ಹುನಾರ್ ಹಾಟ್ ದೇಶದ ಕುಶಲಕರ್ಮಿಗಳಿಗೆ ಅತ್ಯುತ್ತಮ ಅವಕಾಶವನ್ನು ನೀಡಿದೆ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಲ್ಲಿ ತಿಳಿಸಿದರು.
February 23rd, 11:30 am
ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನ’ ಮೂಲಕ, ಕಛ್ ನಿಂದ ಕೊಹಿಮಾವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದೇಶದ ಸಮಸ್ತ ನಾಗರಿಕರಿಗೆ ಮತ್ತೊಮ್ಮೆ ನಮಸ್ಕಾರ ಮಾಡಲು ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ತಮ್ಮೆಲ್ಲರಿಗೂ ನಮಸ್ಕಾರ. ನಮ್ಮ ದೇಶದ ವೈಶಾಲ್ಯತೆ ಮತ್ತು ವೈವಿಧ್ಯತೆಯನ್ನು ನೆನೆಯುವುದು, ಅದಕ್ಕೆ ತಲೆ ಬಾಗುವುದು, ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯನ್ನು ಮೂಡಿಸುತ್ತದೆ ಮತ್ತು ಈ ವೈವಿಧ್ಯತೆಯ ಅನುಭವದ ಅವಕಾಶ ಹೊಸ ಅನುಭೂತಿ ನೀಡುವ, ಆನಂದವನ್ನು ತುಂಬುವ ಹಾಗೂ ಒಂದು ಬಗೆಯ ಪ್ರೇರಣೆಯ ಪುಷ್ಪದಂತಿದೆ.ಪ್ರಧಾನಿ ಮೋದಿಯವರ ಹುನಾರ್ ಹಾತ್ ಭೇಟಿಯ ವಿಶೇಷ ಚಿತ್ರಗಳು ...
February 19th, 06:20 pm
ದೆಹಲಿಯ ಇಂಡಿಯಾ ಗೇಟ್ ಬಳಿ ಆಯೋಜಿಸಿರುವ ಹುನಾರ್ ಹಾತ್‌ಗೆ ಪ್ರಧಾನಿ ಮೋದಿ ಇಂದು ದಿಢೀರ್ ಭೇಟಿ ನೀಡಿದರು. ಕರಕುಶಲ ವಸ್ತುಗಳು, ಜವಳಿ ಮತ್ತು ಇತರ ಉತ್ಪನ್ನಗಳನ್ನು ಪ್ರದರ್ಶಿಸಲು ದೇಶಾದ್ಯಂತದ ಕುಶಲಕರ್ಮಿಗಳಿಗೆ ಹುನಾರ್ ಹಾತ್ ಒಂದು ವಿಶೇಷ ವೇದಿಕೆಯಾಗಿದೆ. ದೇಶಾದ್ಯಂತದ ಕುಶಲಕರ್ಮಿಗಳು ಭಾಗವಹಿಸುವ ಹುನಾರ್ ಹಾತ್‌ನ ಮಳಿಗೆಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದರು.ಹುನಾರ್ ಹಾತ್‌ನಲ್ಲಿ ಒಬ್ಬ ಕಲಾವಿದ ಪ್ರಧಾನಿ ಮೋದಿ ಅವರಿಗೆ ಭಾರತದ ಭೂಪಟವನ್ನು ನೀಡಿದರು.
February 19th, 06:15 pm
ಭಾರತದಾದ್ಯಂತದ ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲು ಹುನಾರ್ ಹಾತ್ ವೇದಿಕೆ ಕಲ್ಪಿಸಿದೆ. ಹುನಾರ್ ಹಾತ್ ಭೇಟಿಯ ವೇಳೆ ಪ್ರಧಾನಿ ಮೋದಿ ಹಲವಾರು ಕಲಾವಿದರೊಂದಿಗೆ ಸಂವಾದ ನಡೆಸಿದರು.ದೆಹಲಿಯ ಹುನಾರ್ ಹಾತ್‌ನಲ್ಲಿ ದಿವ್ಯಾಂಗ ಕಲಾವಿದರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
February 19th, 06:10 pm
ಹುನಾರ್ ಹಾತ್ ನಂತಹ ಪ್ರಯತ್ನಗಳು ದೇಶಾದ್ಯಂತದ ಅನೇಕ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿವೆ. ಪ್ರಧಾನಿ ಮೋದಿಯವರು ಅಂತಹ ದಿವ್ಯಾಂಗ ಕಲಾವಿದರೊಬ್ಬರನ್ನು ಭೇಟಿಯಾಗಿ ಮಾತನಾಡಿಸಿದರು. ಪ್ರಧಾನಿಯವರು ಹುನಾರ್ ಹಾತ್ ನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.‘ಹುನರ್ ಹಾತ್’: ಪ್ರಧಾನ ಮಂತ್ರಿ ಭೇಟಿ
February 19th, 03:52 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು “ಹುನರ್ ಹಾತ್” ಗೆ ಭೇಟಿ ನೀಡಿ, ದೇಶಾದ್ಯಂತ ಪಾಲ್ಗೊಂಡಿರುವ ಕುಶಲಕರ್ಮಿಗಳು, ಕರಕುಶಲಗಾರರು ಮತ್ತು ಪಾಕಶಾಲೆ ತಜ್ಞರ ಮಳಿಗೆಗಳನ್ನು ವೀಕ್ಷಿಸಿದರು.