ಹಾರ್ನ್‌ಬಿಲ್ ಉತ್ಸವ 25 ವರ್ಷಗಳನ್ನು ಪೂರೈಸಿದ ನಾಗಾಲ್ಯಾಂಡ್‌ನ ಜನತೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

December 05th, 11:10 am

ಹಾರ್ನ್‌ಬಿಲ್ ಉತ್ಸವ 25 ವರ್ಷಗಳನ್ನು ಪೂರೈಸಿದ ನಾಗಾಲ್ಯಾಂಡ್‌ನ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ಹಬ್ಬದ ವೇಳೆ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರತೆಯ ಮೇಲೆ ಗಮನಹರಿಸುತ್ತಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು. ಶ್ರೀ ನರೇಂದ್ರ ಮೋದಿ ಅವರು ಕೆಲವು ವರ್ಷಗಳ ಹಿಂದೆ ಉತ್ಸವಕ್ಕೆ ಭೇಟಿ ನೀಡಿದ ನೆನಪುಗಳನ್ನು ಸ್ಮರಿಸಿಕೊಂಡರು ಮತ್ತು ಇತರರಿಗೆ ಭೇಟಿ ನೀಡಿ ನಾಗಾ ಸಂಸ್ಕೃತಿಯ ಕಂಪನ್ನು ಅನುಭವಿಸುವಂತೆ ಕರೆ ನೀಡಿದರು.