ಈಶಾನ್ಯ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗಾಗಿ ಈಶಾನ್ಯ ಪ್ರದೇಶದ ರಾಜ್ಯ ಸರ್ಕಾರಗಳು ಸಮಾನ (ಈಕ್ವಿಟಿ) ಭಾಗವಹಿಸುವಿಕೆಯ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಹಾಯ ನೀಡಲು ಸಂಪುಟ ಅನುಮೋದನೆ

August 28th, 05:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈಶಾನ್ಯ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ ತಮ್ಮ ಸಮಾನ(ಈಕ್ವಿಟಿ) ಭಾಗವಹಿಸುವಿಕೆಗಾಗಿ ಎನ್ ಇಆರ್ ನ ರಾಜ್ಯ ಸರ್ಕಾರಗಳಿಗೆ ( ಎನ್ ಇಆರ್), ರಾಜ್ಯ ಘಟಕಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ನಡುವಿನ ಜಂಟಿ ಉದ್ಯಮ (ಜೆವಿ) ಸಹಯೋಗದ ಮೂಲಕ ಕೇಂದ್ರ ಹಣಕಾಸು ನೆರವು (ಸಿಎಫ್ ಎ) ಒದಗಿಸುವ ಇಂಧನ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ.

ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಸಂಸತ್ ಸದಸ್ಯರನ್ನುದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣದ ಕನ್ನಡ ಅನುವಾದ

September 19th, 11:50 am

ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಾನು ನಿಮಗೆ ಮತ್ತು ಇಡೀ ದೇಶಕ್ಕೆ ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು, ನಾವು ಒಟ್ಟಾಗಿ ಹೊಸ ಸಂಸತ್ ಕಟ್ಟಡದಲ್ಲಿ ಉಜ್ವಲ ಭವಿಷ್ಯದತ್ತ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ಇಂದು, ನಾವು ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ ಮತ್ತು ಹೊಸ ಕಟ್ಟಡಕ್ಕೆ ತೆರಳುವ ಮೊದಲು ಅದನ್ನು ಸಾಧಿಸಲು ನಮ್ಮನ್ನು ಅತ್ಯಂತ ಸಮರ್ಪಣೆ ಮತ್ತು ದೃಢನಿಶ್ಚಯದಿಂದ ಸಮರ್ಪಿಸುತ್ತಿದ್ದೇವೆ. ಗೌರವಾನ್ವಿತ ಸದಸ್ಯರೇ, ಈ ಕಟ್ಟಡ, ವಿಶೇಷವಾಗಿ ಈ ಸೆಂಟ್ರಲ್ ಹಾಲ್, ನಮ್ಮ ಭಾವನೆಗಳಿಂದ ತುಂಬಿದೆ. ಇದು ಆಳವಾದ ಭಾವನೆಗಳನ್ನು ಹುಟ್ಟುಹಾಕುತ್ತದೆ ಮತ್ತು ನಮ್ಮ ಕರ್ತವ್ಯಗಳಲ್ಲಿಯೂ ನಮ್ಮನ್ನು ಪ್ರೇರೇಪಿಸುತ್ತದೆ. ಸ್ವಾತಂತ್ರ್ಯದ ಮೊದಲು, ಈ ವಿಭಾಗವು ಒಂದು ರೀತಿಯ ಗ್ರಂಥಾಲಯವಾಗಿ ಕಾರ್ಯನಿರ್ವಹಿಸಿತು. ಆದರೆ ನಂತರ, ಇದು ಸಂವಿಧಾನ ಸಭೆಯ ಸಭೆಗಳಿಗೆ ಸ್ಥಳವಾಯಿತು. ಈ ಸಭೆಗಳಲ್ಲಿಯೇ ನಮ್ಮ ಸಂವಿಧಾನವನ್ನು ಸೂಕ್ಷ್ಮವಾಗಿ ಚರ್ಚಿಸಲಾಯಿತು ಮತ್ತು ರೂಪುಗೊಂಡಿತು. ಇಲ್ಲಿಯೇ ಬ್ರಿಟಿಷ್ ಸರ್ಕಾರವು ಅಧಿಕಾರವನ್ನು ಭಾರತಕ್ಕೆ ವರ್ಗಾಯಿಸಿತು. ಸೆಂಟ್ರಲ್ ಹಾಲ್ ಆ ಬೆಳವಣಿಗೆಗೆ ಸಾಕ್ಷಿಯಾಗಿದೆ. ಈ ಸೆಂಟ್ರಲ್ ಹಾಲ್ ನಲ್ಲಿಯೇ ಭಾರತದ ತ್ರಿವರ್ಣ ಧ್ವಜವನ್ನು ಅಪ್ಪಿಕೊಳ್ಳಲಾಯಿತು ಮತ್ತು ನಮ್ಮ ರಾಷ್ಟ್ರಗೀತೆಯನ್ನು ಅಂಗೀಕರಿಸಲಾಯಿತು. ಸ್ವಾತಂತ್ರ್ಯ ಪಡೆದ ನಂತರವೂ ಹಲವಾರು ಐತಿಹಾಸಿಕ ಸಂದರ್ಭಗಳಲ್ಲಿ, ಭಾರತದ ಭವಿಷ್ಯವನ್ನು ರೂಪಿಸುವ ಬಗ್ಗೆ ಚರ್ಚಿಸಲು, ಒಮ್ಮತವನ್ನು ತಲುಪಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಉಭಯ ಸದನಗಳು ಈ ಸೆಂಟ್ರಲ್ ಹಾಲ್ ನಲ್ಲಿ ಒಟ್ಟಿಗೆ ಸೇರಿವೆ.

ವಿಶೇಷ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನುದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

September 19th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶೇಷ ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದರು.

ಅರುಣಾಚಲ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಧಾನಿ ಟ್ವೀಟ್

April 11th, 02:33 pm

ಅರುಣಾಚಲ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಕುರಿತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮರುಟ್ವೀಟ್ ಮಾಡಿದ್ದಾರೆ;

ಎಸ್.ಜೆ.ವಿ.ಎನ್ ನಿಂದ ಹಿಮಾಚಲ ಪ್ರದೇಶದಲ್ಲಿ 382 ಮೆ.ವ್ಯಾ ಸುನ್ನಿ ಅಣೆಕಟ್ಟೆ ಜಲ ವಿದ್ಯುತ್ ಯೋಜನೆಯ ಹೂಡಿಕೆಗೆ ಅನುಮೋದನೆ

January 04th, 08:38 pm

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ಹಿಮಾಚಲ ಪ್ರದೇಶದಲ್ಲಿ 13 ಕೋಟಿ 80 ಲಕ್ಷ ರೂ. ಮೂಲಸೌಕರ್ಯದ ಭಾರತ ಸರ್ಕಾರದ ಆಯವ್ಯಯ ಬೆಂಬಲ ಸೇರಿದಂತೆ ಎಸ್.ಜೆ.ವಿ.ಎನ್. ನಿಯಮಿತದಿಂದ ಅಂದಾಜು 2614.51 ಕೋಟಿ ರೂ. ವೆಚ್ಚದಲ್ಲಿ 382 ಮೆ.ವ್ಯಾ. ಸುನ್ನಿ ಅಣೆಕಟ್ಟೆ ಜಲ ವಿದ್ಯುತ್ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಜನವರಿ, 2022 ರವರೆಗೆ ಮಾಡಲಾಗಿರುವ ಸಂಚಿತ 246 ಕೋಟಿ ರೂ. ಮೊತ್ತಕ್ಕೆ ಪೂರ್ವಾನ್ವಯ ಅನುಮೋದನೆ ನೀಡಲಾಗಿದೆ.

The next 25 years are very crucial for 130 crore Indians: PM Modi in Chamba, Himachal Pradesh

October 13th, 05:23 pm

PM Modi laid the foundation stone of two hydropower projects and launched Pradhan Mantri Gram Sadak Yojana -III in Chamba. India’s Azadi ka Amrit Kaal has begun during which we have to accomplish the goal of making, he added.

PM lays foundation stone of two hydropower projects in Chamba, Himachal Pradesh

October 13th, 12:57 pm

PM Modi laid the foundation stone of two hydropower projects and launched Pradhan Mantri Gram Sadak Yojana -III in Chamba. India’s Azadi ka Amrit Kaal has begun during which we have to accomplish the goal of making, he added.