಮ್ಮ ಸಲಹೆಗಳನ್ನು ನೀಡಿ

August 01st, 05:55 pm

ಭಾರತವು ಆಗಸ್ಟ್ 15, 2024 ರಂದು 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಿದ್ಧವಾಗುತ್ತಿರುವಾಗ, ಪ್ರಧಾನಿ ಮೋದಿಯವರ ಭಾಷಣಕ್ಕಾಗಿ ನಿಮ್ಮ ಅಮೂಲ್ಯವಾದ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನಿಮ್ಮನ್ನು ಆಹ್ವಾನಿಸಲಾಗಿದೆ.

ತ್ರಿವರ್ಣ ಧ್ವಜದ ವೈಭವವನ್ನು ಎತ್ತಿ ಹಿಡಿಯುವಲ್ಲಿ 'ಹರ್ ಘರ್ ತಿರಂಗ ಅಭಿಯಾನ' ಒಂದು ವಿಶಿಷ್ಟ ಹಬ್ಬವಾಗಿದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

July 28th, 11:30 am

ನನ್ನ ಪ್ರೀತಿಯ ದೇಶವಾಸಿಗಳೆ, 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ, ಆತ್ಮೀಯ ಶುಭಾಶಯಗಳು. ಈ ಕ್ಷಣದಲ್ಲಿ ಜರುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಇಡೀ ವಿಶ್ವದ ಗಮನ ಸೆಳೆದಿದೆ, ಈ ಋತುವಿನ ಫ್ಲೇವರ್ ಆಗಿದೆ. ಒಲಿಂಪಿಕ್ಸ್ ನಮ್ಮ ಆಟಗಾರರಿಗೆ ವಿಶ್ವ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕಾಗಿ ಏನನ್ನಾದರೂ ಮಾಡಲು ಅವರಿಗೆ ಅವಕಾಶ ನೀಡಿದೆ. ನಮ್ಮ ಆಟಗಾರರನ್ನು ಪ್ರೋತ್ಸಾಹಿಸೋಣ... ಭಾರತ ತಂಡಕ್ಕೆ ಚಿಯರ್!!

ಲೋಕಮಾನ್ಯ ತಿಲಕರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ

July 23rd, 09:57 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಮಾನ್ಯ ತಿಲಕರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವ ಗೌರವವನ್ನು ಹೊಂದಿದ್ದ ಪುಣೆಯಲ್ಲಿ ಕಳೆದ ವರ್ಷದ ಕಾರ್ಯಕ್ರಮದಲ್ಲಿ ಶ್ರೀ ಮೋದಿಯವರು ತಮ್ಮ ಭಾಷಣವನ್ನು ಹಂಚಿಕೊಂಡರು.

​​​​​​​ಅರಬ್‌ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ನಡೆದ ʻಅಹ್ಲನ್ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

February 13th, 11:19 pm

ಇಂದು, ನೀವು ಅಬುಧಾಬಿಯಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಅರಬ್‌ ಸಂಯುಕ್ತ ಸಂಸ್ಥಾನದ(ಯುಎಇ) ವಿವಿಧ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ನೀವು ಬಂದಿದ್ದೀರಿ, ಆದರೆ ಎಲ್ಲರ ಹೃದಯಗಳು ಪರಸ್ಪರ ಬೆಸೆದುಕೊಂಡಿವೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಮಿಡಿತವು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿʼ! ಪ್ರತಿ ಉಸಿರು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹ ಚಿರಾಯುವಾಗಲಿ! ಪ್ರತಿಯೊಂದು ಧ್ವನಿಯೂ ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿ! ನಾವು ಈ ಕ್ಷಣವನ್ನು ಪೂರ್ಣವಾಗಿ ಬದುಕಬೇಕು. ಇಂದು, ನಾವು ಜೀವಮಾನವಿಡೀ ನಮ್ಮೊಂದಿಗೆ ಉಳಿಯುವ ನೆನಪುಗಳನ್ನು ಸಂಗ್ರಹಿಸಬೇಕಾಗಿದೆ - ಜೀವಮಾನವಿಡೀ ನನ್ನೊಂದಿಗೆ ಉಳಿಯುವ ನೆನಪುಗಳು...

ಯು.ಎ.ಇ.ಯಲ್ಲಿ ನಡೆದ ಭಾರತೀಯ ಸಮುದಾಯದ -''ಅಹ್ಲಾನ್ ಮೋದಿ'' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಸಂವಾದ

February 13th, 08:30 pm

ಯು.ಎ.ಇ.ಯಲ್ಲಿನ ಭಾರತೀಯ ಸಮುದಾಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾರ್ಥವಾಗಿ ಆಯೋಜಿಸಿದ ''ಅಹ್ಲಾನ್ ಮೋದಿ'' ಕಾರ್ಯಕ್ರಮದಲ್ಲಿ ಯು.ಎ.ಇ.ಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ಯು.ಎ.ಇ.ಯ 7 ಎಮಿರೇಟ್ಸ್ ನಾದ್ಯಂತ ಭಾರತೀಯ ಅನಿವಾಸಿ ಸಮುದಾಯ (ಡಯಾಸ್ಪೊರಾ) ಬೃಹತ್ ಪ್ರಮಾಣದಲ್ಲಿ ಭಾಗವಹಿಸುವಿಕೆ ಮತ್ತು ಎಲ್ಲಾ ಸಮುದಾಯಗಳ ಭಾರತೀಯರನ್ನು ''ಅಹ್ಲಾನ್ ಮೋದಿ'' ಕಾರ್ಯಕ್ರಮ ಒಳಗೊಂಡಿತ್ತು. ಯು.ಎ.ಇ.ಯ ಪ್ರಜೆಗಳಾದ ಅರಬಿ(ಎಮಿರಾಟಿ)ಗಳು ಸಹ ಪ್ರೇಕ್ಷಕರಾಗಿ ಒಳಗೊಂಡಿದ್ದರು.

2024ರ ಜನವರಿ 2 - 3 ರಂದು ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ

December 31st, 12:56 pm

2024ರ ಜನವರಿ 2ರಂದು, ಬೆಳಗ್ಗೆ ಸುಮಾರು 10:30 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿನ ತಿರುಚಿರಾಪಳ್ಳಿಗೆ ತಲುಪುತ್ತಾರೆ. ತಿರುಚಿರಾಪಳ್ಳಿಯ ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ತಿರುಚಿರಾಪಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಉದ್ಘಾಟನೆ, ದೇಶಕ್ಕೆ ಸಮರ್ಪಣೆ ಮತ್ತು ವಿಮಾನಯಾನ, ರೈಲು, ರಸ್ತೆ, ತೈಲ ಮತ್ತು ಅನಿಲ, ಹಡಗು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ 19,850 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಜಮ್ಮುವಿನ ಗಡಿ ಪ್ರದೇಶದ ಸರಪಂಚ್ ಅವರ ಬದ್ಧತೆಗೆ ಪ್ರಧಾನ ಮಂತ್ರಿ ಶ್ಲಾಘನೆ

November 30th, 01:25 pm

ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರದಿಂದ 25 ಸಾವಿರಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿಸುವ ಕಾರ್ಯಕ್ರಮಕ್ಕೆ ಸಹ ಚಾಲನೆ ನೀಡಿದರು. ಈ ವರ್ಷ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿಯವರು ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವುದು ಮತ್ತು ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವುದು ಎರಡೂ ಉಪಕ್ರಮಗಳನ್ನು ಘೋಷಿಸಿದ್ದರು. ಈ ಕಾರ್ಯಕ್ರಮವು ಈ ಎರಡೂ ಭರವಸೆಗಳ ಈಡೇರಿಕೆಯನ್ನು ಸೂಚಿಸುತ್ತದೆ.