ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರ (ಐಇಸಿಸಿ) ಸಂಕೀರ್ಣವನ್ನು ಉದ್ಘಾಟಿಸಿ ಪ್ರಧಾನಮಂತ್ರಿಯವರ ಭಾಷಣ
July 26th, 11:28 pm
ಇಂದು, ಈ ದೈವಿಕ ಮತ್ತು ಭವ್ಯವಾದ 'ಭಾರತ ಮಂಟಪ'ವನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನು ಸಂತೋಷ, ಸಡಗರ ಮತ್ತು ಹೆಮ್ಮೆಯ ಪ್ರಜ್ಞೆಯಿಂದ ತುಂಬಿದ್ದಾನೆ. 'ಭಾರತ ಮಂಟಪ' ಭಾರತದ ಸಾಮರ್ಥ್ಯ ಮತ್ತು ಹೊಸ ಶಕ್ತಿಗೆ ಸಾಕ್ಷಿಯಾಗಲು ಆಹ್ವಾನವಾಗಿದೆ. 'ಭಾರತ ಮಂಟಪ' ಭಾರತದ ಭವ್ಯತೆ ಮತ್ತು ಅದರ ಇಚ್ಛಾಶಕ್ತಿಯ ದೃಷ್ಟಿಕೋನವಾಗಿದೆ. ಕೊರೋನಾ ಸೋಂಕಿನ ಸವಾಲಿನ ಸಮಯದಲ್ಲಿ ಎಲ್ಲೆಡೆ ಕೆಲಸ ಸ್ಥಗಿತಗೊಂಡಾಗ, ನಮ್ಮ ಕಾರ್ಮಿಕರು ಅದರ ನಿರ್ಮಾಣವನ್ನು ಪೂರ್ಣಗೊಳಿಸಲು ಹಗಲು ರಾತ್ರಿ ಕೆಲಸ ಮಾಡಿದರು.ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಭಾಂಗಣ (ಐಐಸಿಸಿ) ಸಂಕೀರ್ಣವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು
July 26th, 06:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಸಭಾಂಗಣ (ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ - ಐಐಸಿಸಿ) ಸಂಕೀರ್ಣವನ್ನು ಉದ್ಘಾಟಿಸಿದರು. ಅವರು ಜಿ-20 ನಾಣ್ಯ ಮತ್ತು ಜಿ-20 ಅಂಚೆಚೀಟಿಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ, ಡ್ರೋನ್ ಮೂಲಕ ನಡೆಸಲಾದ ವೀಕ್ಷಣಾ ವ್ಯವಸ್ಥೆ ಮೂಲಕ ಕನ್ವೆನ್ಷನ್ ಸೆಂಟರ್ ಗೆ ‘ಭಾರತ ಮಂಟಪ’ ಎಂದು ನಾಮಕರಣ ಮಾಡಲಾಯಿತು ಮತ್ತು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪ್ರಧಾನಮಂತ್ರಿ ಭಾಗವಹಿಸಿದರು. ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ, ಮತ್ತು ರಾಷ್ಟ್ರೀಯ ಯೋಜನೆಯಾಗಿ ಸುಮಾರು ರೂ 2700 ಕೋಟಿ ವೆಚ್ಚದಲ್ಲಿ ಈ ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಗತಿಯ ಹಾದಿಯ ಭಾರತವನ್ನು ಜಾಗತಿಕ ವ್ಯಾಪಾರ ತಾಣವಾಗಿ ಉತ್ತೇಜಿಸಲು ಈ ಸಂಕೀರ್ಣ ಸಹಾಯ ಮಾಡುತ್ತದೆ.