ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲೀಷ್ ಅವತರಣಿಕೆ
January 02nd, 04:45 pm
ಲಕ್ಷದ್ವೀಪವು ಅಪಾರ ಸಾಮರ್ಥ್ಯವನ್ನು ಹೊಂದಿದೆ, ಆದಾಗ್ಯೂ ಸ್ವಾತಂತ್ರ್ಯದ ನಂತರದಲ್ಲಿ ಬಹಳ ಕಾಲದವರೆಗೆ, ಅಂದರೆ ಗಮನಾರ್ಹ ಅವಧಿಯವರೆಗೆ, ಈ ಪ್ರದೇಶದ ಮೂಲಸೌಕರ್ಯಕ್ಕೆ ಸೀಮಿತ ಗಮನವನ್ನು ನೀಡಲಾಯಿತು. ಹಡಗು ಇಲ್ಲಿ ನಿರ್ಣಾಯಕ ಜೀವನಾಡಿಯಾಗಿದ್ದರೂ, ಬಂದರು ಮೂಲಸೌಕರ್ಯವು ಅಭಿವೃದ್ಧಿ ಹೊಂದಿರಲಿಲ್ಲ. ಶಿಕ್ಷಣ ಮತ್ತು ಆರೋಗ್ಯದಿಂದ ಹಿಡಿದು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಸವಾಲುಗಳು ಸ್ಪಷ್ಟವಾದ ಸಾಕ್ಷ್ಯವನ್ನು ನುಡಿಯುತ್ತಿದ್ದವು. ನಮ್ಮ ಸರ್ಕಾರವು ಈಗ ಈ ಸಮಸ್ಯೆಗಳನ್ನು ಸಕ್ರಿಯವಾಗಿ ಪರಿಹರಿಸುತ್ತಿದೆ, ಇದು ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತಿದೆ. ಲಕ್ಷದ್ವೀಪದ ಮೊದಲ ಪಿಒಎಲ್ ಬೃಹತ್ ಶೇಖರಣಾ ಸೌಲಭ್ಯವನ್ನು ಕವರತ್ತಿ ಮತ್ತು ಮಿನಿಕೋಯ್ ದ್ವೀಪಗಳಲ್ಲಿ ಸ್ಥಾಪಿಸಲಾಗಿದೆ. ಪರಿಣಾಮವಾಗಿ, ಅನೇಕ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.ಲಕ್ಷದ್ವೀಪದ ʻಅಗತ್ತಿ ವಿಮಾನ ನಿಲ್ದಾಣʼದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಅವರ ಭಾಷಣ
January 02nd, 04:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಕ್ಷದ್ವೀಪದ ʻಅಗತ್ತಿ ವಿಮಾನ ನಿಲ್ದಾಣʼಕ್ಕೆ ಆಗಮಿಸಿದ ಬೆನ್ನಲ್ಲೇ, ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಲಕ್ಷದ್ವೀಪದಲ್ಲೇ ರಾತ್ರಿ ತಂಗಲಿದ್ದಾರೆ.